ವಾಯವ್ಯ ಚೀನಾದಲ್ಲಿ ಮಾರುಕಟ್ಟೆಗೆ ನುಗ್ಗಿದ ಟ್ರಕ್: 6 ಮಂದಿ ಸಾವು, 14 ಜನರಿಗೆ ಗಾಯ
ಲ್ಯಾನ್‍ಜೌ, ಅಕ್ಟೋಬರ್ 5: ವಾಯವ್ಯ ಚೀನಾದ ಗನ್ಸು ಪ್ರಾಂತ್ಯದ ಡಿಂಗ್ಷಿ ನಗರದ ಮಿನ್ಷಿಯಾನ್ ಕೌಂಟಿಯಲ್ಲಿ ಸೋಮವಾರ ಟ್ರಕ್ ವೊಂದು ಮಾರುಕಟ್ಟೆಗೆ ನುಗ್ಗಿ ಆರು ಜನರು ಮೃತಪಟ್ಟಿದ್ದು, ಇತರ 14 ಮಂದಿ ಗಾಯಗೊಂಡಿದ್ದಾರೆ ಎಂಬುದಾಗಿ ದೃಢಪಟ್ಟಿದೆ.
ಗಾಯಗೊಂಡವರಲ್ಲಿ ಐವರು ತೀವ್ರ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳೀಯ ಕಾಲಮಾನ ಬೆಳಿಗ್ಗೆ 5. 45 ಕ್ಕೆ ಅಪಘಾತ ಸಂಭವಿಸಿದೆ. ಟ್ರಕ್ ನ ಚಾಲಕ ಕೃಷಿ ಉತ್ಪನ್ನ ಮಾರುಕಟ್ಟೆಗೆ ವಾಹನವನ್ನು ಓಡಿಸಿದ್ದರಿಂದ ಸಾವುನೋವು ಸಂಭವಿಸಿದೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಸದ್ಯ, ಪೊಲೀಸ್ ವಶದಲ್ಲಿದ್ದು, ಘಟನೆಗೆ ಕಾರಣ ತನಿಖಾ ಹಂತದಲ್ಲಿದೆ. ಪ್ರಾಂತೀಯ ತುರ್ತುಸ್ಥಿತಿ ನಿರ್ವಹಣಾ ವಿಭಾಗವು ಕಾರ್ಯ ತಂಡವನ್ನು ತನಿಖೆಗಾಗಿ ಸ್ಥಳಕ್ಕೆ ಕಳುಹಿಸಿದೆ.