ಗುರು ತೆಗ್ ಬಹದ್ದೂರ್‌ರವರು ಹಿಂದೂ ಧರ್ಮದ ರಕ್ಷಕರು: ರವಿಕಾಂತ ಅಂಗಡಿ
ಗೋವಾ 11: ಭಾರತದ ಬಂಜಾರಾ, ಲಬಾನ ಹಾಗೂ ಸಿಖ್ ಸಮುದಾಯಗಳು ತ್ಯಾಗ ಮತ್ತು ಶೌರ್ಯದಿಂದ ಸಮೃದ್ಧವಾದ ಇತಿಹಾಸ ಪರಂಪರೆಯನ್ನು ಹೊಂದಿವೆ. ಮಾನವತ್ವ ಹಾಗೂ ಧರ್ಮರಕ್ಷಣೆಗೆ ತಮ್ಮ ಜೀವತ್ಯಾಗ ಮಾಡಿದ “ಹಿಂದ್ ಕಿ ಚಾದರ್” ಗುರು ತೆಗ್ ಬಹದ್ದೂರ್‌ರನ್ನು ಭಾರತದ ಇತಿಹಾಸದಲ್ಲಿ ಶ್ರೇಷ್ಠ ಹುತಾತ್ಮರೆಂದು ಗೌರವಿಸಲಾಗುತ್ತಿದೆ ಎಂದು ಕರ್ನಾಟಕ ಗೋರ ಸೇನಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಹೇಳಿದರು.
ಗೋವಾದ ವಾಸ್ಕೋದಲ್ಲಿ ನಡೆದ “ಹಿಂದ್ ಕಿ ಚಾದರ್ ಹಿ ಗುರು ತೆಗ್ ಬಹದ್ದೂರ್” ಸ್ಮಾರಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಂಜಾರಾ ಸಮುದಾಯದ ಧೀರ ನಾಯಕ ಲಖಿಷಾ ಬಂಜಾರಾ ಅವರ ಐತಿಹಾಸಿಕ ಪಾತ್ರವೂ ವಿಶಿಷ್ಟವಾಗಿದೆಯೆಂದರು. 1664ರ ಏಪ್ರಿಲ್ 16ರಂದು ಬಂಜಾರಾ ವ್ಯಾಪಾರಿ ಮಖಲ್ಮಾನ ಬಾನ್ ಅವರು ಬಕಾಲಾದಲ್ಲಿ ಗುರು ತೆಗ್ ಬಹದ್ದೂರ್‌ರನ್ನು ಗುರುತಿಸಿ, ಅವರನ್ನು ಸಿಖ್ ಧರ್ಮದ 9ನೇ ಗುರು ಎಂದು ಘೋಷಿಸಿದ್ದರು. ಅವರ ನಿಷ್ಠೆ ಮತ್ತು ಶ್ರದ್ದೆ ಭಾರತೀಯ ಇತಿಹಾಸದಲ್ಲಿ ಅಪೂರ್ವ ಬೆಳಕನ್ನು ಹರಿಸಿದೆ ಎಂದು ಅವರು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಧರ್ಮಚಕ್ರ ಕಿಶನ್ ಭಾವು ರಾಠೂಡ, ರಾಮೇಶ್ವರ ನಾಯಕ್, ವಿಲಾಸ್ ಭಾವು ರಾಠೂಡ (ರಾಷ್ಟ್ರೀಯ ಬಂಜಾರಾ ಪರಿಷತ್ ಅಧ್ಯಕ್ಷರು), ಬಿಕನ್ ಜಾದವ್, ಸುರೇಶ್ ರಾಜಪುತ್, ಆನಂದ ಅಂಗಡಿ, ಸುನಿಲ್ ಮಹಾರಾಜ (ಪೌರಾದೇವಿ), ಜಿತೇಂದ್ರ ಮಹಾರಾಜ (ಪೌರಾದೇವಿ), ಸರ್ದಾರ್ ಸೇವಾಲಾ ಮಹಾರಾಜ, ಗೋಪಾಲ ಮಹಾರಾಜ (ಬೀಜಾಪುರ) ಹಾಗೂ ರಮೇಶ್ ಮಹಾರಾಜ (ಗೋವಾ) ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ “ಹಿಂದ್ ಕಿ ಚಾದರ್” ಎಂಬ ಶೀರ್ಷಿಕೆಯಡಿ ಗುರು ತೆಗ್ ಬಹದ್ದೂರ್ ಹಾಗೂ ಲಖಿಷಾ ಬಂಜಾರಾ ಅವರ ತ್ಯಾಗದ ಇತಿಹಾಸವನ್ನು ಒಳಗೊಂಡ ವಿಶೇಷ ವೀಡಿಯೋ ಬಿಡುಗಡೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಗೋವಾ ಬಿಜೆಪಿ ರಾಜ್ಯಾಧ್ಯಕ್ಷ ದಾಮು ನಾಯಕ್, ಆಲ್ ಗೋವಾ ಬಂಜಾರಾ ಸಮಾಜದ ರಾಜ್ಯಾಧ್ಯಕ್ಷ ಆನಂದ ಅಂಗಡಿ, ಕೋರ್ ಸಮಿತಿ ಮುಖಂಡರು ಥಾವರ್ಪ ಚಾದವ್, ಗೋಪಾಲ್ ಲಮಾಣಿ, ರಾಜು ನಾಯಕ್, ಶಿವು ಸುನಾರ, ಗೋವಿಂದ ರಾಠೂಡ, ಉಮೇಶ್ ಲಮಾಣಿ, ದೇವರಾಜ ಅಂಗಡಿ, ಹನಮಂತ ಚವ್ವಾಣ, ಡಾಕಪ್ಪ ನಾಯಕ್, ರವಿ ಚವ್ವಾಣ, ನುರಿ ಲಮಾಣಿ, ಅರ್ಜನ್ ಟೆಲರ್, ವಾಸು ರಾಜಪುತ್, ವಿಜಯ ಲಮಾಣಿ, ಗೀರೀಶ ಕಾರಭಾರಿ, ಗೋವಿಂದ ಲಮಾಣಿ, ಶಿವಾಜಿ ಚವ್ವಾಣ, ಆನಂದ ಚವ್ವಾಣ, ವಾಸು ಯಮನಪ್ಪ ರಾಠೂಡ, ಮೂಹನ ಲಮಾಣಿ, ಲಕ್ಷಣ ರಾಠೂಡ, ರವಿ ನಾಯಕ್, ಕೃಷ್ಣ ನಾಯಕ್, ಹಾಮೇಶ್ ಬೂಮ್ಮನಪಾಡ್, ಬಲರಾಮ ಪವಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.