ರೂ. 3500 ಬೆಂಬಲ ಬೆಲೆ ನೀಡಿ ರೈತರ ಕಷ್ಟಕ್ಕೆ ಆಸರೆಯಾಗಿ: ಧರ್ಮಣ್ಣ
Providing Rs. 3500 support price to help farmers' hardships: Dharmanna
ಸಿಂದಗಿ 07: ರಾಜ್ಯದಲ್ಲಿ ಅತೀವೃಷ್ಟಿಯಿಂದ ಎಲ್ಲ ಬೆಳೆಗಳ ಹಾನಿಯಾಗಿ ರೈತರು ಸಂಕಷ್ಟ ಎದುರಿಸುವಂತಾಗಿದ್ದು ಅಲ್ಪ ಸ್ವಲ್ಪ ಇರುವ ಕಬ್ಬಿಗೆ ಈ ಜಿಲ್ಲೆಯಲ್ಲಿರುವ ಎಲ್ಲ ಕಾರ್ಖಾನೆಗಳು ರೂ. 3500 ವೈಜ್ಞಾನಿಕ ಬೆಂಬಲ ಬೆಲೆ ನೀಡಿ ರೈತರ ಕಷ್ಟಕ್ಕೆ ಆಸರೆಯಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸೀರು ಸೇನೆ ಉತ್ತರ ವಲಯ ಅಧ್ಯಕ್ಷ ಧರ್ಮಣ್ಣ ಬಿರಾದಾರ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸೀರು ಸೇನೆವತಿಯಿಂದ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 3ರಂದು ಜಿಲ್ಲಾಧಿಕಾರಿಗಳು ಎಲ್ಲಾ ರೈತರ ಸಭೆ ಕರೆಯಲಾಗಿತ್ತು ಆ ಸಭೆಯಲ್ಲಿ ಕಾರ್ಖಾನೆಗಳು ಹಳೆ ಜಾಳಿ ಮುಂದುವರೆಸದಂತೆ ಏಚ್ಚರಿಕೆ ನೀಡಿ ರೈತರಿಗೆ ಸಾಥ್ ನೀಡಿದ್ದಾರೆ. ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಜವಾಬ್ದಾರಿ ಹೊತ್ತುಕೊಳ್ಳಬೇಕು. ಹಿಂದೆ ಕಾರ್ಖಾನೆಗಳು ನೀಡಿದ ಬೆಲೆಗೆ ಅಣಿಯಾಗಬಾರದು. ರೈತರು ಕಷ್ಠದಿಂದ ಹೊರಬೇಕಾದರೆ ಕನಿಷ್ಠ ಮೂರುವರೆ ಸಾವಿರ ಬೆಲೆ ನೀಡಬೇಕು. ಆ ಬೆಲೆ ನಿಗದಿಯಾಗುವವರೆಗೂ ಕಬ್ಬು ಕಟಾವು ಮಾಡಲು ಬೀಡುವುದಿಲ್ಲ ಎಂದು ಏಚ್ಚರಿಕೆ ನೀಡಿದರು.
ರೈತ ಸಂಘದ ಉಪಾಧ್ಯಕ್ಷ ಮುತ್ತುಗೌಡ ಪಾಟೀಲ ಮಾತನಾಡಿ, ಸನ್ 2025-26ನೇ ಸಾಲಿನಲ್ಲಿ ರೈತರ ಕಬ್ಬಿಗೆ ಬೆಂಬಲ ಬೆಲೆ ನೀಡಬೇಕು ಎಂದು ಇಡೀ ರಾಜ್ಯಾದ್ಯಂತ ಹೋರಾಟ ನಡೆಯುತ್ತಿದ್ದು ಕಳೆದ ವರ್ಷ ಬರೀ 18 ನೂರ ಬೆಲೆ ನೀಡಿದ್ದು ಇದನ್ನು ಸಕ್ಕರೆ ಸಚಿವ ಶಿವಾನಂದ ಪಾಟೀಲ, ಶಾಸಕ ಅಶೋಕ ಮನಗೂಳಿ ಅವರು ಕಾರ್ಖಾನೆ ಮಾಲೀಕರ ಜೊತೆ ಮಾತನಾಡಿ ರೈತರಿಗೆ 3500 ಬೆಲೆ ನೀಡುವಂತೆ ಮಾಡಿ ರೈತರ ಕಷ್ಟಕ್ಕೆ ಸಹಕಾರಿಯಾಗಬೇಕು ಎಂದು ಮನವಿ ಮಾಡಿದರು.
ತಾಲೂಕು ಸಂಚಾಲಕ ಧರ್ಮಣ್ಣ ಗಬಸಾವಳಗಿ ಮಾತನಾಡಿ, ರೈತರು ಅನೇಕ ವರ್ಷಗಳೀಂದ ಪ್ರಕೃತಿ ವಿಕೋಪಕ್ಕೆ ಸಿಲುಕಿ ಹಾನಿಯೊಳಗಾಗುತ್ತ ಬಂದಿದ್ದಾರೆ ಅಲ್ಲದೆ ಈ ಬಾರಿ ಅತೀವೃಷ್ಠಿಯಿಂದ ಎಲ್ಲ ಬೆಳೆಗಳು ಹಾನಿಯಾಗಿ ಸಂಕಷ್ಠದಲ್ಲಿ ಸಿಲುಕಿದ್ದಾರೆ. ಕಾರಣ ಸರಕಾರ ಮಧ್ಯ ಪ್ರವೇಶಿಸಿ ಕಾರ್ಖಾನೆ ಮಾಲೀಕರಿಗೆ ಸೂಚನೆ ನೀಡಿ ಕನಿಷ್ಠ ಮೂರುವರೆ ಸಾವಿರ ಬೆಲೆ ನೀಡುವಂತೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 