ಗಾಜಾ ಅಲ್-ಶಿಫಾ ಆಸ್ಪತ್ರೆಯ ಮೇಲೆ ದಾಳಿ: 20ಕ್ಕೂ ಹೆಚ್ಚು ಭಯೋತ್ಪಾದಕ ಹತ್ಯೆ

ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ್ದು 20ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಭಯೋತ್ಪಾದಕ ಹತ್ಯೆ ಮಾಡಿದ್ದು 12ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಇದುವರೆಗೆ ಇಪ್ಪತ್ತು ಭಯೋತ್ಪಾದಕರನ್ನು ಅಲ್-ಶಿಫಾ ಆಸ್ಪತ್ರೆಯಲ್ಲಿ ವಿವಿಧ ಕಾರ್ಯಾಚರಣೆ ವೇಳೆ ಹತ್ಯೆ ಮಾಡಲಾಗಿದ್ದು ಡಜನ್ಗಟ್ಟಲೆ ಶಂಕಿತರನ್ನು ವಶಕ್ಕೆ ಪಡೆಯಲಾಗಿದ್ದು ಪ್ರಸ್ತುತ ವಿಚಾರಣೆ ನಡೆಸುತ್ತಿದ್ದೇವೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

ಇಸ್ರೇಲ್ ಹಿಂದೆ ಹಮಾಸ್ ಆಂತರಿಕ ಭದ್ರತಾ ಅಧಿಕಾರಿ ಎಂದು ಗುರುತಿಸಲಾದ ಫೈಕ್ ಅಲ್-ಮಭೌಹ್ ನನ್ನು ಹತ್ಯೆ ಮಾಡಿದ್ದಾಗಿ ವರದಿ ಮಾಡಿದೆ. ಗಾಜಾ ಪೊಲೀಸ್ ಮೂಲವೊಂದು ಆತನ ಸಾವನ್ನು ದೃಢಪಡಿಸಿದೆ, ಮಾಭೌಹ್ ಪಡೆಯಲ್ಲಿ ಬ್ರಿಗೇಡಿಯರ್ ಜನರಲ್ ಆಗಿದ್ದನು.