ರೈತರು ಹೆಚ್ಚಿನ ಕಬ್ಬು ಪೂರೈಸಿ, ಸಹಕರಿಸಿ: ಡಾ. ರಮೇಶ ದೊಡ್ಡಣ್ಣವರ
Farmers should supply more sugarcane and cooperate: Dr. Ramesh Doddannavara
ರೈತರು ಹೆಚ್ಚಿನ ಕಬ್ಬು ಪೂರೈಸಿ, ಸಹಕರಿಸಿ: ಡಾ. ರಮೇಶ ದೊಡ್ಡಣ್ಣವರ
ಕಾಗವಾಡ, 19 : ಸರ್ಕಾರದ ಆದೇಶಾನುಸಾರ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮನ್ನು ಅ. 20 ರಿಂದ 25 ರೊಳಗೆ ಪ್ರಾರಂಭಿಸಿ, 12 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದ್ದು, ಕಾರ್ಖಾನೆಗೆ ರೈತರು ಕಬ್ಬು ಪೂರೈಕೆ ಮಾಡಿ ಸಹಕರಿಸಬೇಕು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಕಬ್ಬಿಗೆ ಯೋಗ್ಯ ಬೆಲೆ ನೀಡಲಾಗುವುದೆಂದು ಶಿರಗುಪ್ಪಿ ಶುಗರ್ಸ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಡಾ. ರಮೇಶ ದೊಡ್ಡಣ್ಣವರ ತಿಳಿಸಿದ್ದಾರೆ.
ಅವರು, ರವಿವಾರ ದಿ. 19 ರಂದು ಕಾರ್ಖಾನೆಯ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಕಳೆದ ಅನೇಕ ವರ್ಷಗಳಿಂದ ರೈತರಿಗೆ ಉತ್ತಮ ಬೆಲೆ ನೀಡುವ ಜೊತೆಗೆ ಕಬ್ಬು ಪೂರೈಸಿದ 15 ದಿನಗಳ ಒಳಗಾಗಿ ಬಿಲ್ ಪಾವತಿ ಮಾಡುವ ಮೂಲಕ ರೈತರ ವಿಸ್ವಾಸಕ್ಕೆ ಪಾತ್ರರಾಗಿದ್ದೇವೆ. ಈ ವರ್ಷವೂ ಅದನ್ನು ಮುಂದು ವರೆಸಿಕೊಂಡು ಹೋಗಲಾಗುವುದು. ರೈತರು ಕಾರ್ಖಾನೆಗಳ ವಿರುದ್ಧ ಹೋರಾಟ ಮಾಡುವ ಬದಲು ಸರ್ಕಾರದ ವಿರುದ್ಧ ಹೋರಾಟ ಮಾಡಿ, ತಮ್ಮ ಸಂಕಷ್ಟಗಳನ್ನು ಮನವರಿಕೆ ಮಾಡಿ ಕೊಟ್ಟಲ್ಲಿ ರೈತರು ಬೆಳೆದ ಕಬ್ಬಿಗೆ ಯೋಗ್ಯ ಬೆಲೆ ಮತ್ತು ಕಾರ್ಖಾನೆಗಳ ಆರ್ಥಿಕ ಹೊರೆಯನ್ನು ನಿಗಿಸಬಹುದಾಗಿದೆ. ಸರ್ಕಾರದ ಧೋರಣೆಗಳು ಸ್ಥಿರವಾಗಿರದ ಕಾರಣ ಸಕ್ಕರೆ ಉದ್ಯಮ ಸಾಕಷ್ಟು ಸಂಕಷ್ಟದಲ್ಲಿದ್ದು, ಸಕ್ಕರೆ ಕಾರ್ಖಾನೆಗಳ ಪುನಃಚೇತನಕ್ಕಾಗಿ ಸೂಕ್ತ ಪಾಲಿಸಿಗಳನ್ನು ರೂಪಿಸಬೇಕೆಂದರು.
ಕಾರ್ಖಾನೆಯ ಅಧ್ಯಕ್ಷ ಕಲ್ಲಪ್ಪಣ್ಣಾ ಮಗ್ಗೆಣ್ಣವರ ಮಾತನಾಡಿ, ನಮ್ಮ ಕಾರ್ಖಾನೆಯು ಕಳೆದ ಅನೇಕ ವರ್ಷಗಳಿಂದ ಕಬ್ಬಿಗೆ ಯೋಗ್ಯ ಬೆಲೆ ನೀಡುತ್ತಾ ರೈತರ ವಿಸ್ವಾಸಕ್ಕೆ ಪಾತ್ರವಾಗಿದೆ. ಆದರೇ ಇದನ್ನು ಸಹಿಸದ ಕೆಲವರು ಕಾರ್ಖಾನೆಗಳ ವಿರದ್ಧ ಸುಳ್ಳು ವದಂತಿಗಳನ್ನು ಹಬ್ಬಿಸಿ, ಹೆಸರು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ವದಂತಿಗಳಿಗೆ ಕಿವಿ ಕೊಡದೇ ರೈತರು ಕಬ್ಬು ಪೂರೈಕೆ ಮಾಡಬೇಕೆಂದು ಮನವಿ ಮಾಡಿಕೊಂಡರು.
ಕಾರ್ಖಾನೆಯ ಮುಖ್ಯ ವ್ಯವಸ್ಥಾಪಕ ಅರುಣ ಫರಾಂಡೆ ಮಾತನಾಡಿ, ಕೇಂದ್ರ ಸರ್ಕಾರ ಸಕ್ಕರೆಯ ಬೆಲೆಯನ್ನು 42 ರೂ. ಪ್ರತಿ ಕೀಲೋ, ಇಥೆನಾಲ್ ಬೆಲೆಯನ್ನು 70 ರೂ. ಪ್ರತಿ ಲೀಟರ್ ಮತ್ತು ವಿದ್ಯುತ್ ಬೆಲೆಯನ್ನು 6 ರಿಂದ 8 ರೂ. ಪ್ರತಿ ಯುನಿಟ್‌ನಂತೆ ನಿಗಧಿ ಮಾಡಿದಲ್ಲಿ, ಕಾರ್ಖಾನೆಗಳು ಆರ್ಥಿಕ ಸಂಕಷ್ಟದಿಂದ ಮುಕ್ತವಾಗಿ ರೈತರ ಕಬ್ಬಿಗೆ ಯೋಗ್ಯ ಬೆಲೆ ನೀಡಲು ಸಾಧ್ಯವಾಗಲಿದೆ ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು. ಈ ಸಮಯದಲ್ಲಿ ಪ್ರಥ್ವಿ ದೊಡ್ಡಣ್ಣವರ, ಕಾರ್ಖಾನೆಯ ಮಾನವ ಸಂಪನ್ಮೂಲ ಅಧಿಕಾರಿ ರವೀಂದ್ರ ಜಾಡರ ಮತ್ತು ಕೃಷಿ ಅಧಿಕಾರಿ ಮಹಾವೀರ ಬಿರನಾಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 