ಅಂತರರಾಷ್ಟ್ರೀಯ

ಅಫಘಾನಿಸ್ತಾನ : ಆತ್ಮಾಹುತಿ ಬಾಂಬ್ ದಾಳಿಯಲ್ಲಿ 9 ಸಾವು

ಅಫಘಾನಿಸ್ತಾನ : ಆತ್ಮಾಹುತಿ ಬಾಂಬ್ ದಾಳಿಯಲ್ಲಿ 9 ಸಾವು

  ಕಾಬೂಲ್‍, ಅಕ್ಟೋಬರ್ 01: ಅಫಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರಸಂಘಟನೆಯಿಂದ ಆತ್ಮಾಹುತಿ ಬಾಂಬ್ ದಾಳಿಯಾಗಿದ್ದು, 9 ಮಂದಿ ಮೃತಪಟ್ಟಿದ್ದಾರೆ. 

  ದಕ್ಷಿಣ ಹೆಲ್ಮಂಡ್ ಪ್ರಾಂತ್ಯದ ಭದ್ರತಾ ಚೆಕ್ ಪಾಯಿಂಟ್ ಬಳಿ ಉಗ್ರರು ಕಾರ್ ಬಾಂಬ್ ಸ್ಫೋಟಿಸಿದ್ದು, ಐವರು ಅಫಘಾನ್ ಸೈನಿಕರು ಹಾಗೂ ನಾಲ್ವರು ನಾಗರಿಕರು ಬಲಿಯಾಗಿದ್ದಾರೆ. 

  ಸ್ಥಳೀಯ ಅಧಿಕಾರಿಗಳು ಆತ್ಮಾಹುತಿ ಘಟನೆಯನ್ನು ಹಾಗೂ 9 ಸಾವಿನ ವಿಷಯವನ್ನು ದೃಢಪಡಿಸಿದ್ದಾರೆ. 

ಸುದ್ದಿ ಓದಿ