ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ 2 ರಲ್ಲಿ ವಿಶ್ವ ಪರಿಸರ ದಿನಾಚರಣೆ

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ 2 ರಲ್ಲಿ ವಿಶ್ವ ಪರಿಸರ ದಿನಾಚರಣೆ  World Environment Day celebrated at Government Model Primary School No. 2

ಲಕ್ಷ್ಮೇಶ್ವರ 05 :  "ಪಟ್ಟಣದ ವಿದ್ಯಾರಣ್ಯ ಸರ್ಕಲ್ ಹತ್ತಿರ ಇರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ 2 ರಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಂದ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತುವಿಶ್ವ ಪರಿಸರ ದಿನಾಚರಣೆ ಆಚರಿಸಿ ಮಾತನಾಡಿದ ಶಾಲೆಯ ಪ್ರಧಾನ ಗುರುಮಾತೆ ಎಸ್ ಎಚ್ ಉಮಚಗಿ ಅವರುಪ್ರತಿಯೊಬ್ಬ ಮನುಷ್ಯ ಪ್ರಾಣಿ ಪಕ್ಷಿಗಳು ಆರೋಗ್ಯವಾಗಿ ಇರಬೇಕಾದರೆ ಸುಂದರ ಪರಿಸರ ಅತಿ ಅವಶ್ಯ ಆ ದೆಸೆಯಲ್ಲಿ ಎಲ್ಲರೂ ಗಿಡ ಮರ ಬೆಳೆಸುವುದರ ಮೂಲಕ ಸುಂದರ ವಾತಾವರಣ ನಿರ್ಮಾಣ ಮಾಡಲು ಮುಂದಾಗಬೇಕು ಗಿಡ ಬೆಳೆಸಿ ನಾಡು ಉಳಿಸಿ ಎಂಬ ವಾಕ್ಯದಂತೆ ಎಲ್ಲರೂ ತಮ್ಮ ಮನೆಯ ಹಿತ್ತಲಲ್ಲಿ ಮನೆಯ ಮುಂಭಾಗದಲ್ಲಿ ಗಿಡವನ್ನು ನೆಡುವ ಮೂಲಕ ಸುಂದರ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದರು ಈ ಸಮಯದಲ್ಲಿ ಶಾಲೆಯ ಶಿಕ್ಷಕಿರಾದ.ಎಲ್ ಎಂ ದುಂಡಪ್ಪನವರ ಪಿ ಎಮ್ ಆಡ್ನೂರು ಸಿ ಎಪ್ ಪಾಟೀಲ ಎನ್‌ಎಸ್ ಬಂಕಾಪುರ ಎಸ್ ಎಸ್ ಜಿರಂಕಳ್ಳಿ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕಿಯರು ವಿದ್ಯಾರ್ಥಿಗಳು ವಿಶ್ವ ಪರಿಸರ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ .