ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ನಿವಾಸ ಕಟ್ಟಡದ ಗೇಟ್‌ಗೆ ಕಾರು ಡಿಕ್ಕಿ
ಲಂಡನ್ 26: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಅಧಿಕೃತ ನಿವಾಸ ಹಾಗೂ ಕಚೇರಿ ಕಟ್ಟಡದ ಗೇಟ್‌ಗೆ ಕಾರು ಡಿಕ್ಕಿ ಹೊಡೆದಿದ್ದು, ಕಾರಿನ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಅಪರಾಧ ಕೃತ್ಯ ಎಸಗುವ ಉದ್ದೇಶ ಮತ್ತು ಅಪಾಯಕಾರಿ ಚಾಲನೆಯ ಅನುಮಾನದ ಮೇಲೆ ಶಸ್ತ್ರಸಜ್ಜಿತ ಪೊಲೀಸ್ ಅಧಿಕಾರಿಗಳು ಚಾಲಕನನ್ನು ಬಂಧಿಸಿದ್ದಾರೆ. ಆತನಿಗೆ ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಘಟನೆಯ ಸಮಯದಲ್ಲಿ ರಿಷಿ ಸುನಕ್ ಅವರು ಕಚೇರಿಯಲ್ಲಿದ್ದರೇ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ರಿಷಿ ಸುನಕ್ ಅವರ ಡೌನಿಂಗ್ ಸ್ಟ್ರೀಟ್‌ನ ಮನೆಗೆ ಭದ್ರತೆ ಹೆಚ್ಚಿಸಲಾಗಿದೆ.