ಜನಪದ ಗರತಿ ಹಾಡುಗಳು ಸ್ತ್ರೀಯರ ಬದುಕಿನ ಕನ್ನಡಿಗಳು: ಡಾ. ಶರಣಮ್ಮ ಗೋರೇಬಾಳ

ಜನಪದ ಗರತಿ ಹಾಡುಗಳು ಸ್ತ್ರೀಯರ ಬದುಕಿನ ಕನ್ನಡಿಗಳು: ಡಾ. ಶರಣಮ್ಮ ಗೋರೇಬಾಳ Folk songs are mirrors of women's lives: Dr. Sharanamma Gorebala

ಧಾರವಾಡ 2 : ಜನಪದ ಗರತಿ ಹಾಡುಗಳಲ್ಲಿ ಮಹಿಳೆಯರ ಹುಟ್ಟಿನಿಂದ ಹಿಡಿದು ಸಾಯುವವರೆಗಿನ ಬದುಕಿನ ಚಿತ್ರಣವನ್ನು ಕಾಣಬಹುದು. ತವರು ಮನೆಯಲ್ಲಿ ಹೆಣ್ಣಿನ ಜೀವನ ಗಂಡನ ಮನೆಯಲ್ಲಿಯ ಜೀವನ ಕೌಟುಂಬಿಕ ಬದುಕಿನಲ್ಲಿ ಎದುರಾಗುವ ಸವಾಲುಗಳು, ಸಮಸ್ಯೆಗಳು ಸಮಾಜದ ರೀತಿ ನೀತಿ ವ್ಯವಸ್ಥೆಗಳನ್ನು ಉಲ್ಲೇಕಿಸುತ್ತ ತಿಳಿಸಿದರು. ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಏರಿ​‍್ಡಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು. ಗುರು ಸಿದ್ಧೇಶ್ವರ ಕೋ ಆಪ್ ಬ್ಯಾಂಕ್ ಲಿ. ಹುಬ್ಬಳ್ಳಿ, ಲಿಂ. ಗುರ​‍್ಪ ಮತ್ತು ಲಿಂ.ಗೌರಮ್ಮ ಬೆಲ್ಲದ, ಸುದರ್ಶನ್ ರಾಜ ಫೌಂಡೇಶನ್, ಜಿ ಎಸ್ ಪಾಟೀಲ, ದಿ.ಪ್ರೇಮಾ ನಾಗೇಶ್ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಧಾರವಾಡ ಶಹರ ತಾಲೂಕಿನ ಶಿಕ್ಷಣಾಧಿಕಾರಿಗಳಾದ ಸುಜಾತಾ ತಿಮ್ಮಾಪುರ ಅವರು ಜನಪದ ಗರತಿಯರ ಹಾಡುಗಳು ರಚನೆಗೊಳ್ಳುವ ಸಂದರ್ಭಗಳನ್ನು ತಿಳಿಸಿದರು.  

 ಜನಪದ ಸಾಹಿತ್ಯ ನೈತಿಕತೆಯನ್ನು ಬೆಳೆಸುವಲ್ಲಿ ಮುಂಚುಣಿಯಲ್ಲಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಆದ ಎಫ್ ಬಿ ಕಣವಿ , ಚಂದ್ರಶೇಖರ ಕೆಂಗಾರ ಹಾಗೂ  ಡಾ.ರಾಜಶೇಖರ ಬಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.  ಕನ್ನಡ ಜಾನಪದ ಹಾಡು ನಾಡು ನುಡಿ ಕುರಿತು ಮಹಿಳಾ ಮಂಡಳದವರು ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಮಿಳಾ ಜಕ್ಕನ್ನವರ ಪ್ರಾರ್ಥಿಸಿದರು. ಪ್ರೊ. ಕೆ ಎಸ್ ಕೌಜಲಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಚಂದ್ರಶೇಖರ ರೊಟ್ಟಿಗವಾಡ ಪ್ರಶಸ್ತಿ ಪತ್ರ ವಿತರಿಸಿದರು.  ಮಹಾಂತೇಶ ನರೇಗಲ್ ನಿರೂಪಿಸಿದರು. ಡಾ. ಎಸ್ ಎಸ್ ದೊಡಮನಿ ವಂದಿಸಿದರು. ಗುರು ತಿಗಡಿ, ಮಹಾದೇವ ಸತ್ತಿಗೇರಿ, ಬಸವರಾಜ ಗೊರವರ, ಡಾ.  ರಾಜಶೇಖರ ಬಶೆಟ್ಟಿ, ಎಚ್ ಎಸ್ ಬಡಿಗೇರ, ಎಮ್ ಸಿ ಯಲಿಗಾರ, ಚಿಂತನ ಹತ್ತಿಕಾಳ ಮುಂತಾದವರು ಉಪಸ್ಥಿತರಿದ್ದರು.