ಚಿಪ್ಪೆಕಲ್ಲು ದುರಂತದಲ್ಲಿ ಮೃತಪಟ್ಟವರ ವಾರಿಸುದಾರರಿಗೆ ಪರಿಹಾರ ವಿತರಿಸಿದ ಮಂಕಾಳ ಎಸ್ ವೈದ್ಯ.
Mankala S Vaidya distributed compensation to the heirs of those who died in the Chippekallu tragedy
ಲೋಕದರ್ಶನ ವರದಿ
ಕಾರವಾರ ಮೇ.29 :-ಇತ್ತೀಚೆಗೆ ಭಟ್ಕಳ ತಾಲೂಕಿನ ಶಿರಾಲಿಯ ಅಳ್ವೆಕೋಡಿ ಸಮೀಪ ನದಿಯಲ್ಲಿ ಚಿಪ್ಪೆಕಲ್ಲು ತೆಗೆಯಲು ಹೋಗಿ ನೀರಿನಲ್ಲಿ ಮುಳಗಿ ಮೃತಪಟ್ಟ11 ಮಂದಿಯ ಅವಲಂಬಿತರ ಮನೆಗಳಿಗೆ ತೆರಳಿ ಮೃತಪಟ್ಟವರ ವಾರಿಸುದಾರರಿಗೆ ತಲಾ ರೂ.16,50,000 ಗಳ ಪರಿಹಾರದ ಚೆಕ್ ನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮಂಕಾಳ ಎಸ್ ವೈದ್ಯ ಶುಕ್ರವಾರ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಭಟ್ಕಳದಲ್ಲಿ ನಡೆದ ಕಪ್ಪೆ ಚಿಪ್ಪು ದುರಂತದಲ್ಲಿ ಮೃತ ಪಟ್ಟ 11 ಮಂದಿಗೆ ಪ್ರತಿಯೊಬ್ಬರಿಗೂ ರಾಜ್ಯ ಸರ್ಕಾರ ರೂ. 5 ಲಕ್ಷದಂತೆ ಪರಿಹಾರ ಘೋಷಿಸಿದ್ದ ಒಟ್ಟು ರೂ.55 ಲಕ್ಷ ಹಾಗೂ ಮೀನುಗಾರಿಕೆ ಇಲಾಖೆ ವತಿಯಿಂದ ತಲಾ 10 ಲಕ್ಷದಂತೆ ಒಟ್ಟು 1 ಕೋಟಿ 10 ಲಕ್ಷ ರೂಪಾಯಿಹಾಗೂ ಜನತಾ ಕೋ ಆಪರೇಟಿವ್ ಬ್ಯಾಂಕ ನಿಂದ ರೂ.50,000 ಮತ್ತು ವೈಯಕ್ತಿಕವಾಗಿ ಪ್ರತಿ ಕುಟುಂಬಕ್ಕೆ 1 ಲಕ್ಷ ಗಳ ಸಹಾಯಧನ ನೀಡಲಾಗಿದ್ದು, ಮನೆ ಇಲ್ಲ ಎಂದವರಿಗೆ ವೈಯಕ್ತಿಕವಾಗಿ 5 ಲಕ್ಷ ರೂ ನೀಡಿದ್ದು, ಸರ್ಕಾರದ ವತಿಯಿಂದಲೂ ಮನೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಭಾಗದಲ್ಲಿ ನದಿಯಲ್ಲಿ ಕಪ್ಪೆಚಿಪ್ಪು ತೆಗೆಯುವುದು ಹಿಂದಿನಿಂದಲೂ ಪಾರಂಪರಿಕವಾಗಿ ಬಂದ ವೃತ್ತಿಯಾಗಿದ್ದು, ನದಿಯಲ್ಲಿ ಕಲ್ಲಿನ ಮೇಲೆ ಕಪ್ಪೆಚಿಪ್ಪುಗಳು ಇರುವುದನ್ನು ತೆಗೆಯಲು ಹೋದಾಗ ಒಬ್ಬರು ಆಳವಾದ ನೀರಿನಲ್ಲಿ ಮುಳುಗಿದಾಗ ಅವರನ್ನು ಕಾಪಾಡಲು ಹೋಗಿ ಎಲ್ಲರೂ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ. ಇಂತಹ ಅನಾಹುತಗಳ ಮರುಕಳಿಸದಂತೆ ಮುಂಜಾಗ್ರತ ಕ್ರಮವಿಲ್ಲದೇ ಯಾರೂ ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ ಎಂದರು.
ಮೃತ ಅವಲಂಬಿತರ ಕುಟುಂಬದಲ್ಲಿನ ಒಬ್ಬರಿಗೆ ಸಹಕಾರಿ ಬ್ಯಾಂಕ್‌ನಲ್ಲಿ ಉದ್ಯೋಗ ನೀಡುವ ಬಗ್ಗೆ ಚಿಂತನೆ ನಡೆಸಿದ್ದು, ಕುಟುಂದವರಿಗೆ ಸರ್ಕಾರದ ವತಿಯಿಂದ ಅಗತ್ಯವಿರುವ ಎಲ್ಲಾ ರೀತಿಯ ಸಹಾಯ ಸಹಕಾರ ಒದಗಿಸಲಾಗುವುದು. ಮೃತ ಕುಟುಂಬದ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿ ಈ ಭಾಗದ ಶಾಸಕನಾಗಿ ನಾನು ವಹಿಸಿಕೊಳ್ಳಲಿದ್ದು, ಈ ಭಾಗದ ಜನರು, ಸಂಘ ಸಂಸ್ಥೆಗಳು, ದಾನಿಗಳೂ ಮೃತ ಕುಟುಂಬದ ಅವಲಂಬಿತರಿಗೆ ಸಹಾಯ ಹಸ್ತ ನೀಡಲು ಮುಂದಾಗಬೇಕು ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ , ಜನತಾ ಕೋ ಆಪರೇಟಿವ್ ಬ್ಯಾಂಕ ನ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು 