ಕೋವಿಡ್ -19 ವೈರಾಣು ತಡೆಗಟ್ಟುವ ಕಾರ್ಯಪಡೆಯಲ್ಲಿ ಅಣ್ಣಾಮಲೈ
ಬೆಂಗಳೂರು, ಮಾ.31, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿದ್ದು, ಸದ್ಯ ಅವರು ಕರ್ನಾಟಕದಲ್ಲಿ ಕೊರೊನಾ ವಿರುದ್ಧದ ಸಮರಕ್ಕೆ ಸನ್ನದ್ಧರಾಗಿದ್ದಾರೆ. ಕೊರೊನಾ ಕುರಿತಾಗಿ ಸಲಹೆ ಸೂಚನೆ ನೀಡಲು ಉನ್ನತ ಶಿಕ್ಷಣ ಇಲಾಖೆ ಸಮಿತಿ ರಚಿಸಲಾಗಿದ್ದು, ಅದರಲ್ಲಿ ಅಣ್ಣಾಮಲೈ ಅವರು ಸದಸ್ಯ ಸ್ಥಾನಗಿಟ್ಟಿಸಿಕೊಂಡಿದ್ದಾರೆ.ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿಶ್ವವಿದ್ಯಾನಿಲಯಗಳು, ಕಾಲೇಜು, ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಕಾಲೇಜು/ಸಂಸ್ಥೆಗಳಲ್ಲಿ ಕೊವಿಡ್ -19 ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಉನ್ನತ ಶಿಕ್ಷಣ ಇಲಾಖೆಗೆ ಸಲಹೆ, ಸೂಚನೆ ನೀಡಲು ಸಮರ್ಥವಾದ ಕಾರ್ಯಪಡೆಯನ್ನು ರಚಿಸಲಾಗಿದೆ.ಈ ಕಾರ್ಯಪಡೆಯ ಅಧ್ಯಕ್ಷರಾಗಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ನ ಅಧ್ಯಕ್ಷರಾದ ಐಎಎಸ್ ಅಧಿಕಾರಿ ಎಸ್.ವಿ. ರಂಗನಾಥ್ ಅವರು ನೇಮಕಗೊಂಡಿದ್ದು, ಇದರ ಸದಸ್ಯ ರಾಗಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸೇರಿ ಐಪಿಎಸ್ ಗೋಪಾಲ್ ಹೊಸೂರ್ ಸೇರಿ ಒಟ್ಟು 8 ಮಂದಿ ಸದಸ್ಯರಿದ್ದಾರೆ ಆಯ್ಕೆಗೊಂಡಿದ್ದಾರೆ.ಸದಸ್ಯರಾಗಿ ಐಪಿಎಸ್ ನಿವೃತ್ತ ಅಧಿಕಾರಿ ಗೋಪಾಲ್ ಬಿ.ಹೊಸೂರ್, ನಿವೃತ್ತ ಐಪಿಎಸ್ ಕೆ.ಅಣ್ಣಾಮಲೈ, ಐಎಎಸ್ ಅಧಿಕಾರಿಗಳಾದ ಅನಿರುದ್ದ ಶ್ರವಣ್, ಪ್ರದೀಪ್, ಎಚ್.ಯು.ತಳವಾರ್, ಪ್ರಶಾಂತ್ ಮಿಶ್ರ, ಕೆ.ಎಲ್. ಸುಬ್ರಮಣ್ಯ, ಡಾ.ಎಸ್.ಎ.ಕೋರಿ ಅವರನ್ನು ನೇಮಿಸಲಾಗಿದೆ.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 