ಅಂತರರಾಷ್ಟ್ರೀಯ

ಫ್ರೆಂಚ್ ಓಪನ್: ಸೆರೆನಾ ಹೊರಕ್ಕೆ, ಹಾಲೆಪ್ ಮುನ್ನಡೆ

ಫ್ರೆಂಚ್ ಓಪನ್: ಸೆರೆನಾ ಹೊರಕ್ಕೆ, ಹಾಲೆಪ್ ಮುನ್ನಡೆ

ಪ್ಯಾರೀಸ್, ಅಕ್ಟೋಬರ್ 1 : ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಮೂಲಕ 24 ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಎತ್ತುವ ಕನಸನ್ನು ಹೊಂದಿದ್ದ ಅಮೆರಿಕದ ಸೆರೆನಾ ವಿಲಿಯಮ್ಸ್ ಆಸೆಗೆ ಪೆಟ್ಟು ಬಿದ್ದಿದೆ. 

ಬುಧವಾರ ತಡ ರಾತ್ರಿ ನಡೆದ ಪಂದ್ಯದಲ್ಲಿ ಸೆರೆನಾ ಗಾಯದಿಂದ ಟೂರ್ನಿಯಿಂದ ಹಿಂದೆ ಸರಿದರು. ಸೆರೆನಾ ಅವರು ಟ್ವೆಟಾನಾ ಪಿರೊಂಕೋವಾ ವಿರುದ್ಧದ ಕಾದಾಟದಿಂದ ಹಿಂದೆ ಸರಿದರು. ಸೆರೆನಾ  2002, 2013, 2015ರಂದು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು. ಕಳೆದ ಮೂರು ವರ್ಷಗಳಲ್ಲಿ ಸೆರೆನಾ ಯಾವುದೇ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದಿಲ್ಲ. 

 ನಂಬರ್ 1 ಆಟಗಾರ್ತಿ ಸಿಮೋನ್ ಹಾಲೆಪ್ 6-3, 6-4 ರಿಂದ ರೊಮೇನಿಯಾ ಐರಿನಾ-ಕ್ಯಾಮೆಲಿಯಾ ಬೆಗು ರಿಂದ ಒಂದು ಗಂಟೆ 23 ನಿಮಿಷದ ಹೋರಾಟದಲ್ಲಿ ಜಯ ಸಾಧಿಸಿ ಮೂರನೇ ಸುತ್ತಿಗೆ ಪ್ರವೇಶಿಸಿದರು. 

ಉಕ್ರೇನ್ ಎಲೀನಾ ಸ್ವಿಟೋಲಿನಾ 6-3, 0-6, 6-2 ರಿಂದ ಮೆಕ್ಸಿಕೊದ ರೆನಾಟಾ ಜರಾಜಿಯಾ ಅವರ ವಿರುದ್ಧ ಜಯ ಸಾಧಿಸಿದರು. 

ಸುದ್ದಿ ಓದಿ