ರೇಮುಗದೂರ ಶಾಲೆಗೆ ಅಮ್ಮಾ ಸಂಸ್ಥೆಯಿಂದ ಪುಸ್ತಕ ವಿತರಣೆ

ರೇಮುಗದೂರ ಶಾಲೆಗೆ ಅಮ್ಮಾ ಸಂಸ್ಥೆಯಿಂದ ಪುಸ್ತಕ ವಿತರಣೆ  Amma Sansthan distributes books to Remugadoor School

ಲೋಕದರ್ಶನ ವರದಿ 

ಸವಣೂರ  29:  ತಾಲ್ಲೂಕಿನ ಹಿರೇಮುಗದೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಾಲ್ಲೂಕಿನ ನಿವೃತ್ತ ಕ್ಷೇತ್ರ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ದಿ:ಶಿವಾನಂದ ಬಡಶೆಟ್ಟಿ ಅವರ ಸ್ಮರಣಾರ್ಥ ಅಮ್ಮಾ ಸಂಸ್ಥೆಯ ಪುಸ್ತಕ ಓದು ಅಭಿಯಾನ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ಬೆಳೆಸಲು ಉತ್ತೇಜನ ನೀಡುವ ಸಲುವಾಗಿ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.ದಿ:ಶಿವಾನಂದ ಬಡಶೆಟ್ಟಿ ಅವರು ಸುಮಾರು 20 ವರ್ಷಗಳ ಕಾಲ ತಾಲ್ಲೂಕಿನ ಶಿಕ್ಷಣ ಇಲಾಖೆಯಲ್ಲಿ ಕ್ಷೇತ್ರ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು.ಅವರು ಪುಸ್ತಕ ಪ್ರೇಮಿಗಳಾಗಿದ್ದು,ಅವರ ಸ್ಮರಣಾರ್ಥ ತಾಲ್ಲೂಕಿನಲ್ಲಿ ಪುಸ್ತಕ ವಿತರಣೆ ಮಾಡುವ ಕೆಲಸವನ್ನು ಅಮ್ಮಾ ಸಂಸ್ಥೆಯ ಪುಸ್ತಕ ಓದು ಅಭಿಯಾನದಡಿ ಮಾಡಲಾಗುತ್ತಿದೆ.

ಇದೇ ಅವಧಿಯಲ್ಲಿ ಟಿಎಂಎಇಎಸ್ ಪ್ರೌಢಗೆ ಹಾಗೂ ಗ್ರಾಪಂ ಗ್ರಂಥಾಲಯಕ್ಕೆ ಪುಸ್ತಕಗಳನ್ನು ವಿತರಿಸಲಾಯಿತು.ಅಮ್ಮಾ ಸಂಸ್ಥೆಯ ವತಿಯಿಂದ ಪ್ರತಿ ವರ್ಷದಂತೆ ಶಾಲೆಯ ಶಿಕ್ಷಕರಿಗೆ ಪೆನ್ನುಗಳನ್ನು ಹಾಗೂ ವಿದ್ಯಾರ್ಥಿಗಳಿಗೆ ಚಾಕಲೇಟ್ ವಿತರಿಸಿ 2026-27ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶುಭ ಕೋರಲಾಯಿತು. ಈ ಸಂದರ್ಭದಲ್ಲಿ ಅಮ್ಮಾ ಸಂಸ್ಥೆಯ ನಿಂಗಪ್ಪ ಎಂ ಆರೇರ,ಶಿಕ್ಷಕರಾದ ವೀರೇಶ ಶೆರೆವಾಡ,ಜಿ ಮಲ್ಲಪ್ಪ,ವಿಜಯಕುಮಾರ ಪಾಟೀಲ,ಮಹೇಶ ಸಂಗೂರ.ಗ್ರಾಪಂ ಕಾರ್ಯದರ್ಶಿ ಹನಮಂತಪ್ಪ ಸಂಗೂರ,ಗ್ರಂಥಪಾಲಕಿ ಕವಿತಾ ಸೋಮಸಾಗರ, ವಿಠೋಬ ಆರೇರ,ಗುಡ್ಡಪ್ಪ ಎ,ವೀರೇಶ ತಳವಾರ ವಿದ್ಯಾರ್ಥಿಗಳು ಸೇರಿದಂತೆ ಅನೇಕರಿದ್ದರು.