ಪವಿತ್ರಸ್ಥಳ ಶಿಖರ್ಜಿ ಪ್ರವಾಸಿ ತಾಣ: ಜೈನರು ಆಕ್ಷೇಪ
ಲೋಕದರ್ಶನ ವರದಿ
ಹೂವಿನ ಹಡಗಲಿ 07: ಜಾರ್ಖಂಡ್ ರಾಜ್ಯ ಸರ್ಕಾರ ಜೈನರ ಪವಿತ್ರಸ್ಥಳ ಶಿಖಜರ್ಿಯನ್ನು ಪ್ರವಾಸಿ ತಾಣ ಮಾಡುವ ಉದ್ದೇಶಕ್ಕೆ ಅಲ್ಪಸಂಖ್ಯಾತ ಜೈನ್ ಭಾವನೆಗಳಿಗೆ ಧಕ್ಕೆಯಾಗಿದೆ. ಜೈನರ ಮೇಲಿನ ದಬ್ಬಾಳಿಕೆಯನ್ನು ಕೂಡಲೇ ನಿಲ್ಲಿಸಬೇಕೆಂದು ತಹಶೀಲ್ದಾರ ಕೆ.ಶರಣಮ್ಮ ಅವರಿಗೆ ಇಲ್ಲಿನ 1008 ಪಾಶ್ರ್ವನಾಥ ಸ್ವಾಮಿ ಜೈನ ದಿಗಂಬರ ಚಾರಿಟೆಬಲ್ ಟ್ರಸ್ಟ್ ಪದಾಧಿಕಾರಿಗಳು ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಕುರಿತು ಹೇಳಿಕೆಯಲ್ಲಿ ಪವಿತ್ರ ಸ್ಥಳ ಸಮ್ಮೇದ ಶಿಖರ್ಜಿಯನ್ನು ಅಲ್ಲಿನ ಜಾರ್ಖಂಡ್ ರಾಜ್ಯ ಸಕರ್ಾರ ಪ್ರವಾಸಿ ತಾಣ ಮಾಡಲು ಆದೇಶಿಸಿದೆ. ಜೈನ್ ಸಂಪ್ರದಾಯದಂತೆ ಈ ಕ್ಷೇತ್ರವು ಭೂತಕಾಲ-ವರ್ತಮಾನ ಮತ್ತು ಭವಿಷತ್ ಕಾಲದ ಎಲ್ಲಾ ತೀರ್ಥಂಕರು ಸಾಧನೆ ಮಾಡಿ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳುವ ಶಾಶ್ವತ ಸಿದ್ದ ಕ್ಷೇತ್ರವಾಗಿದೆ.ವರ್ತಮಾನದ ಕಾಲದ 24 ತೀರ್ಥಂಕರು ಪೈಕಿ 20ಜನ ತೀರ್ಥಂಕರು ಈ ಬೆಟ್ಟದ ಮೇಲೆ ಪುರಷಾರ್ಥ ಮಾಡಿ ಸಿದ್ದ ಪದವಿ ಪ್ರಾಪ್ತಿ ಮಾಡಿರುತ್ತಾರೆ, ದಿಗಂಬರ ಮತ್ತು ಶ್ವೇತಾಂಬರ ಮಂಥದ ಮುನಿಗಳು,ಆರ್ಯಕೆಯರು, ಕ್ಷುಲ್ಲಕರು ಮತ್ತು ಐಲಕರು ಕೂಡಾ ಇಂದಿಗೂ ಅಲ್ಲಿನ ದರ್ಶನ ಮಾಡಿ ಜನ್ಮ ಸಾರ್ಥಕ ಮಾಡುತ್ತಿದ್ದಾರೆ.
9ಕಿ.ಮೀ.ನಡೆದು ಬೆಟ್ಟವನ್ನು ಏರಿ ಕಿ.ಮೀ.ಪ್ರದೇಶದಲ್ಲಿರುವ ಚರಣ 9ಪಾದುಕೆಗಳನ್ನು ದರ್ಶನ ಮಾಡಿ 9ಕಿ.ಮೀ.ಇಳಿದು ಒಂದೇ ದಿನದಲ್ಲಿ ತೀರ್ಥ ಕ್ಷೇತ್ರದ ದರ್ಶನವನ್ನು ಕಾಲ್ನಡಿಗೆಯಿಂದ ಮಾಡಬೇಕಿದೆ. ಕೂಡಲೇ ಜಾರ್ಖಂಡ್ ಸರ್ಕಾರ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು. ಜೈನ ದಿಗಂಬರ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಹೆಚ್.ಎಸ್.ಪ್ರಶಾಂತ, ಉಪಾಧ್ಯಕ್ಷ ವಿಜಯಕುಮಾರ ಜೈನ್, ಕಾರ್ಯದರ್ಶಿ ಪದ್ಮರಾಜ ಜೈನ್, ಖಜಾಂಚಿ ಭಾಗೇಶ ಜೈನ, ಸಂತೋಷ ಜೈನ್ ,ಮಹಿಳಾ ಸದಸ್ಯರು ಇದ್ದರು