ಅಂತರರಾಷ್ಟ್ರೀಯ

ಅಫ್ಘಾನಿಸ್ತಾನದಲ್ಲಿ ಐಇಡಿ ಸ್ಫೋಟ, 7 ಏಳು ಉಗ್ರರ ಸಾವು

ಅಫ್ಘಾನಿಸ್ತಾನದಲ್ಲಿ  ಐಇಡಿ ಸ್ಫೋಟ, 7 ಏಳು ಉಗ್ರರ ಸಾವು

ಕಾಬೂಲ್, ಅಕ್ಟೋಬರ್ 3: ಅಫ್ಘಾನಿಸ್ತಾನದ ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಎರಡು ಆಕಸ್ಮಿಕ ಸ್ಫೋಟಗಳಲ್ಲಿ ಕನಿಷ್ಠ  7  ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದಾರೆ. 

"ಭದ್ರತಾ ಪಡೆಯನ್ನು ಗುರಿಯಾಗಿಸಿ ಉಗ್ರರು  ರಸ್ತೆಯೊಂದರಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಸ್ಫೋಟಿಸಲು  ಪ್ರಯತ್ನಿಸಿದ್ದರು  ಸ್ವಲ್ಪ ಸಮಯದ ನಂತರ, ಸಾಧನವು ಆಕಸ್ಮಿಕವಾಗಿ ಸ್ಫೋಟಗೊಂಡು ಮೂವರು  ಸ್ಥಳದಲ್ಲೇ ಹಾಗೂ ನೆರೆಯ ಷಾ ವಾಲಿ ಕೋಟ್ ಜಿಲ್ಲೆಯಲ್ಲಿ ನಾಲ್ಕು ಉಗ್ರರು ಸಾವನ್ನಪ್ಪಿರುವುದಾಗಿ  ಪ್ರಾಂತೀಯ ಪೊಲೀಸ್ ಕಚೇರಿ ಶನಿವಾರ ದೃಡಪಡಿಸಿದೆ.

ಉಗ್ರರು  ಪ್ರಯಾಣಿಸುತ್ತಿದ್ದ  ವಾಹನವು ಐಇಡಿಯನ್ನು ಮೇಲೆ ಹರಿದು   ಸ್ಫೋಟಕ್ಕೆ ಕಾರಣವಾಗಿದೆ  ಎಂದೂ  ಕ್ಸಿನ್ಹುವಾ ವರದಿ ಮಾಡಿದೆ.

ಅಫ್ಘಾನಿಸ್ತಾನದ ಉಗ್ರರು ಭದ್ರತಾ ಪಡೆಗಳನ್ನು ಗುರಿಯಾಗಿಸಲು ರಸ್ತೆಬದಿಯ ಬಾಂಬ್ ಮತ್ತು ಲ್ಯಾಂಡ್‌ಮೈನ್‌ಗಳನ್ನು ಹಾಗೂ ಮನೆಯಲ್ಲಿ ತಯಾರಿಸಿದ ಐಇಡಿಗಳನ್ನು ಬಳಕೆ ಮಾಡುತ್ತಿದ್ದಾರೆ ಆದರೆ ಕೆಲವು ಸಲ ಅದು ಅವರಿಗೆ ತಿರುಗುಬಾಣವಾಗುತ್ತಿದೆ. 

ಸುದ್ದಿ ಓದಿ