60 ಸಾವಿರ ರೂ. ಗಾಂಜಾ ವಶ : ಇಬ್ಬರ ಬಂದನ
60 thousand rupees worth of ganja seized: Two arrested
60 ಸಾವಿರ ರೂ. ಗಾಂಜಾ ವಶ : ಇಬ್ಬರ ಬಂದನ
ಮುಂಡಗೋಡ, 10 : ತಾಲೂಕಿನ ಪಾಳಾ ಕ್ರಾಸ್ ಬಳಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ಮೇಲೆ ಮುಂಡಗೋಡ ಪೋಲಿಸರು ದಾಳಿ ನಡೆಸಿ 900ಗ್ರಾಂ ತೂಕದ ಗಾಂಜಾ ಸಮೇತ ಆರೋಪಿತರನ್ನು ಬಂಧಿಸಿದ ಘಟನೆ ಶನಿವಾರ ಸಾಯಂಕಾಲ ನಡೆದಿದೆ.
ಆರೋಪಿತನಾದ ಹಾನಗಲ್ ತಾಲೂಕಿನ ಮುಜಾಫರ್ ಅಹ್ಮದ್ ಬ್ಯಾಡಗಿ ಪ್ರಶಾಂತ್ ಅಕ್ಕಿವಳಿ ಎಂಬುವವ ಆರೋಪಿತರನ್ನು ಶನಿವಾರ ಬಂಧಿಸಿದ್ದಾರೆ.ಇನ್ನೋಬ್ಬ ಆರೋಪಿತನಾದ ಹಾನಗಲ್ ಪಟ್ಟಣದ ನವನಗರ ನಿವಾಸಿ ಇಮ್ರಾನ್ ಬ್ಯಾಡಗಿ ಎಂಬಾತನಿಂದ 60000 ರೂ. ಮೌಲ್ಯದ ಗಾಂಜಾವನ್ನು ಪಡೆದುಕೊಂಡು ಬ್ಯಾಗ್ ನಲ್ಲಿ ಇಟ್ಟುಕೊಂಡು ಬೈಕ್‌ನಲ್ಲಿ ಹುಬ್ಬಳ್ಳಿ ಮಾರ್ಗವಾಗಿ ಹೋಗುತ್ತಿದ್ದ ವೇಳೆ ಖಚಿತ ಮಾಹಿತಿಯ ಮೇರೆಗೆ ಪಾಳಾ ಕ್ರಾಸ್ ಬಳಿ ಪಿಎಸೈ ಪರಶುರಾಮ ಮಿರ್ಜಗಿ ನೇತೃತ್ವದ ತಂಡ ದಾಳಿ ನಡೆಸಿ 900ಗ್ರಾಂ ತೂಕದ ಗಾಂಜಾ, ಸಾಗಾಟಾಕ್ಕೆ ಬಳಿಸಿದ ಬೈಕ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಹೆಚ್ಚುವರಿ ಎಸ್ಪಿಗಳಾದ ಕೃಷ್ಣಮೂರ್ತಿ ಜಿ., ಜಗದೀಶ ನಾಯ್ಕ, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ, ಮಾರ್ಗದರ್ಶನದಲ್ಲಿ ಸಿಪಿಐ ಆರ್. ನೀಲಮ್ಮನವರ, ಪಿಎಸೈ ಪರಶುರಾಮ ಮಿರ್ಜಗಿ ನೇತೃತ್ವದಲ್ಲಿ, ಸಿಬ್ಬಂದಿಗಳಾದ ಮಂಜಪ್ಪ ಚಿಂಚಲಿ, ಕೊಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ಮಹಾಂತೇಶ ಮುದೋಳ, ಬಸವರಾಜ ಒಡೆಯರ ಮತ್ತು ಮಂಜುನಾಥ ಓಣಿಕೇರಿ ಕಾರ್ಯಚರಣೆಯಲಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 