ಜಿಲ್ಲೆಯಲ್ಲಿ ಗೃಹಬಳಕೆ ಸಿಲೆಂಡರ್ ದಾಸ್ತಾನಿದ್ದು, ಗ್ರಾಹಕರು ಸುಳ್ಳು ವದಂತಿಗಳನ್ನು ನಂಬಬಾರದು: ಜಿಲ್ಲಾಧಿಕಾರಿ ಸ್ನೇಹಲ್ ಆರ್
There is a stock of domestic cylinders in the district, consumers should not believe false rumors:
ಧಾರವಾಡ ಮಾ.12: ಜಿಲ್ಲೆಯ ಸಾರ್ವಜನಿಕರು, ಗೃಹಬಳಕೆ ಅಡಿಗೆ ಅನಿಲ ಗ್ರಾಹಕರು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಕಿವಿಗೊಡಬಾರದು. ದೇಶಾದ್ಯಂತ ಎಲ್‌ಪಿಜಿ ಉತ್ಪಾದನೆ ಮತ್ತು ಬಾಟಲಿಂಗ್ ಎರಡೂ ಹೆಚ್ಚಿರುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಸದ್ಯ ಸಿಲೆಂಡರ್‌ಗಳ ದಾಸ್ತಾನು ಲಭ್ಯವಿದೆ. ಆದ್ದರಿಂದ ಗ್ರಾಹಕರು ಗಾಬರಿಗೊಳ್ಳಬಾರದೆಂದು ಹಾಗೂ ಹೆಚ್ಚುವರಿಯಾಗಿ ಸಿಲೆಂಡರ್‌ಗಳ ದಾಸ್ತಾನು ಮಾಡಿಕೊಳ್ಳಬಾರದೆಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಹೆಚ್ಚೆಚ್ಚು ಗ್ರಾಹಕರು ಮುಂಚಿತವಾಗಿ ಬುಕ್ಕಿಂಗ್ ಮಾಡುತ್ತಿರುವುದರಿಂದ ಐವಿಆರ್‌ಎಸ್, ಮಿಸಡ್ ಕಾಲ್ ಮಾಡುವ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗಿ ಸದರಿ ಸಿಸ್ಟಮ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಆದ್ದ್ದರಿಂದ ಪರ್ಯಾಯವಾಗಿ ಐಒಸಿಎಲ್, ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್ ಎಲ್‌ಪಿಜಿ ತೈಲ ಕಂಪನಿಗಳು ಗ್ರಾಹಕರಿಗೆ 6 ಬುಕ್ಕಿಂಗ್ ವಿಧಾನಗಳನ್ನು ಕಲ್ಪಿಸಿವೆ. ಪೋರ್ಟಲ್‌ಗಳು ಮತ್ತು ಪಾವತಿ ಅಪ್ಲಿಕೇಶನ್ ಗಳನ್ನು ಗ್ರಾಹಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಈ ಸೌಲಭ್ಯಗಳನ್ನು ಬಳಸಬಹುದು. ಗ್ರಾಹಕರು ಪ್ರತಿ ಗೃಹಬಳಕೆಯ ಸಿಲೆಂಡರ್‌ನ್ನು ಬುಕ್ಕ್ ಮಾಡಿ ಪಡೆದುಕೊಂಡ ನಂತರ ಮತ್ತೊಂದು ಗೃಹಬಳಕೆಯ ಸಿಲೆಂಡರ್ ಬೇಡಿಕೆಗಾಗಿ 25 ದಿನಗಳ ನಂತರ ಬುಕ್ಕ್ ಮಾಡಲು ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಎಲ್‌ಪಿಜಿ ಸಿಲೆಂಡರ್‌ಗಳ ಕೊರತೆ ಇರುವುದಿಲ್ಲ. ಆದ್ದರಿಂದ ಸಾರ್ವಜನಿಕರು, ಜಿಲ್ಲೆಯ ಎಲ್ಲಾ ಎಲ್‌ಪಿಜಿ ಗ್ರಾಹಕರು ಭಯಪಡುವ ಅಗತ್ಯವಿಲ್ಲ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಅವರು ಹೇಳಿದ್ದಾರೆ. ಒಂದು ವೇಳೆ ಯಾವದೇ ಸಮಸ್ಯೆ ಕಂಡುಬಂದಲ್ಲಿ ಜಿಲ್ಲೆಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಪರಿಹರಿಸಿಕೊಳ್ಳಬಹುದು. ಸಾರ್ವಜನಿಕರು, ಎಲ್‌ಪಿಜಿ ಗ್ರಾಹಕರು ಸಮಸ್ಯೆಗಳಿದ್ದಲ್ಲಿ ಧಾರವಾಡ ನಗರ (ಸಹಾಯಕ ನಿರ್ದೇಶಕರು-9164603114 ಮತ್ತು ಆಹಾರ ನೀರೀಕ್ಷಕ-8296702244).ಧಾರವಾಡ ಗ್ರಾಮೀಣ (ಆಹಾರ ಶಿರಸ್ತೇದಾರ-9845202400 ಮತ್ತು ಆಹಾರ ನೀರೀಕ್ಷಕ-8310109795, 9844080222) ಹಾಗೂ ಅಳ್ನಾವರ (ಆಹಾರ ನೀರೀಕ್ಷಕ-9448221892), ಹುಬ್ಬಳ್ಳಿ ನಗರ (ಸಹಾಯಕ ನಿರ್ದೇಶಕ-9035074105 ಮತ್ತು ಆಹಾರ ನೀರೀಕ್ಷಕ-7618760734, 9141266510, 8147744685), ಹುಬ್ಬಳ್ಳಿ ಗ್ರಾಮೀಣ (ಆಹಾರ ನೀರೀಕ್ಷಕ-9482532326), ಕಲಘಟಗಿ ತಾಲ್ಲೂಕು (ಆಹಾರ ನೀರೀಕ್ಷಕ-6364304842), ಕುಂದಗೋಳ ತಾಲ್ಲೂಕು (ಆಹಾರ ನೀರೀಕ್ಷಕರ- 9448324052),ಅಣ್ಣಿಗೇರಿ ತಾಲ್ಲೂಕು (ಆಹಾರ ಶಿರಸ್ತೇದಾರ-9620734505), ನವಲಗುಂದ ತಾಲ್ಲೂಕು (ಆಹಾರ ನೀರೀಕ್ಷಕರ-8694971257) ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲೆಯ ಜಂಟಿ ನಿರ್ದೇಶಕರ ಕಛೇರಿಯ ದೂರವಾಣಿ ಸಂಖ್ಯೆ 0836-2444594 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 