ಅರಿಹಂತ ಚಾರಿಟೇಬಲ್ ಫೌಂಡೇಶನ್ ರಾಯಬಾಗ ಸಂಸ್ಥೆಗೆ ಡಾ. ಅಜೀತ ಮತ್ತು ಶೋಭಾ ನಾಯಿಕ ದಂಪತಿಗಳಿಂದ 1 ಲಕ್ಷ 50 ಸಾವಿರ ರೂಪಾಯಿ ದಾನ

ಅರಿಹಂತ ಚಾರಿಟೇಬಲ್ ಫೌಂಡೇಶನ್ ರಾಯಬಾಗ ಸಂಸ್ಥೆಗೆ ಡಾ. ಅಜೀತ ಮತ್ತು ಶೋಭಾ ನಾಯಿಕ ದಂಪತಿಗಳಿಂದ 1 ಲಕ್ಷ 50 ಸಾವಿರ ರೂಪಾಯಿ ದಾನ Dr. Ajit and Shobha Naik couple donate Rs 1 lakh 50 thousand to Arihant Charitable Foundation Raybag

ರಾಯಬಾಗ 02 : ಅರಿಹಂತ ಚಾರಿಟೇಬಲ್ ಫೌಂಡೇಶನ್ ರಾಯಬಾಗ ಸಂಸ್ಥೆಗೆ ಪಟ್ಟಣದ ವೈದ್ಯ ಡಾ. ಅಜೀತ ಮತ್ತು ಶೋಭಾ ನಾಯಿಕ ದಂಪತಿಗಳು 1 ಲಕ್ಷ 50 ಸಾವಿರ ರೂಪಾಯಿ ದಾನವಾಗಿ ನೀಡಿದ್ದು, ತಾಲೂಕಿನ ಪ್ರತಿಭಾವಂತ ಬಡ ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಸಂಸ್ಥೆ ಅಧ್ಯಕ್ಷ ಡಿ.ಸಿ.ಸದಲಗಿ ಹೇಳಿದರು. ಮಂಗಳವಾರ ಪಟ್ಟಣ ಮಹಾವೀರ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ಯದರ್ಶಿ ಮಲ್ಲಪ್ಪ ಖಾನಟ್ಟಿ,  ತಾಲೂಕಿನ ಪ್ರತಿಭಾವಂತ ಜೈನ ಸಮುದಾಯದ ಮಕ್ಕಳು 2025-26ನೇ ಸಾಲಿನಲ್ಲಿ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಶೇ.90 ಹಾಗೂ ಪಿಯುಸಿಯಲ್ಲಿ ಶೇ.85 ಅಂಕ ಪಡೆದ ವಿದ್ಯಾರ್ಥಿಗಳು ಸಂಸ್ಥೆಗೆ ಜುಲೈ 15 ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು. ಸದುಪಯೋಗವನ್ನು ತಾಲೂಕಿನ ಎಲ್ಲಾ ವಿದ್ಯಾರ್ಥಿಗಳ ಪಡೆದುಕೊಳ್ಳಬೇಕೆಂದು ಸಂಸ್ಥೆಯ ಕಾರ್ಯದರ್ಶಿಗಳಾದ ಮಲ್ಲಪ್ಪ ಖಾನಟ್ಟಿ ತಿಳಿಸಿದರು.  ಸಭೆಯಲ್ಲಿ ದಾನಿ ಡಾ. ಅಜಿತ ನಾಯಕ, ಸಂಸ್ಥೆ ಉಪಾಧ್ಯಕ್ಷ ಸಂಜಯ ಬಡೋರೆ, ನಿರ್ದೇಶಕರಾದ ಈರಗೌಡ ಪಾಟೀಲ, ದಶರಥ ಶೆಟ್ಟಿ, ಶೀತಲ ಬೇಡಿಕಿಹಾಳೆ, ಸಂಜಯ ಹಂಜೆ, ಪಾರೀಸ ಉಗಾರೆ, ಭರತೇಶ ಪಾಟೀಲ, ನೇಮನಾಥ ಅಸ್ಕಿ, ವರ್ಧಮಾನ ಬನವನೆ, ಭರತೇಶ ಕೊರಗೇರಿ ಇದ್ದರು.