ಬಲ್ಡೋಟ ತೊಲಗಿಸಿ 126ನೇ ದಿನದ ಧರಣಿ ಪೂರ್ಣ ಮಾ. 7 ಕ್ಕೆ ಬೆಂಗಳೂರು ಚಲೋ ಸಿದ್ಧತಾ ಸಭೆಗೆ ಬನ್ನಿ: ಬೆಟ್ಟದೂರು

ಬಲ್ಡೋಟ ತೊಲಗಿಸಿ 126ನೇ ದಿನದ ಧರಣಿ ಪೂರ್ಣ ಮಾ. 7 ಕ್ಕೆ ಬೆಂಗಳೂರು ಚಲೋ ಸಿದ್ಧತಾ ಸಭೆಗೆ ಬನ್ನಿ: ಬೆಟ್ಟದೂರು  Get rid of the Baldota and complete the 126th day of the dharna. Come to the Bengaluru Chalo Siddha


          ಕೊಪ್ಪಳ 05:   ನಗರದ ಮಹಾಂತಯ್ಮನಮಠ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 10 ಗಂಟೆಗೆ ಬೆಂಗಳೂರು ಚಲೋ ಸಿದ್ಧತಾ ಸಭೆಯನ್ನು ಕರೆಯಲಾಗಿದೆ ಎಂದು ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.  

ಅವರು ನಗರಸಭೆ ಮುಂದಿನ ಟೆಂಟ್‌ನಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕಯೆ ಜಂಟಿ ಕ್ರಿಯಾ ವೇದಿಕೆ ಹಮ್ಮಿಕೊಂಡಿರುವ 126ನೇ ದಿನದ ಬಲ್ಡೋಟ ತೊಲಗಿಸಿ ಧರಣಿಯಲ್ಲಿ ಬಂದ್ ಹೋರಾಟ ಯಶಸ್ವಿಗೊಳಿಸಿದ ನಂತರ ಈ ಸಭೆಯನ್ನು ಕರೆಯಲಾಗಿದೆ. ಈ ಸಭೆ ಬಂದ್ ಗಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದಿಸಿ ನಿರ್ಣಯ ಸ್ವೀಕರಿಸುತ್ತದೆ.  

ಬಂದ್ ನಂತರ  ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಬಾಧಿತ ಹಳ್ಳಿಗೆ ಹೋಗಿ ಜನರನ್ನು ಮಾತನಾಡಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತ ಮಾಡಿಕೊಡುವ ವಿಷಯದಲ್ಲಿ ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಸರ್ವ ಪಕ್ಷಗಳ ಮುಖಂಡರು ಮತ್ತು ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ರುವ ಪ್ರಮುಖರು ಮುಖ್ಯಮಂತ್ರಿಗಳ ನಿಯೋಗ ಹೋಗುವ ವ್ಯವಸ್ಥೆ ಮಾಡುವಂತೆ ಒತ್ತಡ ಹೇರಲು, ಇಲ್ಲದಿದ್ದರೆ ಅಧಿವೇಶನ ಅವಧಿಯಲ್ಲಿ ಬೆಂಗಳೂರು ಚಲೋ ನಡೆಸಲು ಸಿದ್ಧತೆ ಮಾಡಿಕೊಳ್ಳಲು ಮತ್ತು  

ಮುಂದಿನ ಹೋರಾಟದ ರೂಪುರೇಷೆ ತಯಾರಿಸಲು ಈ ಸಭೆ ಕರೆಯಲಾಗಿದೆ. ತಪ್ಪದೆ ಬಂದ್ ಸಂಘಟಿಸಿ ಯಶಸ್ವಿಗೊಳಿಸಿದ  ಸರ್ವರೂ ಸಭೆಗೆ ಬನ್ನಿ ಮತ್ತು ನಿಮ್ಮ ಜೊತೆಗಾರರನ್ನು ಕರೆದುಕೊಂಡು ಬನ್ನಿ ಎಂದು ಹೇಳಿದರು.  

ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ ಮಾತನಾಡಿ, ಈ ಬಜೆಟ್ನಲ್ಲಿ ಬಾಧಿತ ಹಳ್ಳಿಯ ಆರೋಗ್ಯ, ಸಾವು, ಪರಿಸರ ಹಾನಿ, ಬೆಳೆ ಹಾನಿ ಮತ್ತು ಐಐಎಸ್ಸಿ, ಎಐಐಎಂಎಸ್ ಮೂಲಕ ಪರಿಸರ ಆರೋಗ್ಯ ಸಮೀಕ್ಷೆ ನಡೆಸಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು, ತುಂಗಭದ್ರಾ ಮಾಲಿನ್ಯ ನಿಯಂತ್ರಣ ಮಾಡಲು ಶುದ್ಧಿಕರಣ ಮಾಡಲು ಅನುದಾನ ತೆಗೆದಿರಿಸಿ ಯೋಜನೆ ರೂಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. 

ಧರಣಿಯಲ್ಲಿ ಹಿರಿಯ ಸಾಹಿತಿ ಎಚ್‌.ಎಸ್‌.ಪಾಟೀಲ್, ಎ.ಎಂ.ಮದರಿ, ಸಂಚಾಲಕರಾದ ಮಂಜುನಾಥ ಜಿ. ಗೊಂಡಬಾಳ, ಶರಣು ಡೊಳ್ಳಿನ, ಸರೋಜಾ ಬಾಕಳೆ, ಮೂಕಪ್ಪ ಮೇಸ್ತ್ರಿ ಬಸಾಪುರ, ಶರಣು ಗಡ್ಡಿ, ರುದ್ರ​‍್ಪ ಭಂಡಾರಿ, ಎಸ್‌.ಎಂ. ಕಂಬಾಳಿಮಠ, ಎಸ್‌.ಬಿ. ರಾಜೂರು, ಶಂಭುಲಿಗಪ್ಪ ಹರಗೇರಿ, ಶಾಂತಮ್ಮ ಅಂಗಡಿ,  ಡಾ. ವಿ.ಬಿ. ರಡ್ಡೇರ, ಜಿ.ಬಿ. ಪಾಟೀಲ್, ಗಂಗಾಧರ ಖಾನಾಪೂರ, ಮಲ್ಲಪ್ಪ ಎಚ್‌. ಮಾದಿನೂರು, ಪಂಪಣ್ಣ ಚಿಂತಪಲ್ಲಿ, ರಾಜಶೇಖರ ಏಳುಬಾವಿ, ಬಿ.ಜಿ. ಕರಿಗಾರ, ಎಸ್‌. ಮಹಾದೇವಪ್ಪ ಮಾವಿನಮಡು, ನಾರಾಯಣ ತಟ್ಟಿ, ನಾಗರಾಜ ಕುಷ್ಟಗಿ, ಬಸವರಾಜಪ್ಪ ಶೆಟ್ಟರ್, ರೇವಣಸಿದ್ದಯ್ಯ ಕೊಪ್ಪಳ, ಮಂಜುನಾಥ ಕವಲೂರು, ಭೀಮಪ್ಪ ಯಲಬುರ್ಗಾ, ಮಂಜುನಾಥ ಜುಲ್ಪಿ, ಶಿವಪ್ಪ ಜಲ್ಲಿ ಇದ್ದರು.