ವಾಸವಿ ವಿದ್ಯಾಲಯದಲ್ಲಿ ಅರ್ಥಪೂರ್ಣ ರಕ್ಷಾ ಬಂಧನ ಆಚರಣೆ
Meaningful Raksha Bandhan celebration at Vasavi Vidyalaya
ವಾಸವಿ ವಿದ್ಯಾಲಯದಲ್ಲಿ ಅರ್ಥಪೂರ್ಣ ರಕ್ಷಾ ಬಂಧನ ಆಚರಣೆ
ಬಳ್ಳಾರಿ 09 : ನಗರದಲ್ಲಿರಕ್ಷಾ ಬಂಧನ ಹಬ್ಬವು ಸಹೋದರ -ಸಹೋದರಿಯರಆತ್ಮೀಯ ಬಾಂಧವ್ಯವನ್ನು ಹಿರಿಮೆಗೆರಿಸುವ ಪ್ರಮುಖ ಹಬ್ಬವಾಗಿದೆ. ರಕ್ಷಾ ಬಂಧನವು ನಮ್ಮ ಸಂಸ್ಕೃತಿಯಲ್ಲಿ ಕುಟುಂಬದ ಸಂಬಂಧಗಳ ಮಹತ್ವವನ್ನು ನೆನಪಿಸುತ್ತದೆ. ಶ್ರೀ ವಾಸವಿ ವಿದ್ಯಾಲಯದ ವಿದ್ಯಾರ್ಥಿಗಳು ಶಾಲೆಯಲ್ಲಿ ಸಂತೋಷದಿಂದ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದರು. ಈ ಸಂಧರ್ಭದಲ್ಲಿ ವಿದ್ಯಾರ್ಥಿನಿಯರು ತಮ್ಮ ಸಹಪಾಠಿಗಳ ಕೈಗೆ ರಾಖಿಕಟ್ಟಿ, ಸಹೋದರತ್ವ, ಸ್ನೇಹ, ಪ್ರೀತಿ ಮತ್ತು ಬಾಂಧವ್ಯದ ಮಹತ್ವವನ್ನು ಸಾರಿದರು.ಪ್ರತಿ ವರ್ಷದಂತೆ ಈ ವರ್ಷವು ಶ್ರೀ ವಾಸವಿ ವಿದ್ಯಾಲಯದ 10ನೇ ತರಗತಿಯ ವಿದ್ಯಾರ್ಥಿಗಳು ಬಳ್ಳಾರಿಯ ಕಂಟೋನ್ಮಂಟ್‌ರಸ್ತೆಯಲ್ಲಿರುವ ಶಾಂತಿಧಾಮದಲ್ಲಿರಕ್ಷಾ ಬಂಧನ ಹಬ್ಬವನ್ನು ಆಚರಿಸಿದರು.ನಿಷ್ಕಲ್ಮಷ ಮನಸ್ಸಿನ ವಿಶೇಷ ಮಕ್ಕಳ ಕೈಗೆ ರಾಖಿಕಟ್ಟಿ,ಅವರ ಪ್ರತಿಭೆಯನ್ನು ಮೆಚ್ಚಿ ಗೌರವಿಸಿದರು. ಈ ಮೂಲಕ ವಿದ್ಯಾರ್ಥಿಗಳು ಮಾನವೀಯತೆ,ಪ್ರೀತಿ ಮತ್ತು ಸಹಾನುಭೂತಿಯ ಸಂದೇಶವನ್ನು ಹಂಚಿಕೊಂಡರು.ಶ್ರೀ ವಾಸವಿ ಕಿಂಡರ್‌ಗಾರ್ಟನ್ ಮಕ್ಕಳು ತಮ್ಮ ಮುಗ್ಧ ನಗು ಹಾಗೂ ಮಮತೆಯಿಂದರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಪುಟ್ಟ ಬಾಲಕಿಯರು ಬಾಲಕರ ಕೈಗೆ ರಾಖಿಕಟ್ಟೆ, ಸಹೋದರ-ಸಹೋದರಿಯರ ಪ್ರೀತಿ ಮತ್ತು ಬಾಂಧವ್ಯದ ಸಂದೇಶವನ್ನು ಹಂಚಿಕೊಂಡರು.ಈ ಸಂಧರ್ಭದಲ್ಲಿ ಶಿಕ್ಷಕರು ಮಕ್ಕಳನ್ನು ಪ್ರೋತ್ಸಾಹಿಸಿದರು.ಶಾಲೆಯಲ್ಲಿ ಈ ರೀತಿಯ ಹಬ್ಬವನ್ನು ವಿದ್ಯಾರ್ಥಿಗಳೊಂದಿಗೆ ಆಚರಿಸುವುದು,ಅವರಿಗೆ ಹಬ್ಬಗಳ ಮಹತ್ವ ಹಾಗೂ ಮೌಲ್ಯಗಳನ್ನು ತಿಳಿಯಲು ಸಹಾಯಕವಾಗಿದೆ. ಶ್ರೀ ವಾಸವಿ ವಿದ್ಯಾಲಯದಲ್ಲಿ ನಡೆದರಕ್ಷಾ ಬಂಧನ ಹಬ್ಬದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಪರಸ್ಪರ ಪ್ರೀತಿ,ಸಹಕಾರ ಮತ್ತು ಸಂಸ್ಕೃತಿಯಅರಿವನ್ನು ಹೆಚ್ಚಿಸುತ್ತದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 