ಅಂತರರಾಷ್ಟ್ರೀಯ

ಫಿಲಿಪೈನ್ಸ್ ನಲ್ಲಿ ಭೂಕಂಪನ, ಹಾನಿ ವರದಿಯಿಲ್ಲ

ಫಿಲಿಪೈನ್ಸ್ ನಲ್ಲಿ ಭೂಕಂಪನ,  ಹಾನಿ ವರದಿಯಿಲ್ಲ

ಮನಿಲಾ, ಅಕ್ಟೋಬರ್ 5: ಫಿಲಿಪೈನ್ಸ್ ನಲ್ಲಿ ಭೂಕಂಪನ  ಸಂಭವಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 5.6 ಎಂದು ದಾಖಲಾಗಿದೆ. ಆದರೆ ಹಾನಿಯ ಬಗ್ಗೆ ವರದಿಯಾಗಿಲ್ಲ. 

ಕಂಪನ  ಮುಂಜಾನೆ  ಸಂಭವಿಸಿದ್ದು ಅದರ  ಕೇಂದ್ರ  ಬಿಂದು 121 ಕಿ.ಮೀ ಆಳದಲ್ಲಿತ್ತು ಎನ್ನಲಾಗಿದೆ. ಟೆಕ್ಟೋನಿಕ್ ಮೂಲದ ಭೂಕಂಪನದ  ನಂತರದ ಆಘಾತಗಳನ್ನು ಪ್ರಚೋದಿಸುತ್ತದೆ ಎಂದೂ  ಸಂಸ್ಥೆ ಹೇಳಿದೆ.

ದುರ್ಬಲ ಪೆಸಿಫಿಕ್ "ರಿಂಗ್ ಆಫ್ ಫೈರ್" ನ ಉದ್ದಕ್ಕೂ ಇರುವ ಕಾರಣ ಫಿಲಿಪೈನ್ಸ್ ನಲ್ಲಿ  ಆಗಾಗ್ಗೆ ಭೂಕಂಪ ಸಂಭವಿಸುತ್ತದೆ. 

ಸುದ್ದಿ ಓದಿ