ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ
ಲೋಕದರ್ಶನ ವರದಿ
ಮುಧೋಳ21: ಡಾ. ಅಂಬೇಡ್ಕರ ಅವರ ಆಶಯದಂತೆ ಭಕ್ತರು ಗುಡಿಗೆ ಪಾಳಿ ಹಚ್ಚಿದಂತೆ ಗ್ರಂಥಾಲಯಕ್ಕೆ ಪಾಳಿ ಹಚ್ಚಬೇಕು. ಅದರಿಂದ ಜ್ಞಾನಾರ್ಜನೆ ಆಗುವುದು ಆದರ್ಶ ಗ್ರಂಥಗಳು ಜಗತ್ತನ್ನು ಆಳುವುದು ಎಂದು ಸಾಹಿತಿ ಬಿ.ಪಿ. ಹಿರೇಸೊಮಣ್ಣವರ ಹೇಳಿದರು.
ಅವರು ನಗರದ ರನ್ನ ಗ್ರಂಥಾಲಯದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಪುಸ್ತಕದ ಜ್ಞಾನವನ್ನು ಮಸ್ತಕಕ್ಕೆ ಇಳಿಸಿಕೊಂಡಾಗ ವ್ಯಕ್ತ ಸುಜ್ಞಾನಿ ಆಗುತ್ತಾನೆಂದು ಹೇಳಿದರು.
ಕಾರ್ಯಕ್ರಮವನ್ನು ಪತ್ರಕರ್ತ ಅಶೋಕ ಕುಲಕಣರ್ಿ ಉದ್ಘಾಟಿಸಿ, ತಮ್ಮಲ್ಲಿರುವ ಉತ್ತಮ ಗ್ರಂಥಗಳನ್ನು ಗ್ರಂಥಾಲಯಕ್ಕೆ ದಾನ ಮಾಡುವ ಮೂಲಕ ಗ್ರಂಥದಾನ ಅಭಿಯಾನದಲ್ಲಿ ಪಾಲ್ಗೊಳಬೇಕೆಂದು ಮನವಿ ಮಾಡಿದರು.
ಪುಸ್ತಕ ಪ್ರದರ್ಶನವನ್ನು ಕಸಾಪ ಆಧ್ಯಕ್ಷ ಸಂಗಮೇಶ ನೀಲಗುಂದ ಉಧ್ಘಾಟಿಸಿದರು ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಾಹಿತಿ ಮಹಾಂತೇಶ ಗಜೇಂದ್ರಗಡ ,ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಮಹಾಂತೇಶ ನರಸನಗೌಡ್ರ, ಕಸಾಪ ಅಧ್ಯಕ್ಷ ಸಂಗಮೇಶ ನೀಲಗುಂದ, ವಸಾಪ. ಅಧ್ಯಕ್ಷ ಸಿದ್ದಣ್ಣ ಬಾಡಗಿ ಅವರು ಮಾತನಾಡಿ, ಗ್ರಂಥಾಲಯಗಳಿಗೆ ವಿದ್ಯಾಥರ್ಿಗಳು ನಿತ್ಯ ಬರುವಂತಾಗಬೇಕು. ತಲೆ ತಗ್ಗಿಸಿ ಓದಿದವನು ತಲೆ ಎತ್ತಿ ನಿಲ್ಲುತ್ತಾನೆ, ತಲೆ ತಗ್ಗಿಸಿ ಮೊಬಾಯಿಲ್ ನೊಡುವವನು, ತಲೆ ಎತ್ತದಂತೆ ಆಗುತ್ತದೆಂದು ಎಚ್ಚರಿಸಿದರು.
ಇದೆ ವೆಳೆ ಉತ್ತಮ ಓದುಗ ರಾಮಪ್ಪ ದೇಸಾಯಿ ಹಾಗೂ ದಾಸರ ಅವರನ್ನು ಸನ್ಮಾನಿಸಲಾಯಿತು. ಸಹ ಗ್ರಂಥಪಾಲಕಿ, ಹಾಜಿರಾ ನಸರಿನ ಸ್ವಾಗತಿಸಿದರು. ರಾಜ್ಯ ಪ್ರಶಸ್ತಿ ಪುರಸೃತ ಗ್ರಂಥಾಲಯ ಸಹಾಯಕ ರಾಮಚಂದ್ರ ಅಸೋದಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಲಾವಿದ ಬಸವರಾಜ ಲಕ್ಷ್ಮೇಶ್ವರ ನಿರುಪಿಸಿ, ವಂದಿಸಿದರು.