ಬಸವಣ್ಣನ ಆಪ್ತ ಕಾರ್ಯದರ್ಶಿ ಹಡಪದ ಅಪ್ಪಣ್ಣನವರ 892ನೇ ಜಯಂತಿ ಆಚರಣೆ

ಬಸವಣ್ಣನ ಆಪ್ತ ಕಾರ್ಯದರ್ಶಿ ಹಡಪದ ಅಪ್ಪಣ್ಣನವರ 892ನೇ ಜಯಂತಿ ಆಚರಣೆ Celebration of the 892nd birth anniversary of Hadapada Appanna, the close secretary of Basavanna

ಲಕ್ಷ್ಮೇಶ್ವರ 29 : ತಾಲೂಕು ತಹಸೀಲ್ದಾರ ಕಚೇರಿ ತಾಲೂಕು ಪಂಚಾಯತಿ ಪುರಸಭೆ ಕಾರ್ಯಾಲಯ ಶಿಗ್ಲಿ. ಬಟ್ಟೂರ. ಯಳವತ್ತಿ. ದೊಡ್ಡೂರು ಅಡರಕಟ್ಟಿ ಗ್ರಾಮ ಪಂಚಾಯತಿ ಶಾಲಾ ಕಾಲೇಜುಗಳಲ್ಲಿ 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಆಪ್ತ ಕಾರ್ಯದರ್ಶಿ ವಚನಕಾರ ಶಿವಶರಣ ಹಡಪದ ಅಪ್ಪಣ್ಣನವರ 892ನೇ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸುವುದರೊಂದಿಗೆ ಸಂಭ್ರಮದೊಂದಿಗೆ ಆಚರಿಸಲಾಯಿತುಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ನಡೆದ ಹಡಪದ ಅಪ್ಪಣ್ಣನವರ ಜಯಂತಿ, ಆಚರಣೆ ಕುರಿತು ಶಾಲೆಯ ಪ್ರಧಾನ ಗುರುಗಳಾದ ಬಸವರಾಜ ಕುಂಬಾರ ಅವರು ಮಾತನಾಡಿ 12ನೇ ಶತಮಾನದ ಶರಣರ ಅನುಭವ ಮಂಟಪದಲ್ಲಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಹಡಪದ ಅಪ್ಪಣ್ಣನವರು ಕಾರ್ಯನಿರ್ವಹಿಸಿದ್ದರು.

ಹಡಪದ ಅಪ್ಪಣ್ಣನವರು ಎಂದರೆ ಬಸವಣ್ಣನವರಿಗೆ ಅಪಾರ ನಂಬಿಕೆ ಹೀಗಾಗಿ ಅವರನ್ನು ತಮ್ಮ ಆಪ್ತ ಕಾರ್ಯದರ್ಶಿಯಾಗಿ ಮಾಡಿಕೊಂಡರು ಎಂದು ಇತಿಹಾಸಗಳು ಹೇಳುತ್ತಿವೆ ಹಡಪದ ಅಪ್ಪಣ್ಣನವರು ವಚನಕಾರರಾಗಿದ್ದರುಚನ್ನಬಸವಣ್ಣ ಅಂಕಿತ ನಾಮದಲ್ಲಿ ಸುಮಾರು 250 ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ ಅಪ್ಪಣ್ಣನವರ ಧರ್ಮಪತ್ನಿ ನಿಂಗಮ್ಮನವರು ಸಹ ಮಹಾ ಶರಣೆ ಯಾಗಿದ್ದರು ಅವರು ಸಹ ವಚನಗಳನ್ನು ಬರೆದಿದ್ದಾರೆ. ಇಂಥ ಮಹಾ ಶರಣರ ಜಯಂತಿಯನ್ನು ಆಚರಣೆ ಮಾಡುವುದರೊಂದಿಗೆ ಅವರು ನಡೆದು ಬಂದ ಹಾದಿ ಅವರು ನೀಡಿದ ಕೊಡುಗೆ ಅವರ ಬರೆದ ವಚನಗಳನ್ನು ಓದುವ ಮೂಲಕ ಸದಾ ಅವರನ್ನು ನೆನೆಯಬೇಕಾಗಿದೆ ಅಂತ ಮಹಾ ಶರಣರ ಹಾಕಿಕೊಟ್ಟ ಹಾದಿಯಲ್ಲಿ ನಾವು ನೀವೆಲ್ಲರೂ ಸಾಗೋಬೇಕಾಗಿದೆ ಎಂದರು. ಈ ಸಮಯದಲ್ಲಿ ಶಾಲೆಯ ಶಿಕ್ಷಕರಾದ ಎಂ. ಆರ್ ಶಿರಹಟ್ಟಿ ಎಚ್‌. ಡಿ ಲಿಂಗರೆಡ್ಡಿ ಎಲ್‌. ಎ ಬಣಕಾರ ಎಂ.ಎಂ ಕಳಸೂರು ಆರ ಕೆ ಉಪನಾಳ ಇದ್ದರು.