ಗಾಳೇಶ್ವರ ಮಠದಲ್ಲಿ ಗುರುಪೂರ್ಣಿಮೆ ಮಹೋತ್ಸವ ಆಚರಣೆ
Guru Purnima celebrations at Galeshwara Matha
ಲೋಕದರ್ಶನ ವರದಿ
ನೇಸರಗಿ 29: ಇಲ್ಲಿನ ಗಾಳೇಶ್ವರ ಮಠ ನೇಸರಗಿ - ಮಲ್ಲಾಪುರ ಮಠದ ಶ್ರೀ ರೇವಣಸಿದ್ದೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂಚಲ ಮಠದ ಪರಮಪೂಜ್ಯಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪ ಸಮರೆ್ಣ ಮಾಡಿ ಬುಧವಾರದಂದು ಅರ್ಥಪೂರ್ಣವಾಗಿ ಗುರುಪೂರ್ಣಿಮೆ ಮಹೋತ್ಸವ ಜರುಗಿತು. ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಗುರುಪೂರ್ಣಿಮೆಯನ್ನು ಮೊದಲು ವ್ಯಾಸಪೂರ್ಣಿಮೆ ಎಂದು ಕರೆಯುತ್ತಾರೆ . ಈ ಪವಿತ್ರ ದಿನದಂದು ಶ್ರೀ ಮಠದಲ್ಲಿ ವಿಶೇಷ ಪೂಜೆ, ಗುರು ಸ್ತೋತ್ರ ಪಠಣ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದ್ದು,ಎಲ್ಲಾ ಭಕ್ತಾದಿಗಳು ಆಗಮಿಸಿ ಶ್ರೀಗುರುಗಳ ದರ್ಶನ ಪಡೆದು, ಆಶೀರ್ವಾದ ಪಡೆದು ಸಾರ್ಥಕತೆ ಮೆರೆದಿದ್ದೀರಿ,ಗುರುಪೂರ್ಣಿಮೆಯ ವೇದವ್ಯಾಸ ಮಹರ್ಷಿಗಳು ಅಪಾರ ಜ್ಞಾನಸಂಪನ್ನರಾದ ಮಹಾನುಭಾವರು.
ಅವರು ನಾಲ್ಕು ವೇದಗಳನ್ನು ಈ ಕೆಳಗಿನಂತೆ ವಿಭಾಗ ಮಾಡಿ ತಮ್ಮ ಶಿಷ್ಯರಿಗೆ ಬೋಧಿಸಿದರು. ಜ್ಞಾನದ ಬೆಳಕನ್ನು ನೀಡಿ, ಸನಾತನ ಧರ್ಮದ ಸಂಸ್ಕಾರವನ್ನು ಬೆಳೆಸುವ ಪವಿತ್ರ ಆಚರಣೆಯೇ ಗುರುಪೂರ್ಣಿಮೆ (ವ್ಯಾಸಪೂರ್ಣಿಮೆ). ವೇದವ್ಯಾಸ ಮಹರ್ಷಿಗಳ ಜ್ಞಾನಪರಂಪರೆಯನ್ನು ಸ್ಮರಿಸುತ್ತಾ, ನಮಗೆ ವಿದ್ಯೆ, ಬುದ್ಧಿ ಹಾಗೂ ಸಂಸ್ಕಾರವನ್ನು ಕಲಿಸಿದ ಸರ್ವ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಶುಭ ದಿನವಿದು."ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ..." ಎಂಬ ದಾಸವಾಣಿಯ ಸಂದೇಶದಂತೆ, ನಮ್ಮ ಬದುಕನ್ನು ರೂಪಿಸಿದ ಗುರುಗಳಿಗೆ ಭಕ್ತಿಯಿಂದ ನಮಿಸಿ, ಅವರ ಆಶೀರ್ವಾದವನ್ನು ಪಡೆದು ಧನ್ಯರಾಗೋಣ ಎಂದು ಶ್ರೀ ಚಿದಾನಂದ ಶ್ರೀಗಳು ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಶರಣು ಮಾದಾಪುರಮಠ, ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 