ಮುಧೋಳ

ಶ್ರೀಸಂಗಮನಾಥ ಕನ್ನಡ ಮಾಧ್ಯಮ ಶಾಲೆಗೆ ನಿರಂತರ 15ನೇ ಬಾರಿಗೆ ಶೇ 100 ಫಲಿತಾಂಶ

ಶ್ರೀಸಂಗಮನಾಥ ಕನ್ನಡ ಮಾಧ್ಯಮ ಶಾಲೆಗೆ ನಿರಂತರ 15ನೇ ಬಾರಿಗೆ ಶೇ 100 ಫಲಿತಾಂಶ







ಮುಧೋಳ 12: ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಸಂಗಮನಾಥ ಕನ್ನಡ ಮಾಧ್ಯಮ ಪ್ರೌಢ ಶಾಲೆಯು 2023-24ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 100 ಫಲಿತಾಂಶದೊಂದಿಗೆ ನಿರಂತರ 15 ಭಾರಿಗೆ ಶೇ. 100 ಫಲಿತಾಂಶ ಮಾಡಿದ ಕೀರ್ತಿಗೆ ಪಾತ್ರವಾಗಿದೆ.  

ಒಟ್ಟು 41 ವಿದ್ಯಾರ್ಥಿಗಳಲ್ಲಿ 20  ವಿದ್ಯಾರ್ಥಿಗಳು ಡಿಸ್ಟಿಂಗಷನ್ 21 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 

ಮಹ್ಮದ ತಾಹೀರ್  ಅ. ಧಾರವಾಡಕರ   (594)ಶೇ.95.04 (ಪ್ರಥಮ), ಸಾಗರ ಹ.ಕೊರ್ತಿ,(581) ಶೇ.93,(ದ್ವಿತೀಯ), ತಬಸುಮ ಮೈ. ಮಂಟೂರ, (572) ಶೇ.91.52(ತೃತೀಯ), ಕೀರ್ತಿ ಶಂ.ಯಳಮೇಲಿ, ಸಂಪತ್ ಸು.ಗೊಡಚಿ, (563) ಶೇ 90.08(ಚತುರ್ಥ). ಸುಷ್ಮಾ ಹ.ಅನವಾಲ (559) ಶೇ.89.44 (ಐದನೆಯ) ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಮುಖ್ಯೋಪಾಧ್ಯಾಯ ವೆಂಕಟೇಶ ಗುಡೆಪ್ಪನವರ ತಿಳಿಸಿದ್ದಾರೆ.  

ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಅಧ್ಯಕ್ಷ ಶಿವಕುಮಾರ ಎಸ್‌.ಮಲಘಾಣ, ಕಾರ್ಯಾಧ್ಯಕ್ಷ ಶಿಶಿರ ಎಸ್‌.ಮಲಘಾಣ,ಆಡಳಿತಾಧಿಕಾರಿ ಮಲ್ಲು ಕಳ್ಳೆನವರ, ಪ್ರಾಚಾರ್ಯ ಸುರೇಶ ಭಜಂತ್ರಿ, ಮುಖ್ಯೋಪಾಧ್ಯಾಯ ವೆಂಕಟೇಶ ಗುಡೆಪ್ಪನವರ ಅಭಿನಂದಿಸಿದ್ದಾರೆ. 


ಸುದ್ದಿ ಓದಿ