ಕಾರವಾರ: ರೆಡ್ಕ್ರಾಸ್ ಸಂಸ್ಥಾಪಕನ ದಿನಾಚರಣೆ ರೋಗಿಗಳಿಗೆ ಹಣ್ಣು ಹಂಪಲು ಹಂಚುವ ಮೂಲಕ ಹೆನ್ರಿ ಡ್ಯೂನಾಂಡ್ ನೆನಪು
ಕಾರವಾರ 8 : ರೆಡ್ ಕ್ರಾಸ್ ಸಂಸ್ಥಾಪನಾ ದಿನಾಚರಣೆಯನ್ನು , ರೆಡ್ಕ್ರಾಸ್ ಜನಕ ಜೀನ್ ಹೆನ್ರಿ ಡ್ಯೂನಾಂಟ್ರ ಜನ್ಮ ದಿನಾಚರಣೆಯಂದೇ ಇಲ್ಲಿನ ಮೆಡಿಕಲ್ ಕಾಲೇಜು ಅಧೀನ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ಹಾಗೂ ಬ್ರೆಸ್ ಹಂಚುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಭಾರತೀಯ ರೆಡ್ಕ್ರಾಸ್ ಘಟಕದ ವತಿಯಿಂದ ಸರಳವಾಗಿ ಆಚರಿಸಲಾಯಿತು.
ಜಿಲ್ಲಾ ರೆಡ್ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ನಜೀರ್ ಶೇಖ್, ಕಿಮ್ಸ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಹಾಗೂ ಮುಖ್ಯಸ್ಥ ಡಾ.ನರೇಶ್ ಪಾವುಸ್ಕರ್, ಡಾಕ್ಟರ್ ಶಿವಾನಂದ ಕುಡ್ತಲಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ರೆಡ್ ಕ್ರಾಸ್ ಕಾರ್ಯಕಾರಿ ಸಮಿತಿ ಸದಸ್ಯರ ಸಮ್ಮುಖದಲ್ಲಿ ರೋಗಿಗಳಿಗೆ ಹಣ್ಣು ಬ್ರೆಡ್ ನೀಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ಆಸ್ಪತ್ರೆಯ ಎಲ್ಲಾ ವಾರ್ಡಗಳ ರೋಗಿಗಳಿಗೂ, ಹೆರಿಗೆಯಾದ ಮಹಿಳೆ ಮತ್ತು ಮಕ್ಕಳ ವಾರ್ಡಗೂ ಸಹ ಹಣ್ಣು ಬ್ರೆಡ್ ವಿತರಿಸಲಾಯಿತು. ರೆಡ್ ಕ್ರಾಸ್ ಜಿಲ್ಲಾ ಕಾರ್ಯದಶರ್ಿ ಜಗದೀಶ ಬಿಕರ್ೋಡಿಕರ್ ಕಾರ್ಯಕ್ರಮದ ಜವಾಬ್ದಾರಿ ನಿರ್ವಹಿಸಿದರು. ವೇದಿಕೆಯ ಕಾರ್ಯಕ್ರಮಗಳನ್ನು ಕೈಬಿಟ್ಟು ನೇರವಾಗಿ ರೋಗಿಗಳಿಗೆ ಸಂತೈಸುವ ಕೆಲಸ ಮಾಡಲಾಯಿತು.
ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಮಹಿಳಾ ಮತ್ತು ಮಕ್ಕಳ ವಿಭಾಗದ ಖೈರುನ್ನೀಸಾ ಶೇಖ್, ವಿಪತ್ತು ವಿಭಾಗದ ಮುಖ್ಯಸ್ಥ ಮಾಧವ ನಾಯಕ, ರೆಡ್ಕ್ರಾಸ್ ಕೋಶಾಧ್ಯಕ್ಷ ಎಲ್.ಕೆ.ನಾಯ್ಕ, ರಾಜ್ಯ ಸಮಿತಿ ಪ್ರತಿನಿಧಿ ಸದಾನಂದ ನಾಯ್ಕ, ಕಾರ್ಯಕಾರಿ ಸಮಿತಿ ಸದಸ್ಯರಾದ ಮಂಜು ಕಡತೋಕ, ನಾಗರಾಜ ಹರಪನಹಳ್ಳಿ,ಅಲ್ತಾಫ್ ಶೇಖ್,ಸಲೀಂ ಶೇಖ್, ರಾಮಾ ನಾಯ್ಕ, ಆರ್.ಎಸ್.ನಾಯ್ಕ, ಸಂದೀಪ ರೇವಣಕರ್, ಅಮರನಾಥ ಶೆಟ್ಟಿ, ಶ್ರೀಮತಿ ಬಿಕರ್ೋಡಿಕರ್ ಸೇರಿದಂತೆ ರೆಡ್ ಕ್ರಾಸ್ನ ಕೆಲ ಸದಸ್ಯರು ಸಹ ಭಾಗವಹಿಸಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 