ಮಕ್ಕಳ ಜಾತ್ರೋತ್ಸವ : ಅದು ಶಾಲಾ ದೇಗುಲ. ಹರಿದು ಬಂದಿತ್ತು ಸಮುದಾಯದ ಮಹಾಪೂರ ಕಾರ್ಟೂನ್
Children's Fair: It was a school temple. A flood of community cartoons had flowed in.
ಲೋಕದರ್ಶನ ವರದಿ
ಧಾರವಾಡ 01 : ಕರಡಿ ಹಾಗೂ ಮಕ್ಕಳ ಮೇಲೆ ಹೂವಿನ ಮಳೆ ಸುರಿಸಿ ಸ್ವಾಗತ ಮೆರವಣಿಗೆ, ಘೋಷದೊಂದಿಗೆ ಚಿಣ್ಣರಿಗೆ ಅಕ್ಷರಾಭ್ಯಾಸ, ಬಿಸಿ ಊಟ ಅನ್ನ ಸಂತರೆ್ಣ..... ಇದು ಧಾರ್ಮಿಕ ಕಾರ್ಯಕ್ರಮವಲ್ಲ. ಜನಸಮುದಾಯಕ್ಕೆ ಶಾಲೆಯೆಂಬುದು ಪವಿತ್ರ, ದೇಗುಲಕ್ಕಿಂತ ಮಿಗಿಲಾದುದು ಎಂಬುದನ್ನು ಮನಗಾಣಿಸಲು ಧಾರವಾಡ ಜಿಲ್ಲೆಯ ಧಾರವಾಡ ಗ್ರಾಮೀಣ ತಾಲೂಕಿನ ನಿಗದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಾತ್ರೋತ್ಸವ ಮಾದರಿಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವ.
ಮಕ್ಕಳೇ ದೇವರು:
ಶಾಲಾ ಶಿಕ್ಷಣದಲ್ಲಿ ತನ್ನದೇ ಆದ ಪ್ರಗತಿಪರ ಚಿಂತನೆಗಳಿಗೆ ಸೂಕ್ತ ವೇದಿಕೆ ನೀಡುತ್ತಿರುವ ನಿಗದಿ ಹಿ.ಪ್ರಾ.ಶಾಲೆಯ ಜಿಲ್ಲಾಧಿಕಾರಿ, ಜಿ ಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಸ್.ಡಿ.ಎಂ.ಸಿ. ಸಮಿತಿ, ಶಿಕ್ಷಕವೃಂದ, ವಿದ್ಯಾಭಿಮಾನಿಗಳು, ಜನಪ್ರತಿನಿಧಿಗಳು ಈ ವರ್ಷದ ಪ್ರಾರಂಭೋತ್ಸವದ ದಿನ ಮಕ್ಕಳೇ ದೇವರು ಎಂಬ ಮೇರು ಚಿಂತನೆಯನ್ನು ಊರವರಿಗೆ ಸಾರಿ ಹೇಳುವ ಯೋಜನೆಯನ್ನು ಹಾಕಿಕೊಂಡರು. ಅದರಂತೆ ಪ್ರಾರಂಭೋತ್ಸವದಂದು ಶಾಲೆಯಲ್ಲಿಯೇ ಆರಂಭವಾದ ಹೊಸದಾಗಿ ಪ್ರಾರಂಭವಾದ ಎಲ್ ಕೆ ಜಿ ಕೇಂದ್ರದ ಬಳಿ ಸಮಾವೇಶಗೊಂಡ ಇವರು ಶಾಲೆಗೆ ಹೊಸದಾಗಿ ಸೇರುವ ಚಿಣ್ಣರಿಗೆ ಮಲ್ಲಿಗೆ ಮಳೆಸೂರಿಸಿ ಜಿಲ್ಲಾಧಿಕಾರಿ ಚಾಲನೆ ನೀಡಿದರು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಶಾಶ್ವತ ಸಂತೋಷವನ್ನು ನೀಡಿರಿ ಎಂಬ ಸಂದೇಶವನ್ನು ಜಿಲ್ಲಾಧಿಕಾರಿಗಳಾದ ಆರ್ ಸ್ನೇಹ ಪಾಲಕರಿಗೆ ಕರೆ ನೀಡಿದರು.
ಧಾರವಾಡ ತಾಲೂಕಿನ ನಿಗದಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಮಾತನಾಡುತ್ತಾ ಶಿಕ್ಷಣವು ಮಗುವಿನಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಹೊರಗೆಡುವುತ್ತದೆ. ಅದು ಮಗುವಿನ ದೈಹಿಕ ಮತ್ತು ಮಾನಸಿಕ ಹಾಗೂ ಬೌದ್ಧಿಕ ಸಾಮರ್ಥ್ಯಗಳನ್ನು ಅಭಿವೃದ್ಧಿಗೊಳಿಸುತ್ತದೆ. ಶಿಕ್ಷಣದಿಂದ ಶಿಸ್ತು, ಸಂಯಮ, ಸಹಕಾರ, ಸ್ವಾವಲಂಬನೆ, ಗೌರವ ಪಡೆಯುವಂತಾಗುತ್ತದೆ. ಮಕ್ಕಳೊಂದಿಗೆ ಭಾವನಾತ್ಮಕ ಗುಣಗಳು ಬೆಳೆಯುತ್ತವೆ. ಶಿಕ್ಷಣದಿಂದ ಆರೋಗ್ಯ ವೃದ್ಧಿಸುತ್ತದೆ ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪಾಟೀಲ್ ಭುವನೇಶ್ ದೇವಿದಾಸ್ ಮಾತನಾಡುತ್ತಾ ‘ಶಾಲೆ ಆರಂಭವಾಗಿದೆ-ಎಲ್ಲರೂ ಶಾಲೆಗೆ ಬನ್ನಿರಿ, ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ಶಾಲಾ ಶಿಕ್ಷಣ ಇಲಾಖೆಯ ಪರವಾಗಿ ವಿನಂತಿಸಿದರು. ಉಪನಿರ್ದೇಶಕರಾದ ಉಮೇಶ್ ಬೊಮ್ಮಕ್ಕನವರ್ ಪ್ರಸ್ಥಾವಿವಾಗಿ ಮಾತನಾಡಿ ಸರಕಾರಿ ಶಾಲೆ ಎಂದರೆ ಆಲಸ್ಯ ಬೇಡ. ಇಂದಿನ ಸಮಾಜದಲ್ಲಿ ಉತ್ತಮ ಸಾಧನೆ ಮಾಡಿರುವ ಬಹತೇಕರು ಸರಕಾರಿ ಶಾಲೆಯ ವಿದ್ಯಾರ್ಥಿಗಳಾಗಿದ್ದರು ಎಂಬುದೇ ಹೆಮ್ಮೆಯ ವಿಚಾರ ಎಂದರು. ಮಕ್ಕಳಿಗೆ ಹೂ ಹಾಗೂ ಕೀರೀಟ ತೊಡಿಸಿ, ಸ್ವಾಗತಿಸಿದರು. ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ಇತರೆ ಸೌಲಭ್ಯಗಳನ್ನು ಸಾಂಕೇತಿಕವಾಗಿ ವಿತರಿಸಿದರು. ದಾಖಲಾದ ಮಕ್ಕಳನ್ನು ಬಲೂನು, ಬಣ್ಣದ ಕಾಗದಗಳಿಂದ ಅಲಂಕರಿಸಿದ ವಾದ್ಯಮೇಳದೊಂದಿಗೆ ಶಾಲೆಗೆ ಕರೆತರಲಾಯಿತು.
ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಶಾಲಾ ಪ್ರಾರಂಭೋತ್ಸವದಂದು ತೆಂಗಿನ ಗರಿ, ತಳಿರು ತೋರಣ, ಹೂವುಗಳಿಂದ ಅಲಂಕಾರ ಮಾಡಿ ಮೆರವಣಿಗೆಗೆ ಸಿದ್ಧಪಡಿಸಿಕೊಂಡಿದ್ದೆವು. ಈ ಕಾರ್ಯಕ್ರಮದಲ್ಲಿ ಅತ್ಯಂತ ಅದ್ಧೂರಿಯಿಂದ ಮಕ್ಕಳನ್ನು ಕರೆದುಕೊಂಡು ಮೆರವಣಿಗೆ ಮೂಲಕ, ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಬೇಕೆಂದು ಘೋಷಣೆಗಳನ್ನು ಕೂಗಿದೆವು. ಅದಕ್ಕೆ ಪೂರಕವಾಗಿ ಅನೇಕ ಘೋಷಣಾವಾಕ್ಯಗಳ ಚಿಕ್ಕ ಚಿಕ್ಕ ಫಲಕ ಸಿದ್ಧಪಡಿಸಿ ಮಕ್ಕಳ ಕೈಗೆ ಕೊಡಲಾಗಿತ್ತು. ಪಾಲಕರಿಗೆ ಒಂದು ವಿನಮ್ರ ಮನವಿ ಎಂಬ ನೂರಾರು ಘೋಷಣೆ ಮಾಡಲಾಯಿತು. ಮಕ್ಕಳು ಸಹ ಆಸಕ್ತಿಯಿಂದ ಭಾಗವಹಿಸಿ ಶಾಲೆಗೆ ಆಗಮಿಸಿದರು. ಒಟ್ಟಿನಲ್ಲಿ ಮಕ್ಕಳೇ ದೇವರು. ಶಾಲೆಗಿಂತ ಮಿಗಿಲಾದ ದೇಗುಲವಿಲ್ಲ ಎಂಬೆಲ್ಲಾ ನಾಣ್ಣುಡಿಗೆ ನಿಗದಿ ಶಿಕ್ಷಣ ಪ್ರೇಮಿಗಳು ತೊರಿಸಿಕೊಟ್ಟರು.
ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಾದ ಆರ್ ಸ್ನೇಹ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪಾಟೀಲ್ ಭುವನೇಶ್ ದೇವಿದಾಸ್, ಉಪನಿರ್ದೇಶಕರಾದ ಉಮೇಶ್ ಬೊಮ್ಮಕ್ಕನವರ್, ಡಿ ವೈ ಪಿ ಸಿ ಸಿರಾಜ್ ಹುಡೇದಮನಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಮಕೃಷ್ಣ ಸದಲಗಿ. ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಕಿರಿಯ ಆಧಿಕಾರಿಗಳು, ಧಾರವಾಡ ಗ್ರಾಮೀಣ ಹಾಗೂ ಅಳ್ನಾವರ ತಾಲೂಕ ಘಟಕದ ಎಲ್ಲ ನೌಕರ ಹಾಗೂ ಶಿಕ್ಷಕ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸರ್ವ ಪದಾಧಿಕಾರಿಗಳು ಹಾಗೂ ಹೊಸದಾಗಿ ಆಯ್ಕೆಯಾದ ರಾಜ್ಯಮಟ್ಟದ ಹಾಗೂ ಜಿಲ್ಲಾ ಮಟ್ಟದ ಎಲ್ಲ ಪದಾಧಿಕಾರಿಗಳು ಆಗಮಿಸಿದರು. ಮಾಜಿ ಗ್ರಾಮ ಪಂಚಾಯತ್ ಸರ್ವ ಸದಸ್ಯರು, ಬಿಆರಪಿ, ಸಿ.ಆರಿ್ಪ, ಎಸ್ಡಿಎಂಸಿ, ಅಧ್ಯಕ್ಷರು ಸರ್ವ ಸದಸ್ಯರು, ಮುಖ್ಯ ಗುರುಗಳು. ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 