“2026-27ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪರಿಚಯಾತ್ಮಕ ಕಾರ್ಯಕ್ರಮ”

  “2026-27ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪರಿಚಯಾತ್ಮಕ ಕಾರ್ಯಕ್ರಮ” “Welcome and Introductory Program for First PUC Students of the Year 2026-27”

ಲೋಕದರ್ಶನ ವರದಿ 

ವಿಜಯಪುರ 06:   ವಿಜಯಪುರದ ವಿದ್ಯಾವರ್ಧಕ ಸಂಘದ ವಿ.ಭ.ದರಬಾರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಪರಿಚಯಾತ್ಮಕ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮದಲ್ಲಿ ರಸಾಯನಶಾಸ್ತ್ರ ಉಪನ್ಯಾಸಕಿಯರಾದ ಕು. ಪ್ರಿಯಾಂಕಾ ಭುಶೆಟ್ಟಿ ಅವರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಸಂಸ್ಕೃತ ವಿಷಯದ ಪ್ರಥಮ ವರ್ಷದ ವಿದ್ಯಾರ್ಥಿನಿಯರು ಶ್ಲೋಕ ಪಠಣ ಮಾಡಿದರು. ಕಾಲೇಜಿನ ಪ್ರಾಚಾರ್ಯರಾದ ಶ್ರೀ ಟಿ. ಆರ್‌. ಕುಲಕರ್ಣಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ರಾಜೇಶ ಡಿ. ದರಬಾರ ಸರ್ ಅವರನ್ನು ಮತ್ತು ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿಗಳು ಹಾಗೂ ಖಜಾಂಚಿಗಳು ಮತ್ತು ಖ್ಯಾತ ನ್ಯಾಯವಾದಿಗಳಾದ ಶ್ರೀ ಪ್ರಕಾಶ ಎಸ್‌. ಉಡುಪಿಕರ ಅವರನ್ನು ಮತ್ತು ಸಮನ್ವಯಾಧಿಕಾರಿಗಳಾದ ಡಾಽಽ ವ್ಹಿ. ಬಿ. ಗ್ರಾಮಪುರೋಹಿತ ಅವರನ್ನು, ವಿದ್ಯಾರ್ಥಿಗಳನ್ನು ಮತ್ತು ಗೌರವಾನ್ವಿತ ಪಾಲಕರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. 

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಾನ್ಯ ಅಧ್ಯಕ್ಷರು ಹಾಗೂ ಮುಖ್ಯ ಅತಿಥಿಗಳು ಸಸಿಗೆ ನೀರುಣಿಸಿ ಪರಿಸರ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಬೋಧಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಚಾರ್ಯರು ಅಧ್ಯಕ್ಷರಿಗೆ ಪುಷ್ಪ ನೀಡುತ್ತ ಗೌರವಿಸಿದರು. ಮುಖ್ಯ ಅತಿಥಿಗಳಿಗೆ ಉಪನ್ಯಾಸಕರಾದ ಶ್ರೀ ನಾಗರಾಜ ಎ. ರವರು, ಅತಿಥಿಗಳಿಗೆ ಉಪನ್ಯಾಸಕರಾದ ಶ್ರೀ ಸಿ. ಎಸ್‌. ಸಜ್ಜನರ ಅವರು, ಪ್ರಾಚಾರ್ಯರಿಗೆ ಉಪನ್ಯಾಸಕರಾದ ಶ್ರೀ ಬಿ. ಬಿ. ಪಾಟೀಲ ಅವರು ಹಾಗೂ ಆಗಮಿಸಿದ ಎಲ್ಲ ಗೌರವಾನ್ವಿತ ಪಾಲಕರಿಗೆ, ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ವಿದ್ಯಾರ್ಥಿಗಳ ಅಭಿವೃದ್ಧಿಯಾಗಲಿ ಎಂದು ಹಾರೈಸುತ್ತಾ ಗಣ್ಯಮಾನ್ಯರು ಪುಷ್ಪ ನೀಡುತ್ತ ಸ್ವಾಗತಿಸಿದರು. 

ಶೈಕ್ಷಣಿಕ ವರ್ಷದ ಚಟುವಟಿಕೆಗಳ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ, ಪಾಲಕರಿಗೆ ಸಮನ್ವಯಾಧಿಕಾರಿಗಳಾದ ಡಾಽಽ ವ್ಹಿ. ಬಿ. ಗ್ರಾಮಪುರೋಹಿತ ರವರು ಮಾತನಾಡಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ನುರಿತ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಪಠ್ಯೇತರ ಚಟುವಟಿಕೆಗಳ ಜೊತೆಗೆ ಪಾಠಗಳನ್ನು ಯಾವಾಗಲು ಅಧ್ಯಯನ, ಪ್ರಾಮಾಣಿಕತೆ, ಪರಿಶ್ರಮ ಮುಂತಾದ ಗುಣಗಳ ಜೊತೆಗೆ ಉತ್ತಮ ಅಂಕಗಳನ್ನು ಪಡೆಯಬೇಕು ಎಂದು ಹೇಳಿದರು. ಮೊಬೈಲ್‌ನ ಬಳಕೆಯನ್ನು ಕಡಿಮೆ ಮಾಡಿ ಪುಸ್ತಕಗಳ ಬಳಕೆ ಹೆಚ್ಚು ಮಾಡಲು ಈ ಮೂಲಕ ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಪ್ರಕಾಶ ಎಸ್‌. ಉಡುಪಿಕರ ಅವರು ಮಾತನಾಡಿ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆದಾಗಲೇ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತದೆ. ನಿರಂತರವಾದ ಪರಿಶ್ರಮ, ಪ್ರಾಮಾಣಿಕತೆ ಜೊತೆಗೆ ಸಮರ್ಥ ವಿಷಯ ತಜ್ಞರಾದ ಉಪನ್ಯಾಸಕರ ಮಾರ್ಗದರ್ಶನವನ್ನು ಪಡೆದು ಸಂಸ್ಥೆಗೆ, ಪಾಲಕರಿಗೆ, ರಾಜ್ಯಕ್ಕೆ ಉತ್ತಮ ಆದರ್ಶಪ್ರಾಯರಾದ ಪ್ರಜೆಗಳಾಗಲು ವಿದ್ಯಾರ್ಥಿಗಳಿಗೆ ತಮ್ಮ ಪ್ರಭಾವಶಾಲಿಯಾದ ಮಾತುಗಳಿಂದ ಬೋಧಿಸಿದರು. ಉತ್ತಮ ಆಹಾರ, ವಿಚಾರ ಮತ್ತು ತಂದೆ-ತಾಯಿಗಳಿಗೆ ಗುರುಹಿರಿಯರಿಗೆ ಗೌರವ ನೀಡುತ್ತಾ ತಮ್ಮ ಅಧ್ಯಯನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು ಎಂದು ಪ್ರೀತಿಯಿಂದ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ರಾಜೇಶ ಡಿ. ದರಬಾರ ಅವರು ಮಾತನಾಡಿ ವಿದ್ಯಾರ್ಥಿಗಳು ಸಮಯಬದ್ಧವಾದ ಅಧ್ಯಯನದಿಂದ ಕೂಡಿದ ಚಟುವಟಿಕೆಗಳು ವಿದ್ಯಾರ್ಥಿಗಳ ಉನ್ನತ ಭವಿಷ್ಯಕ್ಕೆ ಹಾಗೂ ಶ್ರೇಷ್ಠವಾದ ಬದುಕಿಗೆ ಕಾರಣವಾಗುತ್ತದೆ. 

ವಿದ್ಯಾರ್ಥಿಗಳು ಯಾವಾಗಲು ಉತ್ತಮ ಭವಿಷ್ಯಕ್ಕಾಗಿ ನಿರಂತರ ಅಧ್ಯಯನ ಮಾಡಿ, ಶ್ರೇಷ್ಠವಾದ ವಿಚಾರಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ನಮ್ಮ ಕಾಲೇಜಿನ ಹಿಂದಿನ ವಿದ್ಯಾರ್ಥಿಗಳಂತೆ ಹೆಚ್ಚಿನ ಅಂಕಗಳನ್ನು ಪಡೆದು, ವಿದ್ಯಾರ್ಥಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಶುಭಹಾರೈಸುತ್ತ ತಮ್ಮ ವಿದ್ಯಾಸಂಸ್ಥೆಯಾದ ವಿದ್ಯಾವರ್ಧಕ ಸಂಘದ ವಿ. ಭ. ದರಬಾರ ಪದವಿ ಪೂರ್ವ ಕಾಲೇಜಿಗೆ ತಮ್ಮ ಮಕ್ಕಳನ್ನು ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳನ್ನಾಗಿ ಸೇರೆ​‍್ಡಗೊಳಿಸಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಪಠ್ಯ ಚಟುವಟಿಕೆಗಾಗಿ ಪರೀಕ್ಷೆ, ಅಸೈನ್‌ಮೆಂಟ್ ಮುಂತಾದ ಸಂಗತಿಗಳನ್ನು ವಿದ್ಯಾರ್ಥಿಗಳ ಜೊತೆಗೆ ಪಾಲಕರು ಭಾಗಿಯಾಗಿ ವಿದ್ಯಾರ್ಥಿಗಳ ಉತ್ತಮ ಅಂಕ ಪಡೆಯಲು ಪಾಲಕರು ತಮ್ಮ ಅಮೂಲ್ಯವಾದ ಸಮಯವನ್ನು ಮಕ್ಕಳೊಂದಿಗೆ ಹಂಚಿಕೊಳ್ಳಬೇಕೆಂದು ಈ ಮೂಲಕ ತಿಳಿಸಿದರು. 

ಉಪನ್ಯಾಸಕರಾದ ಶ್ರೀ ವೇದನಿಧಿಆಚಾರ್ಯ ಬಿ. ಕುಲಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಗಣಕವಿಜ್ಞಾನ ಉಪನ್ಯಾಸಕರಾದ ಶ್ರೀ ಜಿ. ಬಿ. ಕುಲಕರ್ಣಿ ಓಕಖಿಖಂ ಸಾಫ್ಟ್‌ವೇರ್ ಬಗ್ಗೆ ಪಾಲಕರಿಗೆ, ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಉಪನ್ಯಾಸಕಿಯರಾದ ಶ್ರೀಮತಿ ಆರ್‌. ಎಸ್‌. ಕ್ಷೀರಸಾಗರ ವಂದನಾರೆ​‍್ಣ ಮಾಡಿದರು. ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆಯನ್ನು ತಂದರು.