ಯರಗಟ್ಟಿ ಸಮೀಪದ ಮುನವಳ್ಳಿ ಪಟ್ಟಣದ ಶಿಂದೋಗಿ ಕ್ರಾಸ್‌ನಲ್ಲಿ ಜರುಗಿದ ರೈತರ ಅಹೋರಾತ್ರಿ ಧರಣಿ
Farmers' day-night sit-in at Shindogi Cross in Munavalli town near Yaragati
ಲೋಕದರ್ಶನ ವರದಿ
ಯರಗಟ್ಟಿ ಸಮೀಪದ ಮುನವಳ್ಳಿ ಪಟ್ಟಣದ ಶಿಂದೋಗಿ ಕ್ರಾಸ್‌ನಲ್ಲಿ ಜರುಗಿದ ರೈತರ ಅಹೋರಾತ್ರಿ ಧರಣಿ
ಯರಗಟ್ಟಿ 01 : ಮಲಪ್ರಭಾ ಜಲಾಶಯದ ಬಲದಂಡೆ ಕಾಲುವೆಯ ಸೈಫನ್ ದುರಸ್ತಿ ವಿಳಂಬದಿಂದಾಗಿ ಶಿಂದೋಗಿ, ಮುನವಳ್ಳಿ, ಯಕ್ಕೇರಿ, ಹಿರೂರ, ಹಳ್ಳೂರ, ಭಂಡಾರಹಳ್ಳಿ, ತೆರೆದಕೊಪ್ಪ, ಬೋಚಬಾಳ, ಹಾಗೂ ಮಾಗನೂರ ಗ್ರಾಮಗಳ ರೈತರ ಜಮೀನುಗಳಿಗೆ ನೀರು ತಲುಪಲು ಹಲವಾರು ವರ್ಷಗಳಿಂದ ತೊಂದರೆಯಾಗಿದ್ದು, ರೈತರ ನೋವು ನನಗೆ ಅರ್ಥವಾಗಿದೆ. ಹೋರಾಟ ನಿರತ ರೈತರೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದೇನೆ, ಅಹವಾಲು ಸ್ವೀಕರಿಸಿದ್ದೇನೆ. ಮಲಪ್ರಭಾ ಬಲದಂಡೆ ಕಾಲುವೆಯ ಸೈಫನ್ ದುರಸ್ತಿ ಕಾಮಗಾರಿಗಾಗಿ ಅಂದಾಜು ರೂ. 19 ಕೋಟಿ ವೆಚ್ಚದ ಪ್ರಸ್ತಾವನೆಗೆ ಸರಕಾರದ ಅಧಿಕೃತ ಅನುಮೋದನೆ ದೊರೆತಿದೆ. ತಾಂತ್ರಿಕ ಪ್ರಕ್ರಿಯೆಗಳು ಮುಗಿದ ತಕ್ಷಣ ಆದಷ್ಟು ಬೇಗ ಕಾಮಗಾರಿ ಪ್ರಾರಂಭವಾಗಲಿದೆ. ನೀರಾವರಿ ಇಲಾಖೆಯ ಪ್ರಗತಿಯನ್ನು ನಾನು ಗಮನಿಸಿದ್ದು ಅತೀ ಶೀಘ್ರದಲ್ಲಿ ಕಾಲುವೆಯ ಸೈಫನ್ ದುರಸ್ತಿ ಮಾಡಲಾಗುವುದು ಎಂದು ಶಾಸಕ ವಿಶ್ವಾಸ ವಸಂತ ವೈದ್ಯ ಹೇಳಿದರು.
ಸಮೀಪದ ಮುನವಳ್ಳಿ ಪಟ್ಟಣದ ಶಿಂದೋಗಿ ಕ್ರಾಸ್‌ನಲ್ಲಿ ನಡೆದ ರೈತರ ಅಹೋರಾತ್ರಿ ಧರಣಿ ಸತ್ಯಾಗ್ರಹ ವೇದಿಕೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಕಳಸಾಬಂಡೂರಿ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಶಿವಾನಂದ ಮೇಟಿ ಮಾತನಾಡಿ ಹಲವಾರು ವರ್ಷಗಳಿಂದ ಕಾಲುವೆ ಸೈಫಾನ ದುರಸ್ತಿಗೆ ರೈತರು ಮನವಿ ಮಾಡಿದರೂ ಸ್ಪಂದಿಸಿರಲಿಲ್ಲ. ಈ ಭಾಗ ಬರಗಾಲ ಪ್ರದೇಶವೆಂದು ಗುರುತಿಸಿ, ಅರೆ ನೀರಾವರಿ ಪದ್ಧತಿಗಾಗಿ ಡ್ಯಾಂ ನಿರ್ಮಾಣ ಸಂದರ್ಭದಲ್ಲಿ ವಿಶೇಷವಾಗಿ ಸೈಫನ್ ನಿರ್ಮಿಸಲಾಗಿದೆ ಅತೀ ಶೀಘ್ರವಾಗಿ ಕಾಲುವೆ ಸೈಫಾನ್ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದರು.
ಸವದತ್ತಿ ತಾಲೂಕಾ ರೈತ ಸಂಘದ ಅಧ್ಯಕ್ಷ ಪಂಚಪ್ಪ ಹನಸಿ ಮಾತನಾಡಿ ಶಾಸಕರು ಅಧಿಕಾರಿಗಳೊಂದಿಗೆ ಮಾತನಾಡಿ ರೈತರಿಗಾಗುವ ತೊಂದರೆ ತಪ್ಪಿಸಲು ಸೈಫನ್ ದುರಸ್ತಿ ಕಾಮಗಾರಿ ಪ್ರಾರಂಭಿಸಬೇಕು. ರೈತರ ಬಾಳು ಬೆಳಗುವಂತೆ ಮಾಡಬೇಕು ಎಂದರು. ಮುಖಂಡರಾದ ಪಂಚನಗೌಡ ದ್ಯಾಮನಗೌಡರ, ಸೋಮು ರೈನಾಪೂರ, ಉಮೇಶ ಬಾಳಿ, ಸುರೇಶ ಕುರುಬಗಟ್ಟಿ, ಸತ್ಯಪ್ಪ ಅಡವಿ, ಪ್ರಶಾಂತ ಕುರುಬಗಟ್ಟಿ, ಅಪ್ಪು ನುಗ್ಗಾನಟ್ಟಿ, ಶೇಖರ ಗೋಕಾವಿ, ಬಸು ಹುರಳಿ, ಮಾಂತೇಶ ಯಕ್ಕೇರಿ, ಮುನವಳ್ಳಿ ಸದಸ್ಯ ಸುಭಾಸ ಗೀದಿಗೌಡ್ರ, ಬಸು ಶಿಗ್ಗಾವಿ, ಎ.ವಿ.ನರಗುಂದ, ಸವದತ್ತಿ ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಯರಗಟ್ಟಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಪುಂಡಲೀಕ ಮೇಟಿ, ಮಲ್ಲು ಬಿಳಗಿ, ಪ್ರಕಾಶ ವಾಲಿ, ಸುರೇಶ ಭಜಂತ್ರಿ, ಸೇರಿದಂತೆ ಶಿಂದೋಗಿ, ಮುನವಳ್ಳಿ, ಯಕ್ಕೇರಿ, ಹಿರೂರ, ಹಳ್ಳೂರ, ಭಂಡಾರಹಳ್ಳಿ, ತೆರೆದಕೊಪ್ಪ, ಬೋಚಬಾಳ, ಮಾಗನೂರ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.
ಹೇಳಿಕೆ : ಮಲಪ್ರಭಾ ಬಲದಂಡೆ ಕಾಲುವೆ ಸೈಫನ್ ದುರಸ್ತಿಗೆ 19 ಕೋಟಿ ಅನುಮೋದನೆ.
ಸವದತ್ತಿ ಹಾಗೂ ಯರಗಟ್ಟಿ ತಾಲೂಕುಗಳ ಸಮಗ್ರ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ನಮ್ಮ ಅನ್ನದಾತರಿಗೆ ನ್ಯಾಯ ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಸರ್ಕಾರದಿಂದ ಅನುದಾನ ಮಂಜೂರಾಗಿ ಪ್ರಕ್ರಿಯೆ ಚಾಲ್ತಿಯಲ್ಲಿರುವುದರಿಂದ, ರೈತರು ಧರಣಿಯನ್ನು ಕೈಬಿಟ್ಟು ಕಾಮಗಾರಿ ಸುಗಮವಾಗಿ ನಡೆಯಲು ಸಹಕರಿಸಿ.
ವಿಶ್ವಾಸ ವೈದ್ಯ, ಶಾಸಕರು, ಸವದತ್ತಿ
ಫೋಟೋ ಶೀರ್ಷಿಕೆ : 01 ಯರಗಟ್ಟಿ 02
ಯರಗಟ್ಟಿ ಸಮೀಪದ ಮುನವಳ್ಳಿ ಪಟ್ಟಣದ ಶಿಂದೋಗಿ ಕ್ರಾಸ್‌ನಲ್ಲಿ ಜರುಗಿದ ರೈತರ ಅಹೋರಾತ್ರಿ ಧರಣೆ ಸತ್ಯಾಗ್ರಹದಲ್ಲಿ ಶಾಸಕ ವಿಶ್ವಾಸ ವಸಂತ ವೈದ್ಯ ಮಾತನಾಡಿದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 