ನೂಲು ಹುಣ್ಣಿಮೆ ಅಂಗವಾಗಿ ಗುಗ್ಗಳೋತ್ಸವ ಕಾರ್ಯಕ್ರಮ
Guggalotsava program as part of Noolu Full Moon
ನೂಲು ಹುಣ್ಣಿಮೆ ಅಂಗವಾಗಿ ಗುಗ್ಗಳೋತ್ಸವ ಕಾರ್ಯಕ್ರಮ
ಗದಗ 11: ಬೆಟಗೇರಿಯ ಶ್ರೀ ವೀರಭದ್ರೇಶ್ವರ ಸದ್ಭಕ್ತ ಮಂಡಳಿ ವತಿಯಿಂದ ನೂಲು ಹುಣ್ಣಿಮೆ ಅಂಗವಾಗಿ ಗುಗ್ಗಳೋತ್ಸವ ಜರುಗಿತು. ಕಳೆದ 13 ವರ್ಷಗಳಿಂದ ಪ್ರತಿ ವರ್ಷ ನೂಲು ಹುಣ್ಣಿಮೆಯಿಂದ ಸಾಮೂಹಿಕ ಗುಗ್ಗಳೋತ್ಸವ ಕಾರ್ಯಕ್ರಮ ನೆರವೇರಿಸುತ್ತ ಬಂದಿದು,್ದ ಪ್ರಸಕ್ತ ವರ್ಷ 5 ಜೊತೆ ಗುಗ್ಗಳ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಭಯ ಭಕ್ತಿಯಿಂದಲೂ ನೆರವೇರಿತು. ನೂರಾರು ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ವೀರಭದ್ರೇಶ್ವರನ ಕ್ರಪೆಗೆ ಪಾತ್ರರಾದರು. ವೀರಭದ್ರೇಶ್ವರ ಸದ್ಭಕ್ತ ಮಂಡಳಿಯ ಎಲ್ಲ ಭಕ್ತಾದಿಗಳು ಈ ಸೇವೆಯಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿದರು. ಮಕ್ಕಳು, ಪುರವಂತರು ವೀರಗಾಸೆ ಧರಿಸಿ ವೀರಭದ್ರೇಶ್ವರನ ಒಡಪುಗಳನ್ನು ಹೇಳುತ್ತಾ ವೀರಗಾಸೆ ನೃತ್ಯ ಮಾಡುತ್ತ ಗುಗ್ಗುಳೋತ್ಸವದಲ್ಲಿ ಸೇವೆ ಸಲ್ಲಿಸಿದ್ದು ಕಣ್ಮನ ಸೆಳೆಯುವಂತಿತ್ತು. ಗುಗ್ಗುಳೋತ್ಸವದ ನಂತರ ಮಹಾಪ್ರಸಾದ ಜರುಗಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 