ಧಾರವಾಡದಲ್ಲಿ ರೈತರ ಪ್ರತಿಭಟನೆ: ಬೀಜ-ಗೊಬ್ಬರ ಕೊರತೆಗೆ ಸರ್ಕಾರದ ವಿರುದ್ಧ ಆಕ್ರೋಶ

ಧಾರವಾಡದಲ್ಲಿ ರೈತರ ಪ್ರತಿಭಟನೆ: ಬೀಜ-ಗೊಬ್ಬರ ಕೊರತೆಗೆ ಸರ್ಕಾರದ ವಿರುದ್ಧ ಆಕ್ರೋಶ  Farmers protest in Dharwad: Outrage against the government over shortage of seeds and fertilizers

ಧಾರವಾಡ 29:   ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾಧ್ಯಕ್ಷರಾದ ದೀಪಾ ದಾರವಾಡ ಮಾತನಾಡಿ ರಾಜ್ಯದಾದ್ಯಂತ ಮುಂಗಾರು ಚಟುವಟಿಕೆ ಚುರುಕುಗೊಳ್ಳುತ್ತಿದೆ. ಮುಂಗಾರು ಪ್ರಾರಂಭವಾಗುತ್ತಿದ್ದಂತೆ ರೈತರು ಹಬ್ಬದ ತಯಾರಿಯಂತೆ ಭೂಮಿಯನ್ನು ಹದಗೊಳಿಸುವುದು, ಬೀಜ,ಗೊಬ್ಬರ ಶೇಖರಿಸಿಕೊಳ್ಳುವುದು, ಯಂತ್ರೋಪಕರಣಗಳನ್ನು ತಯಾರಿ ಮಾಡುವುದು ಒಟ್ಟಾರೆಯಾಗಿ ಯುದ್ಧೋಪಾದಿಯಲ್ಲಿ ಮನೆ ಮಂದಿ ಎಲ್ಲಾ ಕ್ರಿಯಾಶೀಲರಾಗುತ್ತಾರೆ. ಅಂತೆಯೇ ಸರ್ಕಾರವು ಕೂಡ ಸಾಮಾಜಿಕ ಉತ್ಪಾದನೆಯಲ್ಲಿ ತೊಡಗಿರುವ ರೈತರಿಗೆ ಸಮಾಜದ ಆಹಾರ ಉತ್ಪಾದಕರಿಗೆ ಎಲ್ಲಾ ರೀತಿಯ ಕೃಷಿ ಒಳ ಸುರಿವುಗಳನ್ನು ಸಮರ​‍್ಕವಾಗಿ ಸರಿಯಾದ ಸಮಯಕ್ಕೆ ಪೂರೈಸಬೇಕು.   

ಆದರೆ ಪ್ರತಿ ಬಾರಿಯಂತೆ ಈ ಬಾರಿಯೂ ಬೀಜ ರಸ ಗೊಬ್ಬರವನ್ನು ಪಡೆಯಲು ರೈತ ಸಮುದಾಯ ಹರಸಾಹಸ ಪಡುತ್ತಿದ್ದಾರೆ.ಸಮಯಕ್ಕೆ ಸರಿಯಾಗಿ ಬೀಜ,ಗೊಬ್ಬರ ಸಿಗದಿದ್ದರೆ ವರ್ಷದ ಬೆಳೆಯು ಕೈಗೆ ಸಿಗುವುದಿಲ್ಲ, ಉತ್ಪಾದನೆ ಸಮರ​‍್ಕವಾಗಿ ಆಗುವುದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯವಾಗಿರುವ ಯೂರಿಯಾ ಡಿಎಪಿ ಗೊಬ್ಬರವನ್ನು ಮತ್ತು ಬೀಜವನ್ನು ಪೂರೈಸಲು ಸಂಪೂರ್ಣವಾಗಿ ವಿಫಲವಾಗಿವೆ. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿಸಿಲು, ಚಳಿ ಎನ್ನದೆ ಸರತಿ ಸಾಲಿನಲ್ಲಿ ನಿಂತು ಬೀಜ,ಗೊಬ್ಬರ ಸಿಗುತ್ತದೋ,ಇಲ್ಲವೋ ಎಂಬ ಆತಂಕದಲ್ಲಿ ರೈತ ಕಂಗಾಲಾಗಿದ್ದಾನೆ. ಎಷ್ಟೋ ಕಡೆ ಮಹಿಳೆಯರು ಸಹ ಹೊದಿಕೆಯೊಂದಿಗೆ ರೈತ ಸಂಪರ್ಕ ಕೇಂದ್ರದ ಬಳಿ ವಸತಿ ಮಾಡಿ ಸರತಿಯಲ್ಲಿ ನಿಲ್ಲುವಂತೆ ಆಗಿದೆ ಮತ್ತು ನೀರು ಕುಡಿಯಲು ಹೋದರು ಸಾಲು ತಪ್ಪುವುದು ಎಂದು ಬಾಯಾರಿಕೆಯ ದಾಹದೊಂದಿಗೆ ಬೀಜ,ರಸಗೊಬ್ಬರಕ್ಕಾಗಿ ಕಾಯುತ್ತಿದ್ದಾರೆ. 

ರೈತರ ಬದುಕು ಅತಂತ್ರವಾಗಿದೆ ದೇಶಕ್ಕೆ ಅನ್ನ ನೀಡುವ ರೈತರಿಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಡಬೇಕಾಗಿರುವುದು ಸರ್ಕಾರದ ಮೂಲ ಕರ್ತವ್ಯ. ಯುದ್ಧದ ಪರಿಣಾಮದಿಂದ ಬೇಡಿಕೆಗೆ ತಕ್ಕಂತೆ ರಸಗೊಬ್ಬರವನ್ನು ಪೂರೈಸಲು ಆಗುತ್ತಿಲ್ಲ ಎಂದು ನೆಪ ನೀಡುವುದು ಜವಾಬ್ದಾರಿಯುತ ಸರ್ಕಾರದ ಲಕ್ಷಣವಲ್ಲ. ಯುದ್ಧದ ಪರಿಣಾಮವನ್ನು ಅರಿತು ಸರ್ಕಾರಗಳು ಮುಂಜಾಗ್ರತವಾಗಿ ರಸಗೊಬ್ಬರ ತಯಾರಿಕೆಗೆ ಕಚ್ಚಾ ಪದಾರ್ಥಗಳನ್ನು ಇನ್ನಿತರೆ ಮೂಲಗಳಿಂದ ಸಂಗ್ರಹಿಸಿ ಅದಕ್ಕೆ ತಕ್ಕಂತೆ ತಜ್ಞರ ಬಳಿ ಸಮಾಲೋಚಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿತ್ತು. ಅದನ್ನು ಬಿಟ್ಟು ಕಡಿಮೆ ಗೊಬ್ಬರ ಬಳಸಿ, ಬೇರೆ ಗೊಬ್ಬರ ಬಳಸಿ,ನ್ಯಾನೋ ಯೂರಿಯಾ ಬಳಸಿ ಎಂದು ಉಪದೇಶ ಮಾಡುವುದು ಪರಿಸ್ಥಿತಿಯ ಗಂಭೀರತೆಯನ್ನು ಅರಿತಂತೆ ಆಗುವುದಿಲ್ಲ ಎಂಬುದು ಸಮಸ್ತ ರೈತರ ಬಲವಾದ ಅಭಿಪ್ರಾಯ.

ಸದ್ಯಕ್ಕೆ ಪರಿಸ್ಥಿತಿಯನ್ನು ಸರಿದೂಗಿಸಲು ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿ,ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟಮಾಡುವುದು,ಅವಶ್ಯಕತೆ ಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಕೃಷಿಯೇತರ ಚಟುವಟಿಕೆಗೆ ಯೂರಿಯ ಗೊಬ್ಬರ ಮಾರಾಟ ಮಾಡದಂತೆ ಮಾರಾಟಗಾರರಿಗೆ ಸರ್ಕಾರವು ಕಟ್ಟುನಿಟ್ಟಿನ ನಿಬಂರ್ಧ ಹೇರಬೇಕು. ಯೂರಿಯಾ ಗೊಬ್ಬರದ ಜೊತೆ ಅಗತ್ಯವಿಲ್ಲದ ಜಿಂಕ್ ಇನ್ನಿತರೇ ಗೊಬ್ಬರಗಳನ್ನು ನೀಡುವುದು ಸರಿಯಲ್ಲ. ಇದಕ್ಕೆಲ್ಲ ಸರ್ಕಾರವು ಕಡಿವಾಣವನ್ನು ಹಾಕಬೇಕು.ಕೃಷಿ ಚಟುವಟಿಕೆಗೆ ಅಗತ್ಯವಾಗಿರುವ ಡೀಸೆಲ್ ಕೂಡ ಸಿಗುತ್ತಿಲ್ಲ. ಕೃಷಿ ಚಟುವಟಿಕೆ ನಡೆಯಬೇಕೆಂದರೆ ಟ್ರ್ಯಾಕ್ಟರ್ ಇನ್ನಿತರೆ ಡೀಸೆಲ್ ಬಳಕೆಯ ವಾಹನವನ್ನು ಮತ್ತು ಯಂತ್ರೋಪಕರಣಬೇಕು. ತೈಲದ ಅಭಾವದಿಂದಾಗಿ ಪೆಟ್ರೋಲ್ ಬಂಕ್ ಗಳಲ್ಲಿ ಡೀಸೆಲ್ ಅನ್ನು ಕ್ಯಾನ್ಗಳಿಗೆ ತುಂಬಿಸಿಕೊಡುವುದನ್ನು ನಿಬಂರ್ಧಿಸಲಾಗಿದೆ.

ಇದರಿಂದಲೂ ರೈತರು ಕಂಗಾಲಾಗಿದ್ದಾರೆ.ದೂರದ ಹಳ್ಳಿಗಳಿಂದ ಪೆಟ್ರೋಲ್ ಬಂಕ್ ಗಳಿಗೆ ವಾಹನವನ್ನು ತಂದು ಡೀಸೆಲ್ ಪಡೆಯುವುದು ಅತೀ ಖರ್ಚಿನ ಕೆಲಸ.ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ, ರೈತರಿಗೆ ಕೃಷಿ ಚಟುವಟಿಕೆಗೆ ಯಾವುದೇ ನಿಬಂರ್ಧ ವಿಲ್ಲದೆ ಪೆಟ್ರೋಲ್,ಡೀಸೆಲ್ ಅನ್ನು ಪೂರೈಸಬೇಕು. ಕೇಂದ್ರ ಸರ್ಕಾರವು ಕಳೆದ ಎರಡು ವರ್ಷಗಳ ಹಿಂದೆ ಕಿಸಾನ್ ಕ್ರೆಡಿಟ್ ಕಾರ್ಡ್‌ ಯೋಜನೆಯಡಿ ಸಾಲ ಪಡೆಯುವ ರೈತರಿಗೆ ಮೂರು ಲಕ್ಷದಿಂದ ಐದು ಲಕ್ಷದವರೆಗೆ ಸಾಲವನ್ನು ಕಡಿಮೆ ಬಡ್ಡಿಯೊಂದಿಗೆ ವಿತರಿಸುವಂತೆ ಪತ್ರಿಕೆ ಪ್ರಕಟಣೆಯಲ್ಲಿ ಘೋಷಿಸಿದ್ದಾರೆ. ಆದರೆ ಅದು ಬರೇ ಘೋಷಣೆಯಾಗಿಯೇ ಉಳಿದಿದೆ.ಬ್ಯಾಂಕುಗಳಲ್ಲಿ ಹೋಗಿ ಕೇಳಿದರೆ ಇನ್ನು ಅಧಿಕೃತವಾಗಿ ಸುತ್ತೋಲೆ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಇದನ್ನು ಕಾರ್ಯ ರೂಪಕ್ಕೆ ತರುವಂತೆ ಂಋಏಒಖ ಒತ್ತಾಯಿಸುತ್ತದೆ.ಈ ಎಲ್ಲಾ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಂಋಏಒಖ ಧಾರವಾಡ ಜಿಲ್ಲಾ ಸಮಿತಿಯು ಆಗ್ರಹಪೂರ್ವಕವಾಗಿ ಮನವಿ ಮಾಡುತ್ತದೆ ಎಂದರು.