ಯಶವಂತರಾಯಗೌಡ ವಿ ಪಾಟೀಲ್‌ರಿಗೆ ಮಂತ್ರಿಮಂಡಲದಲ್ಲಿ ಸ್ಥಾನ ನೀಡಲು ಆಗ್ರಹ

ಯಶವಂತರಾಯಗೌಡ ವಿ ಪಾಟೀಲ್‌ರಿಗೆ ಮಂತ್ರಿಮಂಡಲದಲ್ಲಿ ಸ್ಥಾನ ನೀಡಲು ಆಗ್ರಹ Demand to give a place in the cabinet to Yashwant Rayagouda V. Patil

 

ಯಶವಂತರಾಯಗೌಡ ವಿ ಪಾಟೀಲ್‌ರಿಗೆ ಮಂತ್ರಿಮಂಡಲದಲ್ಲಿ ಸ್ಥಾನ ನೀಡಲು ಆಗ್ರಹ

ಇಂಡಿ 02: ಕ್ಷೇತ್ರವು ಅಭಿವೃದ್ಧಿ ಹೊಂದಬೇಕಾದರೆ ಅಧಿಕಾರ ಇದ್ದಾಗ ಮಾತ್ರ ಸಾಧ್ಯವಾಗಲಿದೆ ಆ ನಿಟ್ಟಿನಲ್ಲಿ ಯಶವಂತರಾಯಗೌಡ ವಿ ಪಾಟೀಲ್ ಅವರಿಗೆ ನೂತನ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ಮಂತ್ರಿಮಂಡಲದಲ್ಲಿ ಸ್ಥಾನವನ್ನು ನೀಡಿದರೆ ಒಳ್ಳೆಯದು ಎಂದು ತಡವಲಗಾ ಹೀರೆಮಠದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ತಮ್ಮ ಅಭಿಪ್ರಾಯನ್ನು  ವ್ಯಕ್ತಪಡಿಸಿದ್ದಾರೆ.  

ಅತ್ಯಂತ ಹಿಂದುಳಿದ ಇಂಡಿ ವಿಧಾನಸಭಾ ಕ್ಷೇತ್ರಕ್ಕೆ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಅವಕಾಶವನ್ನು ನೀಡಿ  ಅಭಿವೃದ್ಧಿಗೆ ನಾಂದಿ ಹಾಡಬೇಕು, ಸ್ವಾತಂತ್ರ್ಯ ನಂತರ ಇಂಡಿ ವಿಧಾನಸಭಾ ಕ್ಷೇತ್ರಕ್ಕೆ ಮಂತ್ರಿ ಸ್ಥಾನವನ್ನೇ ನೀಡದೇ ಇರುವಂತಹ ಬರವನ್ನು ನೀಗಿಸಬೇಕು, ಸನ್ಮಾನ್ಯ ಯಶವಂತರಾಯಗೌಡ ವಿ ಪಾಟೀಲರು ರಾಜಕೀಯ ಅನುಭವಿಗಳು ಹಾಗೇನೆ ಈ ಕ್ಷೇತ್ರವನ್ನು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಅವರ ಅಪಾರವಾದ ಅನುಭವವನ್ನು ಬಳಸಿಕೊಂಡು ಈ ಕ್ಷೇತ್ರವನ್ನು ಪ್ರಗತಿಪತದತ್ತ ಕೊಂಡೊಯ್ಯಲು ಸಹಕಾರ ಮಾಡಬೇಕು ಎಂದು ಎಲ್ಲ ಜನರ ಅಭಿಪ್ರಾಯವಾಗಿದೆ, ಈ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿವೆ ನೀರಾವರಿಯಾಗಿರಬಹುದು ರಸ್ತೆ ಸುಧಾರಣೆ ಆಗಿರಬಹುದು. ಅದೆಲ್ಲವನ್ನು ಸರಿ ಮಾಡಲು ಮಂತ್ರಿ ಸ್ಥಾನದ ಅವಶ್ಯಕತೆ ಇದೆ, ಯಶವಂತರಾಯ ಗೌಡ್ರು ಶಾಸಕರಾದ ಮೇಲೆ ಅದೆಷ್ಟೋ ವರ್ಷಗಳಿಂದ ನೆನೆಗುದಿಗೆ ಬಿದ್ದ ಭೀಮಶಂಕರ್ ಸಕ್ಕರೆ ಕಾರ್ಖಾನೆ ರೈತರಿಗೆ ಸೇವೆಯನ್ನು ಒದಗಿಸಲು ಅವರ ಪ್ರಯತ್ನ ತುಂಬಾ ಇದೆ ಜೊತೆಗೆ ಇಲ್ಲಿ ಬೆಳೆಯುವ ನಿಂಬೆಹಣ್ಣಿಗೆ ಜಿ. ಐ ಟ್ಯಾಗ್ ಕೊಡಿಸಿ ನಿಂಬೆ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿ ಈ ಭಾಗದ ರೈತರಿಗೆ ಆಶಾಕಿರಣ ವಾಗಿದ್ದಾರೆ ಅವರ ಕ್ರಿಯಾಶೀಲತೆ, ಈ ಭಾಗವನ್ನು ಅಭಿವೃದ್ಧಿಪಡಿಸಬೇಕೆಂಬ ಹಂಬಲ ತುಂಬಾ ಇದೆ, ಇವರನ್ನು ದೂರ ದೃಷ್ಟಿಯ ಅಭಿವೃದ್ಧಿಯ ಹರಿಕಾರ ಎಂಬ ನಾಮ ಜನರ ಕೊಟ್ಟಿರುವಂಥದ್ದು ಎಲ್ಲ ಸಮಾಜಗಳ ಜನರ ಜೊತೆ ಬೆರೆಯುವಂತಹ ಸ್ವಭಾವ ತುಂಬಾ ಶ್ಲಾಘನೀಯವಾಗಿರುವಂತದ್ದು ಕಾರಣ ಮಂತ್ರಿ ಸ್ಥಾನವನ್ನು ಕೊಡಬೇಕೆಂದು ಕೇವಲ ನನ್ನ ಒಬ್ಬನ ವಿಚಾರ ಅಲ್ಲ ಈ ಕ್ಷೇತ್ರದ ಸಮಸ್ತ ಜನತೆಯ ಅಭಿಪ್ರಾಯವಾಗಿದೆ. ಆ ಕಾರಣದಿಂದಾಗಿ ಅವರಿಗೆ ಮಂತ್ರಿ ಸ್ಥಾನವನ್ನು ನೀಡಲೇಬೇಕು ಇದು ಎಲ್ಲರ ಕೂಗು ಎಂದು ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.