ಹಿರಿಯ ರಂಗಜೀವಿಗಳ ಅನುಭವ ಹಂಚಿಕೆಗೆ ‘ರಂಗಚಾವಡಿ’

  ಹಿರಿಯ ರಂಗಜೀವಿಗಳ ಅನುಭವ ಹಂಚಿಕೆಗೆ ‘ರಂಗಚಾವಡಿ’  ‘Rangachavadi’ for sharing the experiences of veteran theatre personalities

ಲೋಕದರ್ಶನ ವರದಿ 

ಬಳ್ಳಾರಿ 01 : ರಂಗಭೂಮಿಯಲ್ಲಿ ನಾಲ್ಕು-ಐದು ದಶಕಗಳ ಕಾಲ ಸೇವೆ ಸಲ್ಲಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಹಿರಿಯ ರಂಗಜೀವಿಗಳ ಅನುಭವವನ್ನು ಇಂದಿನ ಪೀಳಿಗೆಯ ರಂಗಾಸಕ್ತರಿಗೆ ತಲುಪಿಸುವ ಉದ್ದೇಶದಿಂದ ‘ರಂಗಚಾವಡಿ’ ರಂಗತೋರಣ ಕಾರ್ಯಕ್ರಮ ಆಯೋಜಿಸಲಾಗಿದೆ.  3ರಂದು ಬೆಳಿಗ್ಗೆ 11 ಗಂಟೆಗೆ ಬಳ್ಳಾರಿಯ ಡಾ. ರಾಜಕುಮಾರ ರಸ್ತೆಯಲ್ಲಿರುವ ಕಾಮಧೇನು ಸ್ಟೀಲ್ಸ್‌ ಹಿಂಭಾಗದ ಪಂಚಜನ್ಯ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.  

ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿಗಳಾದ ಕಣಪ್ಪ ಹುಲುಗಪ್ಪ ಕಟ್ಟಿಮನಿ ಹಾಗೂ ತಮಿಳುನಾಡಿನ ರಂಗ ಕಲಾವಿದ ಅಂಬುರಾಜ್ ಅವರು ತಮ್ಮ ರಂಗಾನುಭವ ಹಂಚಿಕೊಳ್ಳಲಿದ್ದಾರೆ. ಸರಳಾದೇವಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ದಸ್ತಗಿರಿಸಾಬ್ ದಿನ್ನಿ ಸಂವಾದ ನಡೆಸಲಿದ್ದಾರೆ.  

ಹಿರಿಯ ರಂಗಕಲಾವಿದೆ ವೀಣಾ ಆದವಾನಿ ಅವರಿಂದ ರಂಗಗೀತೆಗಳ ಗಾಯನ ನಡೆಯಲಿದ್ದು, ಮುದುಟನೂರು ಎಚ್‌.ಟಿ.ಪೆಪ್ಪೆಸ್ವಾಮಿ ಹಾರ್ಮೋನಿಯಂ ಹಾಗೂ ಕುರುಗೋಡಿ ಎಂ.ವೀರೇಶ್ ತಬಲಾ ಸಾಥ್ ನೀಡಲಿದ್ದಾರೆ ಎಂದು ರಂಗತೋರಣ ಸಂಸ್ಥೆಯ ಅಧ್ಯಕ್ಷ ಪ್ರೊ.ಆರ್‌. ಭೀಮಸೇನ ಹಾಗೂ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ತಿಳಿಸಿದ್ದಾರೆ.