ಕೊಪ್ಪಳದಲ್ಲಿ ಅದ್ದೂರಿಯಾಗಿ ಜರುಗಿದ ಶಿವಾಜಿ ಜಯಂತ್ಯೋತ್ಸವ
Shivaji Jayanti celebrated with grandeur in Koppal
ಕೊಪ್ಪಳ 19 : ನಗರದ ಶಾರದಾ ಚಿತ್ರಮಂದಿರದ ಬಳಿಯ ಹಳೆ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಬುಧವಾರ ಮರಾಠ ಸಮಾಜದ ಕುಲ ನಾಯಕ ಹಾಗೂ ಹಿಂದೂ ಸಾಮ್ರಾಜ್ಯದ ಅದಿಪತಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ನ ಕೊಪ್ಪಳ ಜಿಲ್ಲಾದ್ಯಕ್ಷ ಕಳಕಪ್ಪ ಜಾದವ್ ಮಾತನಾಡಿ, ಶಿವಾಜಿ ಮಹಾರಾಜರು ಕೇವಲ ಮರಾಠ ಜನಾಂಗಕ್ಕೆ ಅಷ್ಟೆ ಸೀಮಿತವಾಗಿರದೆ ಅವರು ಸಮಸ್ತ ಹಿಂದೂ ಸಾಮ್ರಾಜ್ಯದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಖಂಡ ಭಾರತದ ಪರಿಕಲ್ಪನೆ ಅವರ ಗುರಿಯಾಗಿತ್ತು ಎಂದರು.ವೇದಿಕೆಯಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಪ್ರಕಾಶ ಮಂಗಳೂರ, ಉಪಾದ್ಯಕ್ಷ ಕ್ರಿಷ್ಟಪ್ಪ ಬಂಕದ, ತಾಲೂಕು ಅದ್ಯಕ್ಷ ನಾಗರಾಜ ಅಡ್ಯಾಳ, ಸುಭಾಶ್, ಡಾ. ನಾಗರಾಜ, ನಾಗೇಂದ್ರರಾವ್ ಸುರ್ವೆ, ಶಿವಾಜಿ ಜಾದವ್, ಗುರ್ಪ ಬೂದಗುಂಪಿ, ಸಂತೋಷ ಲೊಂಡೆ, ತಾನಾಜಿ ಮರಾಠ, ವಸಂತ ಲೊಂಡೆ,ಬಾಳಪ್ಪ ಪವಾರ್, ಉಮೇಶಬಾಬು ಸುರ್ವೆ, ಜೀಜಾಬಯಿ ಮಹಿಳಾಮಂಡಳದ ಅದ್ಯಕ್ಷೆ ಹೇಮಕ್ಕ ಮಂಗಳೂರು, ಶಿಲ್ಪಾ ಮಂಗಳೂರು, ವೀಣಾ ಲೊಂಡೆ, ಗೀತಾ ಆನಂದ, ಶಾಂತಾಬಾಯಿ ಕಮ್ಮಾರ, ಶಿಲ್ಪಾ ಚೋಪಡೆ, ಮಂಜುಳಾ ಪವಾರ್, ವಸುಂದರಾ ಜಾದವ್, ಪ್ರೇಮಾ ಓಲಿ ಮತ್ತಿತರರು ಭಾಗವಹಿಸಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 