ಸಡಗರ, ಸಂಭ್ರಮದಿಂದ ಜರುಗಿದ ಚಾಂಗದೇವರ ಜಾತ್ರೆ
Changadevara fair held with pomp and celebration
ಬೀಳಗಿ 08: ಸ್ಥಳೀಯ ಯಮನೂರೇಶ್ವರ ಚಕ್ರವರ್ತಿ ಚಾಂಗದೇವರ ಜಾತ್ರೆಯು ಸಡಗರ, ಸಂಭ್ರಮದಿಂದ ನಡೆಯಿತು.ಜಾತ್ರೆಯ ಅಂಗವಾಗಿ ರಂಜಿತ ಘೋರೆ್ಡ ಅವರ ಮನೆಯಿಂದ ಗಂಧ (ಸಂದಲ್) ವನ್ನು ಶನಿವಾರ ರಾತ್ರಿ ವಿವಿಧ ವಾದ್ಯಗಳೊಂದಿಗೆ ಹಿಂದು-ಮುಸ್ಲಿಂ ಬಾಂಧವರು ಯಮನೂರೇಶ್ವರ ದೇವಸ್ಥಾನಕ್ಕೆ ಒಯ್ದರು. ನಂತರ ಹಿರಿಯರ ನೇತೃತ್ವದಲ್ಲಿ ಗಂಧ ಎರಿಸುವ ಕಾರ್ಯಕ್ರಮ ನೆರವೇರಿತು.ಪ್ರತಿ ವರ್ಷವೂ ಅತಿ ವಿಜೃಂಭಣೆಯಿಂದ ಉರುಸ್ ಕಾರ್ಯಕ್ರಮ ಜರಗುತ್ತದೆ. ಹಿಂದೂ ಮುಸ್ಲಿಂ ಸಮುದಾಯದವರು ಈ ಉರಸ್ ನ್ನು ಆಚರಿಸುತ್ತಾರೆ. ಮಹಾತ್ಮರ ಈ ದರ್ಗಾವು ಧಾರ್ಮಿಕ, ಸಾಮಾಜಿಕ ಭಾವೈಕ್ಯ ಸಂಕೇತವಾಗಿ ಗುರುತಿಸಿಕೊಂಡಿವೆ.
ಭಾನುವಾರ ಬೆಳಿಗ್ಗೆಯಿಂದಲೇ ಬೀಳಗಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಜನರು ಕುಟುಂಬ ಸದಸ್ಯರೊಂದಿಗೆ ಯಮನೂರೇಶ್ವರ ದರ್ಗಾಕ್ಕೆ ತೆರಳಿ ಪೂಜೆ ಸಲ್ಲಿಸಿ ಸಕ್ಕರೆ, ಲೋಬಾನ ಕೊಡುವ ಮೂಲಕ ಹರಕೆ ತೀರಿಸಿದರು.ರಂಜಿತ ಘೋರೆ್ಡ, ಆಕರ್ಷ ಘೋರೆ್ಡ, ಶಂಕರ ಬಡಿಗೇರ, ಶ್ರೀಶೈಲ ದಳವಾಯಿ, ಲಕ್ಷ್ಮಣ ತೋಟದ,ಹುಸೆನಸಾಬ ಬಳೂತಿ, ಸಂಗಪ್ಪ ಕಟಗೇರಿ,ಅಡಿವೆಪ್ಪ ಕೆರೂರ, ಮೈನುಸಾಬ್ ತಹಶೀಲ್ದಾರ್,ಸಂತೋಷ ಜಂಬಗಿ, ಇಸ್ಮಾಯಿಲ್ ಕಮತರ ಮನಸುರ್ ಕಾಲೆಬಾವಗೋಳ, ಮೇಹಬೂಬ ಮಕಾಂದಾರ, ಸುನಿಲ ಸಿದ್ದಾಪುರ,ದೀಲಿಪ ಮರಾಠೆ, ನಿಂಗಪ್ಪ ಗಾಂಜಿ,ಶಿವು ವಸ್ತ್ರದ ಇದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 