ಕುಕನೂರ್

ಕಾಲುಜಾರಿ ಕೆಳಗೆ ಬಿದ್ದ ಬಾಲಕ ಸಾವು

ಕಾಲುಜಾರಿ ಕೆಳಗೆ ಬಿದ್ದ ಬಾಲಕ ಸಾವು

ಕುಕನೂರು:  14 ವರ್ಷದ ಬಾಲಕ ಕಾಲು ಜಾರಿ ಕೆರೆಗೆ ಬಿದ್ದ ಪರಿಣಾಮ ಸಾವನ್ನಪ್ಪಿದ ಘಟನೆಗೆ ತಾಲೂಕಿನ ಹರಿ ಶಂಕರ ಬಂಡಿ ಗ್ರಾಮದಾಲ್ಲಿ ಸಂಭವಿಸಿದೆ.  ತಾಲೂಕಿನ ಹರಿ ಶಂಕರ ಬಂಡಿ ಗ್ರಾಮದ ನಿವಾಸಿ ಶಿವಾನಂದಯ್ಯ ಶಂಕ್ರಯ್ಯ ಕಲ್ಮಠ (14) ಮೃತ ಬಾಲಕ ಎಂದು ಗುರುತಿಸಲಾಗಿದ್ದು. ಸಂಜೆ 5:00 ಗಂಟೆಯ ವೇಳೆಗೆ ಶಾಲೆಯಿಂದ ಮನೆಗೆ ಮರಳಿದ ಬಾಲಕ ಬಯಲು ಶೌಚಕ್ಕೆ ಎಂದು ಕೆರೆಯ ಕಡೆಗೆ ಹೋದಾಗ ಘಟನೆ ಸಂಭವಿಸಿದ್ದು. ಬಯಲು ಶೌಚಕ್ಕೆ ಹೋಗಿದ್ದ ಮಗ ತಡವಾದರೂ ಮನೆಗೆ ಬಾರದಿದ್ದಾಗ ಪಾಲಕರಲ್ಲಿ ಆತಂಕ ಉಂಟಾಗಿ ಹುಡುಕಾಡಿದಾಗ ಕಾಲು ಜಾರಿ ಕೆರೆಗೆ ಬಿದ್ದ ವಿಷಯ ಬೆಳಕಿಗೆ ಬಂದಿರುತ್ತದೆ. ಮೃತ ಬಾಲಕನ ಮನೆಯಲ್ಲಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿದ್ದು. ವಿಷಯ ಹರಡುತ್ತಿದ್ದಂತೆಯೇ ಕುಕನೂರು ಪೊಲೀಸ್ ಠಾಣೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು . ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸುದ್ದಿ ಓದಿ