ಭರತನಾಟ್ಯ ಮಕ್ಕಳಿಗೆ ಪಠ್ಯವಾಗಲಿ- ಸಾಹೇಬಗೌಡ

ಭರತನಾಟ್ಯ ಮಕ್ಕಳಿಗೆ ಪಠ್ಯವಾಗಲಿ- ಸಾಹೇಬಗೌಡ Bharatanatyam should be a lesson for children - Sahebagowda

ತಾಳಿಕೋಟೆ 08 : ಶಿಕ್ಷಣ ಎಂದರೆ ಓದು, ಬರಹ, ಲೆಕ್ಕವನ್ನು ಮೀರಿದ ಕಲಾಶಕ್ತಿಯನ್ನು ಹೊಂದಿದೆ. ಕಾರಣ ಮಕ್ಕಳ ಮನೋಚಾಲನಾ ಶಕ್ತಿ ವೃದ್ಧಿಸುವ ಭರತನಾಟ್ಯ ಪಠ್ಯವಾಗಲಿ ಎಂದು ಚಿಂತಕ ಸಾಹಿತಿ ಶಿಕ್ಷಕ ಸಾಹೇಬಗೌಡ ಬಿರಾದಾರ ಮಾತನಾಡಿದರು. ಪಟ್ಟಣದ ನಿಮಿಷಾಂಭ ದೇವಾಲಯದಲ್ಲಿ ವಿಶ್ವಜ್ಯೋತಿ ನವೋದಯ ತರಬೇತಿ ಕೇಂದ್ರ ಹಾಗೂ ಎಸ್‌.ಕೆ.ಭರತನಾಟ್ಯ ಕೇಂದ್ರ ಸಹಯೊಗದಲ್ಲಿ ಹಮ್ಮಿಕೊಂಡ ಎರಡು ತಿಂಗಳ ಬೇಸಿಗೆ ಶಿಬಿರದ ಮುಕ್ತಾಯ ಹಾಗೂ ಜೂನದಿಂದ ಹೊಸ ತರಗತಿಯ ಆರಂಭದ " ಗೆಜ್ಜೆಪೂಜೆ ಹಾಗೂ ವಿತರಣೆ" ಕಾರ್ಯಕ್ರಮವನ್ನು ರವಿವಾರ ಹಮ್ಮಿಕೊಳ್ಳಲಾಗಿತ್ತು.ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಾಹೇಬಗೌಡ ಬಿರಾದಾರ ಮಾತನಾಡಿದರು. 

ಮಕ್ಕಳಿಗೆ ಅಂಕಗಳ ಗಳಿಕೆಗೂ ಪೂರಕವಾಗಬಲ್ಲ,ಏಕಾಗ್ರತೆಯನ್ನು ಹಾಗೂ ಕ್ರಿಯಾಶೀಲತೆಯನ್ನು ಹೆಚ್ಚಿಸಬಲ್ಲ ಸಂಗೀತ ಹಾಗೂ ಭರತನಾಟ್ಯ ತರಬೇತಿಯನ್ನುವರ್ಷಪೂರ್ತಿ ಉಚಿತವಾಗಿ ನೀಡುತ್ತೇವೆ ಎಂದು ವಿಶ್ವಜ್ಯೋತಿ ತರಬೇತಿ ಕೇಂದ್ರದ ಸಂಚಾಲಕಿ ಭುವನೇಶ್ವರಿ ಎಸ್ ಬಿರಾದಾರ ಮಾತನಾಡಿದರು. ಗೆಜ್ಜೆಪೂಜೆ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಿದ್ದು ಪಟಶೆಟ್ಟಿ, ಯಮನಪ್ಪ ಬಿರಾದಾರ,ಚಿದಾನಂದ ಢವಳಗಿ ಹಾಗೂ ನಲ್ವತ್ತಕ್ಕು ಹೆಚ್ಚು ಭರತನಾಟ್ಯ ಕಲಾವಿದೆ ವಿದ್ಯಾರ್ಥಿನಿಯರು ,ಪೋಷಕರು ಭಾಗವಹಿಸಿದ್ದರು.ಇದೆ ಸಂದರ್ಭದಲ್ಲಿ ಬಿರಾದಾರ ದಂಪತಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭರತನಾಟ್ಯ ತರಬೇತಿದಾರರಾದ ಮನಿಷಾ ಮಿರಜಕರ ಸಹೋದರಿಯರು ನಿರೂಪಿಸಿ , ವಂದಿಸಿದರು.