ಸಾರಿಗೆ ಘಟಕಕ್ಕೆ ವಿಭಾಗೀಯ ನಿಯಂತ್ರಾಧಿಕಾರಿ ಬಿರಾದಾರ ಭೇಟಿ

ಸಾರಿಗೆ ಘಟಕಕ್ಕೆ ವಿಭಾಗೀಯ ನಿಯಂತ್ರಾಧಿಕಾರಿ ಬಿರಾದಾರ ಭೇಟಿ  Divisional Controller Biradar visits the Transport Unit

ತಾಳಿಕೋಟಿ 05:  ರಸ್ತೆ ಸಾರಿಗೆ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರು ಇನ್ನೂ ಹೆಚ್ಚಿಗೆ ಶ್ರಮವಹಿಸಿ ಕೆಲಸ ಮಾಡಿ ನಿಗಮಕ್ಕೆ ಹೆಚ್ಚಿನ ಆದಾಯ ತರಲು ಪ್ರಯತ್ನಿಸಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ದೇವಾನಂದ ಎ. ಬಿರಾದಾರ ಹೇಳಿದರು. ವಿಭಾಗದ ಜವಾಬ್ದಾರಿ ವಹಿಸಿಕೊಂಡ ನಂತರ ಗುರುವಾರ ಸ್ಥಳೀಯ ಸಾರಿಗೆ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಘಟಕದ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಘಟಕ ವ್ಯವಸ್ಥಾಪಕ ಪಿ.ಕೆ.ಜಾಧವ ಅವರು ಮಾತನಾಡಿ ನಮ್ಮ ಡಿಸಿ ಸಾಹೇಬರ ಸಲಹೆಯಂತೆ ನಾವೆಲ್ಲರೂ ಶಕ್ತಿಮೀರಿ ಶ್ರಮವಹಿಸಿ ನಿಗಮಕ್ಕೆ ಒಳ್ಳೆಯ ಆದಾಯ ತರಲು ಪ್ರಯತ್ನಿಸುತ್ತೇವೆ ಇದರ ಜೊತೆಗೆ ಘಟಕದಲ್ಲಿ ಸಿಬ್ಬಂದಿಗಳ ಕೊರತೆ ಇದೆ ಇನ್ನು ಕನಿಷ್ಠ ಹತ್ತು ಚಾಲಕರು ಹಾಗೂ ನಿರ್ವಾಹಕರ ಅಗತ್ಯವಿದೆ ಈ ಎಲ್ಲ ಸೌಲತ್ತುಗಳನ್ನೂ ಮಾಡಿಕೊಡಬೇಕೆಂದು ಅವರಲ್ಲಿ ವಿನಂತಿಸುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಘಟಕ ಹಾಗೂ ಘಟಕದ ಎಲ್ಲ ಯೂನಿಯನ್ ಗಳ ವತಿಯಿಂದ ನೂತನ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ದೇವಾನಂದ ಬಿರಾದಾರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಿಬ್ಬಂದಿ ಮೇಲ್ವಿಚಾರಕ ಬಿ.ಬಿ.ಚೊಕಾವಿ, ಸಂಚಾರಿ ನೀರೀಕ್ಷಕರಾದ ನಿಂಗನಗೌಡ, ಎಸ್‌.ಪಿ.ಆಲ್ಯಾಳ, ನೌಕರ ಸಂಘದ ಅಧ್ಯಕ್ಷ ಕುಮಾರ ಅಸ್ಕಿ,ಪಾರು.