ಅಂತರರಾಷ್ಟ್ರೀಯ

ಪಾಕ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ 'ಬಿ' ಗ್ರೇಡ್ ಜೈಲು ಕೋಣೆ

ಪಾಕ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ 'ಬಿ' ಗ್ರೇಡ್ ಜೈಲು ಕೋಣೆ

ಇಸ್ಲಾಮಾಬಾದ್ 09: ಪ್ರಧಾನಿಗೆ ನೀಡಿದ ಉಡುಗೊರೆಗಳನ್ನು ಅಕ್ರಮವಾಗಿ ಮಾರಿಕೊಂಡ ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಉಗ್ರರಿಗೆ ಮೀಸಲಿಡಲಾದ ಜೈಲು ಕೋಣೆಯಲ್ಲಿ ಇಡಲಾಗಿದೆ ಎಂದು ದ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ ಪಕ್ಷ ಆರೋಪಿಸಿದೆ. ಹೀಗಾಗಿ ಕೂಡಲೇ ಅವರನ್ನು ಉನ್ನತ ಸೌಕರ್ಯವಿರುವ 'ಂ' ಗ್ರೇಡ್ ಜೈಲು ಕೋಣೆಗೆ ವಗರ್ಾಯಿಸಬೇಕೆಂದು ನ್ಯಾಯಾಲಯಕ್ಕೆ ಪಕ್ಷ ಮನವಿ ಮಾಡಿದೆ. 

ಈ ಕುರಿತು ಇಸ್ಲಾಮಾಬಾದ್ ಹೈಕೋಟರ್್ಗೆ ಅಜರ್ಿಯೊಂದನ್ನು ಸಲ್ಲಿಸಿರುವ ಇಮ್ರಾನ್ನ ಪಿಟಿಐ ಪಕ್ಷದ ನಾಯಕರು, ಮಾಜಿ ಪ್ರಧಾನಿಯೂ ಆಗಿರುವ ಇಮ್ರಾನ್ ಅವರಿಗೆ ಜೈಲಿನಲ್ಲಿ 'ಬಿ' ದಜರ್ೆಯ ಕೋಣೆ ನೀಡಲಾಗಿದೆ. 9*11 ಅಡಿ ಅಗಲದ ಕೋಣೆ ಕಳಪೆ ದಜರ್ೆಯ ಸೌಕರ್ಯ ಹೊಂದಿದೆ. ಶೌಚಾಲಯ ಶುಚಿತ್ವವಿಲ್ಲದೇ ನಾರುತ್ತಿದೆ. ಹುಳ-ಹುಪ್ಟಟೆಗಳು ಇರುವ ಇಂಥ ಕತ್ತಲೆ ಕೋಣೆಯನ್ನು ಸಾಮಾನ್ಯವಾಗಿ ಉಗ್ರರಿಗೆ ಮೀಸಲಿರಿಸಲಾಗಿರುತ್ತದೆ. ಜೈಲು ಅಧಿಕಾರಿಗಳು ಮಾಜಿ ಪ್ರಧಾನಿಯನ್ನು ಕ್ರಿಮಿನಲ್ಗಳ ರೀತಿಯಲ್ಲಿ ಪರಿಗಣಿಸಿದ್ದು ಅತ್ಯಂತ ಇಕ್ಕಟ್ಟಾದ ಬರಾಕ್ನಲ್ಲಿ ಇಟ್ಟಿದ್ದಾರೆ. ಹೀಗಾಗಿ ಕೂಡಲೇ ಅವರಿಗೆ ಉನ್ನತ ದಜರ್ೆಯ ಕೋಣೆ ನೀಡಬೇಕು' ಎಂದು ಕೋರಿದ್ದಾರೆ. 

ಮಾಜಿ ಪ್ರಧಾನಿಯ ಘನತೆಗೆ ತಕ್ಕಂತೆ ದಿನಪತ್ರಿಕೆ, ಟೀವಿ, ಟೇಬಲ್, ಚೇರ್, ಹಾಸಿಗೆ, ಟೀಪಾಟ್, ಸ್ವಂತ ವಸ್ತ್ರ, ಆಹಾರಕ್ಕೆ ಅವಕಾಶ ಇರುವ, ಬೇರೆ ಕೈದಿಗಳಿಂದ ದೂರ ಇಡುವ 'ಎ' ದಜರ್ೆಯ ಕೋಣೆಯನ್ನು ನೀಡಬೇಕು ಎಂದು ಅಜರ್ಿಯಲ್ಲಿ ಕೋರಲಾಗಿದೆ. 

ತೋಶಾಖಾನಾ ಎಂಬುದು ಪಾಕಿಸ್ತಾನದ ಸಕರ್ಾರಿ ಹುದ್ದೆಗಳಲ್ಲಿರುವ ವ್ಯಕ್ತಿಗೆ ಬಂದ ಉಡುಗೊರೆಗಳನ್ನು ಸಂಗ್ರಹಿಸಿಡುವ ಇಲಾಖೆ. 2018ರಲ್ಲಿ ಪ್ರಧಾನಿಯಾದ ಇಮ್ರಾನ್ ಖಾನ್ ತಮಗೆ ಬಂದ ಉಡುಗೊರೆಗಳ ಬಗ್ಗೆ ಇಲ್ಲಿಗೆ ಮಾಹಿತಿ ನೀಡಿರಲಿಲ್ಲ. ಇಮ್ರಾನ್ ಮಾರಾಟ ಮಾಡಿದ ಉಡುಗೊರೆಗಳ ಪೈಕಿ ಸೌದಿಯ ರಾಜ ನೀಡಿದ್ದ ಗ್ರಾಫ್ ವಾಚ್, ರೋಲೆಕ್ಸ್ ವಾಚುಗಳು, ದುಬಾರಿ ಕಫ್ಲಿಂಕ್ಗಳು, ಪೆನ್ ಹಾಗೂ ಉಂಗುರಗಳು ಸೇರಿವೆ.


 

ಸುದ್ದಿ ಓದಿ