ರಸ್ತೆಗೆ ಗಲೀಜು ಕೊಳಚೆ ನೀರಿನಿಂದ ಮುಕ್ತಿ ಸಿಕ್ಕೀತೇ?
Will the road be free from dirty sewage?
ರಸ್ತೆಗೆ ಗಲೀಜು ಕೊಳಚೆ ನೀರಿನಿಂದ ಮುಕ್ತಿ ಸಿಕ್ಕೀತೇ?
ಯಮಕನಮರಡಿ 13: ಸಮೀಪದ ಹತ್ತರಗಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಆನಂದಪೂರ ಗ್ರಾಮದಲ್ಲಿ ರಾರಾಜಿಸುತ್ತಿರುವ ಕೊಳಚೆ ರಸ್ತೆಗಳು ಸದರಿ ಗ್ರಾಮಕ್ಕೆ ಪ್ರತಿವರ್ಷವು ಸಚಿವರ ಅನುದಾನದಲ್ಲಿ ಕೋಟಿ ಕೋಟಿ ಅನುದಾನ ಬಂದರೂ ಸಹಿತ ರಸ್ತೆಗಳು ಮಾತ್ರ ಗಲೀಜು ನೀರಿನಿಂದ ತುಂಬಿ ತುಳುಕುತ್ತಿರುವುದು ಮಾತ್ರ ಶಾಶ್ವತವಾಗಿ ಉಳಿದಿದೆ. ಈ ಪರಿಸ್ಥಿತಿ ಕಂಡರೂ ಸಹಿತ ಅಲ್ಲಿಯ ಜನಪ್ರತಿನಿಧಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ 100 ಕ್ಕೆ 100 ಭರವಸೆ ನಿಡುತ್ತಾರೆ. ಆದರೇ ಕೋಟಿ ಕೋಟಿ ಹಣ ಎಲ್ಲಿ ಖರ್ಚಾಗುತ್ತಿದೆ ಎಂಬುದು ತಿಳಿಯಲಾರದ ಸಂಗತಿಯಾಗಿದೆ.
ಸದರಿ ರಸ್ತೆಯ ಮೇಲೆ ರಾತ್ರಿ ವೇಳೆ ಸಂಚರಿಸುವಂತಿಲ್ಲ ಒಂದು ವೇಳೆ ಸಂಚರಿಸಿದರೆ ಆಯತಪ್ಪಿ ಗಲೀಜು ನೀರಿನಲ್ಲಿ ಬೀಳುವುದು ಖಚಿತ. ಬೆಳಕಿನಲ್ಲಿ ಮಾತ್ರ ಅವಕಾಶ. ಈ ರಸ್ತೆಗೆ ವಾರಸುದಾರರು ಯಾರು ಎಂಬುದು ತಿಳಿಯಲಾರದ ಸಂಗತಿಯಾಗಿದೆ.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 