ನಗರ ಸಭೆ ಅಧಿಕಾರಿಗಳಿಂದ ರಂಗೋಲಿ ಹಾಕಿ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ
City council officials create awareness about cleanliness by painting rangolis
ನಗರ ಸಭೆ ಅಧಿಕಾರಿಗಳಿಂದ ರಂಗೋಲಿ ಹಾಕಿ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ
ಕೊಪ್ಪಳ 15: ನಗರದ ಸಾರ್ವಜನಿಕರ ಸ್ಥಳಗಳಲ್ಲಿ ಕಸ ಚೆಲ್ಲಬೇಡಿ ಸ್ವಚ್ಛತೆ ಕಾಪಾಡಿ ಎಂದು ಕೊಪ್ಪಳ ನಗರದ ಸಾರ್ವಜನಿಕರಲ್ಲಿ ನಗರಸಭೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಸಾರ್ವಜನಿಕರ ಸ್ಥಳದಲ್ಲಿ ರಂಗೋಲಿ ಹಾಕುವುದರ ಮೂಲಕ ಜನರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಕೊಪ್ಪಳದಲ್ಲಿ ಭರದಿಂದ ಸಾಗಿರುವ ಕಾರ್ಯ ಉತ್ತಮವಾಗಿದೆಸೋಮವಾರ ನಗರದ 21ನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಅಮೀನಪುರ ಓಣಿ ಟ್ರೀನಿಟಿ ಶಾಲೆ ಹತ್ತಿರ ನಗರಸಭೆಯ ಅಧಿಕಾರಿ ವರ್ಗ ಸಿಬ್ಬಂದಿ ವರ್ಗ ಮತ್ತು ಕಾರ್ಮಿಕ ವರ್ಗ ಸೇರಿ ವಿವಿಧ ಸಂಘಟನೆಗಳ ಮೂಲಕ ಮನೆ ಮನೆಗೆ ತೆರಳಿ ಕಸ ಸಾರ್ವಜನಿಕರ ಸ್ಥಳದಲ್ಲಿ ಚೆಲ್ಲಬೇಡಿ ಸ್ವಚ್ಛತೆ ಕಾಪಾಡಬೇಕು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕು ಜನ ಓಡಾಡುವ ಸ್ಥಳದಲ್ಲಿ ಕಸ ಚೆಲ್ಲಿದರೆ ಅಂಥವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು, ಇತ್ತೀಚೆಗಷ್ಟೇ ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಮತ್ತು ಪೌರಾಯುಕ್ತಾರಾದ ವೆಂಕಟೇಶ್ ನಾಗನೂರ್ ರವರು ನಗರದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳಿಗೆ ಅಧಿಕೃತವಾಗಿ ಚಾಲನೆ ನೀಡಿರುವ ಬೆನ್ನಲ್ಲೇ ಅವರ ಸೂಚನೆ ಮತ್ತು ಮಾರ್ಗದರ್ಶನದಲ್ಲಿ ನಗರಸಭೆಯ ಅಧಿಕಾರಿ ವರ್ಗ ಮತ್ತು ಸಿಬ್ಬಂದಿ ವರ್ಗ ಸೇರಿ ಕಾರ್ಮಿಕರೊಂದಿಗೆ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಂಗೋಲಿ ಹಾಕಿ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ, ಈ ಸಂದರ್ಭದಲ್ಲಿ ನಗರಸಭೆಯ ಹಿರಿಯ ಆರೋಗ್ಯ ನೀರೀಕ್ಷಕ ರಾಘವೇಂದ್ರ ಚೌಹಾಣ್, ವಿಶ್ವನಾಥ್ ಕಿರಿಯ ಆರೋಗ್ಯ ನೀರೀಕ್ಷಕ ಲಾಲ್ ಸಾಬ್ ಮನಿಯರ್ ದಫೆದಾರ್ ಗವಿ ಸಿದ್ದಪ್ಪ, ಕಾರ್ಮಿಕ ರಾದ ಶಿವಪ್ಪ ,ಮುತ್ತಮ್ಮ ಹಾಗೂ ಸಮುದಾಯ ಸಂಚಾಲಕರಾದ ರೇಣುಕಾ ಜಾದವ್, ಯಲ್ಲಮ್ಮ, ಯಲ್ಲಮ್ಮ ಯತ್ನಟ್ಟಿ ವಾಹನ ಚಾಲಕರು ಇತರ ಸಿಬ್ಬಂದಿ ಪಾಲ್ಗೊಂಡಿದ್ದು ಹಸಿ ಕಸ ವಣ ಕಸ ಪ್ರತ್ಯೇಕ ವಿಂಗಡಣೆ ಮಾಡಿ ನಗರಸಭೆಯ ವಾಹನ ಗಳಿಗೆ ನೀಡಬೇಕು ಒಟ್ಟಾರೆ ನಗರದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಕೊಪ್ಪಳ ನಗರಸಭೆಯ ಹಿರಿಯ ಆರೋಗ್ಯ ನೀರೀಕ್ಷಕ ರಾಘವೇಂದ್ರ ಚೌಹಾಣ್ ಮತ್ತು ವಿಶ್ವನಾಥ್ ಮತಿತ್ರರು ಕೊಪ್ಪಳ ನಗರದ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ .
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 