ಟ್ರ್ಯಾಕ್ಟರ-ಬೈಕ್ ಮಧ್ಯ ಭೀಕರ ಅಪಘಾತ: ಬೈಕ್ ಸವಾರರಿಗೆ ಗಂಭೀರ ಗಾಯ
ಟ್ರ್ಯಾಕ್ಟರ-ಬೈಕ್ ಮಧ್ಯ ಭೀಕರ ಅಪಘಾತ: ಬೈಕ್ ಸವಾರರಿಗೆ ಗಂಭೀರ ಗಾಯ
ಜಮಖಂಡಿ 29: ತಾಲೂಕಿನ ಜಕನೂರ ಗ್ರಾಮದಲ್ಲಿ ಟ್ರ್ಯಾಕ್ಟರ ಮತ್ತು ಬೈಕ್ ಮದ್ಯ ಭೀಕರ ಅಪಘಾತ ಸಂಭವಿಸಿದ್ದು. ಬೈಕ್ ಸವಾರರಿಗೆ ಗಂಭೀರ ಗಾಯವಾಗಿರುವ ಘಟನೆ ಜರುಗಿದೆ.
ಜಕನೂರು ಮಾರ್ಗವಾಗಿ ಲಿಂಗನೂರ ಗ್ರಾಮಕ್ಕೆ ತೆರಳುತ್ತಿದ ಬೈಕ್ ಸವಾರರು ಮುಂಭಾಗದಿಂದ ಬರುತ್ತಿದ್ದ ಟ್ರ್ಯಾಕ್ಟರ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಮಖಂಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಗಂಭಿರವಾದ ಗಾಯಗಳಾಗಿದ್ದು. ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಗಾಯಾಳುಗಳನ್ನು ಲಿಂಗನೂರ ಗ್ರಾಮದ ಪುಂಡಲಿಕ ಯಂಕಪ್ಪ ಮಾದರ(42) ಬಾಳಪ್ಪ ಪಾಂಡಪ್ಪ ಮಾದರ(28), ಸಚಿನ ಸಿರೇಶ ಮಾದರ(22)ಎಂದು ತಿಳಿದು ಬಂದಿರುತ್ತದೆ.