ದಕ್ಷಿಣ ಫಿಲಿಪೈನ್ಸ್ ನಲ್ಲಿ ಭೂಕಂಪನ, ಹಾನಿ ವರದಿಯಿಲ್ಲ
ಮನಿಲಾ, ಅಕ್ಟೋಬರ್ 1: ದಕ್ಷಿಣ ಫಿಲಿಪೈನ್ಸ್‌ನ ಸೂರಿಗಾವೊ ಡೆಲ್ ಸುರ್ ಪ್ರಾಂತ್ಯದಲ್ಲಿ ಭೂಕಂಪವಾಗಿದ್ದು, ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 5.2 ಎಂದು ದಾಖಲಾಗಿರುವುದಾಗಿ ಫಿಲಿಪೈನ್ ಇನ್‌ಸ್ಟಿಟ್ಯೂಟ್ ಆಫ್ ಸೀಸ್ಮಾಲಜಿ ಅಂಡ್ ಜ್ವಾಲಾಮುಖಿ (ಫಿವೊಲ್ಕ್ಸ್) ತಿಳಿಸಿದೆ.
ಸ್ಥಳೀಯ ಕಾಲ ಮಾನ ಬೆಳೆಗಿನ ಜಾವದಲ್ಲಿ ಭೂಕಂಪ ಸಂಭವಿಸಿದ್ದು, ಕಡಲಾಚೆಯ ಭೂಕಂಪನವು ಬಯಾಬಾಸ್ ಪಟ್ಟಣದಿಂದ ಈಶಾನ್ಯಕ್ಕೆ ಸುಮಾರು 68 ಕಿಲೋಮೀಟರ್ ದೂರದ 16 ಕಿಲೋಮೀಟರ್ ಆಳದಲ್ಲಿ ಅಪ್ಪಳಿಸಿದೆ ಎಂದು ಸಂಸ್ಥೆ ತಿಳಿಸಿದೆ.
ಸೂರಿಗಾವೊ ಡೆಲ್ ನಾರ್ಟೆ ಪ್ರಾಂತ್ಯದ ಸೂರಿಗಾವೊ ನಗರದಲ್ಲಿಯೂ ಭೂಮಿ ನಡುಕ ಉಂಟಾಗಿದೆ ಆದರೆ ಹಾನಿ ಬಗ್ಗೆ ವರದಿಯಾಗಿಲ್ಲ .
ಪೆಸಿಫಿಕ್ "ರಿಂಗ್ ಆಫ್ ಫೈರ್ ನ ಉದ್ದಕ್ಕೂ ಇರುವ ಕಾರಣ ಫಿಲಿಪೈನ್ಸ್ ನಲ್ಲಿ ಆಗಾಗ ಭೂಕಂಪನ ಸಂಭವಿಸುತ್ತಿರುತ್ತದೆ.