ದಕ್ಷಿಣ ಕೊರಿಯಾದಲ್ಲಿ 75 ಹೊಸ ಕರೋನ ಪ್ರಕರಣ ದಾಖಲು
ಸಿಯೋಲ್, ಅಕ್ಟೋಬರ್ 6 : ದಕ್ಷಿಣ ಕೊರಿಯಾದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 75 ಕರೋನ ಪ್ರಕರಣ ವರದಿಯಾಗಿದೆ.
ಇದರಿಂದ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 24,239ಕ್ಕೆ ಏರಿಕೆಯಾಗಿದೆ. ಹೊಸ ಪ್ರಕರಣಗಳಲ್ಲಿ 13 ಜನರು ಸಿಯೋಲ್ ನಿವಾಸಿಗಳಾಗಿದ್ದರೆ 34 ಜನರು ಜಿಯೊಂಗ್ಗಿ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದಾರೆ 9 ಪ್ರಕರಣಗಳು ವಿದೇಶಗಳಿಂದ ಆಮದಾಗಿದೆ
ಹೊಸ ಸಾವಿನ ಪ್ರಕರಣ ವರದಿಯಾಗಿಲ್ಲ ಈವರೆಗೆ ಮೃತಪಟ್ಟವರ ಸಂಖ್ಯೆ 422 ಕ್ಕೆ ತಲುಪಿದ್ದು, ಒಟ್ಟು ಸಾವಿನ ಪ್ರಮಾಣವು ಶೇಕಡಾ 1.74 ರಷ್ಟಿದೆ.
ಸಂಪೂರ್ಣ ಚೇತರಿಕೆಯಾದ ನಂತರ ಒಟ್ಟು 197 ರೋಗಿಗಳನ್ನು ಸಂಪರ್ಕತಡೆಯಿಂದ ಬಿಡುಗಡೆ ಮಾಡಲಾಗಿದೆ, ಒಟ್ಟು ಚೇತರಿಕೆ ಪ್ರಮಾಣ 91.11 ರಷ್ಟಿದೆ ಜನವರಿ 3 ರಿಂದ, ದೇಶವು 2.36 ದಶಲಕ್ಷಕ್ಕೂ ಹೆಚ್ಚು ಜನರನ್ನು ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಿದೆ.