ಜಾತೀಯತೆ ಮತ್ತು ಭ್ರಷ್ಟಾಚಾರ ನಮ್ಮ ಸಮಾಜದ ಪೀಡೆಗಳು : ಮಾಜಿ ಸಚಿವ ಎಸ್.ಎಸ್.ಪಾಟೀಲ
Casteism and corruption are the scourges of our society: Former Minister S.S. Patil
ಲೋಕದರ್ಶನ ವರದಿ
ಧಾರವಾಡ 01 : ಈಗಿನ ನಮ್ಮ ದೇಶವನ್ನು ಗಮನಿಸಿದರೆ ಜಾತೀಯತೆ ಮತ್ತು ಭ್ರಷ್ಟಾಚಾರ ಎಂಬ ಎರಡು ಸಮಸ್ಯೆಗಳು ತೀವ್ರವಾಗಿ ಭಾದಿಸುತ್ತಿವೆ. ಹನ್ನೆರಡನೇಯ ಶತಮಾನದ ಬಸವಣ್ಣನವರ ಕಾಲದ ಶರಣರು ಮಾಡುತ್ತಿದ್ದ ಕಾಯಕಗಳು ಜಾತಿಗಳಾಗಿ ರೂಪಾಂತರ ಹೊಂದಿ ಇಂದು ಜಾತೀಯತೆಯು ಹೆಚ್ಚಾಗಿದೆ. ಅದರಂತೆ ಅಧಿಕಾರಿ ವರ್ಗ ಮತ್ತು ರಾಜಕಾರಣಿಗಳಿಂದ ತೀವ್ರ ಭ್ರಷ್ಟಾಚಾರ ಉಂಟಾಗಿ ಇಡೀ ದೇಶ ನಲುಗುತ್ತಿದೆ ಎಂದು ತೀವ್ರ ನೋವಿನಿಂದ ಮಾಜಿ ಸಹಕಾರ ಸಚಿವ ಶರಣಶ್ರೀ ಎಸ್.ಎಸ್.ಪಾಟೀಲ ಅವರು ಹೇಳಿದರು. ಅವರು ಧಾರವಾಡದಲ್ಲಿ ಗಣಕರಂಗ, ವಚನಸಾಹಿತ್ಯ ಮಂದಾರ ಪೌಂಡೇಶನ್ ಮತ್ತು ಕಲ್ಪತರು ಮಹಿಳಾ ಸಂಘ ಸಂಯುಕ್ತವಾಗಿ ಆಯೋಜಿಸಿದ್ದ ಬುದ್ಧ, ಬಸವಣ್ಣ, ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಗಳಂದು ಆಯೋಜಿಸಿದ್ದ ಕವನ ಮತ್ತು ಲೇಖನ ಸ್ಪರ್ಧಾ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಿ ಮಾತನಾಡುತ್ತಿದ್ದರು.
ಎಲ್ಲಿಯವರೆಗೆ ಸಮಾಜದಲ್ಲಿ ಅಸಮಾನತೆ ಹೋಗುವುದಿಲ್ಲವೋ ಅಲ್ಲಿಯವರೆಗೆ ಈ ಜಾತೀಯತೆಯು ಸಾಮಾನ್ಯರನ್ನು ತೀವ್ರ ತೊಂದರೆಯುಂಟು ಮಾಡುತ್ತದೆ. ಅದರಂತೆ ಎಲ್ಲಿಯವರೆಗೆ ಮಾರಿಕೊಂಡ ಮತದಾರ ಮತ್ತು ಅಂಥವರಿಂದ ಆಯ್ಕೆಯಾಗುವ ರಾಜಕಾರಣಿಗಳ ಸಂತತಿ ನಾಶವಾಗುವುದಿಲ್ಲವೋ ಅಲ್ಲಿಯವರೆಗೆ ಭ್ರಷ್ಟಾಚಾರ ಈ ದೇಶದಿಂದ ಹೋಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲ್ಪತರು ಮಹಿಳಾ ಸಂಘದ ಅಧ್ಯಕ್ಷೆ ಆರತಿ ಪಾಟೀಲ ಅವರು ಬುದ್ಧ, ಬಸವ, ಬಾಬಾಸಾಹೇಬ ಡಾ.ಅಂಬೇಡ್ಕರ್ ಅವರಂಥಹ ಮಹಾತ್ಮರು ಕಂಡ ಕನಸಿನ ಸಮತೆಯ ಸಮಾಜ ನಿರ್ಮಾಣದತ್ತ ನಾವೆಲ್ಲರೂ ಪ್ರಯತ್ನಿಸೋಣ.
ಸಮಾಜದ ಅನಿಷ್ಟ ಆಚರಣೆಗಳು, ಮೂಡನಂಬಿಕೆ, ಸುಶಿಕ್ಷಿತರಾದರೂ ಅಜ್ಞಾನದಿಂದ ಬಳಲುವ ಅನೇಕರನ್ನು ವಾಸ್ತವ ವಿಚಾರಗಳ ಮೂಲಕ ಸರಿದಾರಿಗೆ ತರೋಣ, ಅದಕ್ಕಾಗಿಯೇ ಲೇಖನ, ಕವನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಜೇತರಿಗೆ ಪುಸ್ತಕ, ಪ್ರಮಾಣಪತ್ರ, ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ವಿವರಿಸಿದರು. ವೇದಿಕೆಯಲ್ಲಿ ಕವಿವಿ ಪ್ರಸಾರಾಂಗದ ನಿವೃತ್ತ ನಿರ್ದೇಶಕರಾದ ಡಾ.ಚಂದ್ರಶೇಖರ ರೊಟ್ಟಿಗವಾಡ, ಶರಣತತ್ವ ಚಿಂತಕಿ ಡಾ.ಪುಷ್ಪಾವತಿ ಶಲವಡಿಮಠ, ಹಿರಿಯ ಸಾಹಿತಿ ವೈ.ಜಿ.ಭಗವತಿ, ವಚನಸಾಹಿತ್ಯ ಮಂದಾರ ಪೌಂಡೇಶನ್ ಅಧ್ಯಕ್ಷ ಡಾ.ವಿಜಯಕುಮಾರ ಕಮ್ಮಾರ, ಕೆಸಿಡಿ ಪತ್ರಿಕೋಧ್ಯಮ ಪ್ರಾಧ್ಯಾಪಕ ಡಾ.ಪ್ರಭಾಕರ ಕಾಂಬಳೆ, ಗಣಕರಂಗ ಸ್ಪರ್ಧಾ ಸಮಿತಿ ಅಧ್ಯಕ್ಷ ಸಿದ್ಧರಾಮ ಹಿಪ್ಪರಗಿ, ಸ್ಪರ್ಧಾ ಸಂಯೋಜಕ ಗಣಪತಿ ಚಲವಾದಿ ಉಪಸ್ಥಿತರಿದ್ದು ಸಾಂದರ್ಭಿಕವಾಗಿ ಬುದ್ಧ, ಬಸವಣ್ಣ ಮತ್ತು ಬಾಬಾಸಾಹೇಬ ಡಾ.ಅಂಬೇಡಕರ ಅವರ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಕಲ್ಪತರು ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಸುಧಾ ಕಬ್ಬೂರ ನಿರೂಪಿಸಿದರು. ಸವಿತಾ ಕುಸುಗಲ್ಲ ಸ್ವಾಗತಿಸಿ, ವಂದಿಸಿದರು. ಲತಾ ಮಂಟಾ, ನವ್ಯ, ಪ್ರಿಯಾ, ತನುಜಾ ಮುಗದ, ಪ್ರತಿಭಾ, ಪಾರ್ವತಿ ಹಮ್ಮಿಗಿ, ಲಕ್ಷ್ಮೀ, ಉಮಾ ಬೆನಕಟ್ಟಿ, ಸುಮಾ ಗೌಡರ, ಮಾಧುರಿ ಕುಲಕರ್ಣಿ, ವಿಜಯಲಕ್ಷ್ಮಿ ಪಲ್ಲೇದ ಮುಂತಾದವರು ನಾಡಗೀತೆ, ಪ್ರಾರ್ಥನೆ, ಸಂವಿಧಾನ ಪೀಠಿಕೆ ವಾಚನ ಮಾಡಿ ಸಹಕರಿಸಿದರು. ಬಸವರಾಜ ಕುಂದರಗಿ, ಅಶೋಕ ಹೊನಕೇರಿ, ಮಂಜುನಾಥ ಹಿಪ್ಪರಗಿ, ಮಲ್ಲಮ್ಮ ಕಮ್ಮಾರ, ದೀಪಾ ಪಾಟೀಲ, ಜಗದೀಶ ಮುಗಳಿ, ರುಜುವಾನ ಮಾಯಕೊಂಡ, ಸುನೀತಾ ಮೂರಶಿಳ್ಳಿ, ಹಾಲೇಶ ನಾಯಕ, ಅನುಪಮ ಪಾಟೀಲ, ಬ್ಯಾಡನೂರು ಚನ್ನಬಸವಣ್ಣ, ಇಂದಿರಾ ಮೂಟೆಬೆನ್ನೂರ, ಅರುಣಾ ಗುಜ್ಜರಿ, ರೇಣುಕಾ ಎನ್.ಪಿ, ನಾಗಪ್ಪ ಮಾದರ ಮುಂತಾದವರು ಉಪಸ್ಥಿತರಿದ್ದರು. ಧನ್ಯವಾದಗಳು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 