ವಾ.ಕ.ರ.ಸಾ. ಸಂಸ್ಥೆ ಬೆಳಗಾವಿ ವಿಭಾಗೀಯ ಕಚೇರಿಯಲ್ಲಿ ಪರಿಸರ ದಿನಾಚರಣೆ ಆಚರಣೆ

ವಾ.ಕ.ರ.ಸಾ. ಸಂಸ್ಥೆ ಬೆಳಗಾವಿ ವಿಭಾಗೀಯ ಕಚೇರಿಯಲ್ಲಿ ಪರಿಸರ ದಿನಾಚರಣೆ ಆಚರಣೆ Environment Day celebration at the Belgaum Divisional Office of the V.K.S.A.

ಲೋಕದರ್ಶನ ವರದಿ 

ಬೆಳಗಾವಿ ಜೂನ್ 05: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ಕಛೇರಿಯಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು. ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಕೆ.ಎಲ್ ಗುಡೆನ್ನವರ ಅವರು ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ಸಿಬ್ಬಂದಿಯು ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿ ಮತ್ತು ಹಸಿರಾಗಿಡುವುದು ಜವಾಬ್ದಾರಿಯಾಗಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ನೀರನ್ನು ಮಿತವಾಗಿ ಬಳಸುವುದು ಇಂಧನ ಉಳಿತಾಯ ಮಾಡುವುದು ಪರಿಸರ ಸಂರಕ್ಷಣೆಗೆ ನಮ್ಮ ಮಹತ್ವದ ಕೊಡುಗೆಯಾಗಿದೆ.

ಪರಿಸರ ದಿನದಂದು ಪ್ರಕೃತಿಯನ್ನು ಕಾಪಾಡುವ ಸಂಕಲ್ಪ ಮಾಡೋಣ ಮತ್ತು ಮುಂದಿನ ಪಿಳಿಗೆಗಾಗಿ ಉತ್ತಮ ಪರಿಸರವನ್ನು ನೀಡಲು ಕೈ ಜೋಡಿಸೋಣ ಎಂದು ತಿಳಿಸಿದರು. ಅದೇ ರೀತಿ ಬೆಳಗಾವಿ ವಿಭಾಗದ 6 ಘಟಕಗಳ ಘಟಕ ವ್ಯವಸ್ಥಾಪಕರುಗಳಿಗೂ ಪರಿಸರ ದಿನಾಚರಣೆ ಹಿನ್ನೆಲೆ ಘಟಕಗಳ ಆವರಣದಲ್ಲಿ ಸಸಿಗಳನ್ನು ನೆಡೆಸಲು ಸೂಚನೆಗಳನ್ನು ನೀಡಲಾಗಿರುತ್ತದೆ ಎಂದರು. ಈ ಸಂದರ್ಭದಲ್ಲಿ ಕಾರ್ಮಿಕ ಕಲ್ಯಾಣಾಧಿಕಾರಿ ಸರ್ವೇಶ್, ಆಡಳಿತಾಧಿಕಾರಿ ನಾಗಮಣಿ ಭೋವಿ, ಲೆಕ್ಕಾಧಿಕಾರಿ ಸಂಜಯ ಮಸುಮಳ ಸೇರಿದಂತೆ ಕಛೇರಿಯ ಎಲ್ಲ ಸಿಬ್ಬಂದಿಗಳ ಉಪಸ್ಥಿತರಿದ್ದರು.