ಮಡಿದ ವೀರ ಯೋಧರಿಗೆ ಶ್ರದ್ದಾಂಜಲಿ
ಲೋಕದರ್ಶನ ವರದಿ
ಹೂವಿನಹಡಗಲಿ15: ದೇಶದ ರಕ್ಷಣೆಗೆ ಪ್ರಾಣ ಪಣಕ್ಕಿಟ್ಟು ಪುಲ್ವಾಮಾ ದಾಳಿಯಲ್ಲಿ ಹೋರಾಟ ಮಾಡಿದ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ದಾಂಜಲಿಯನ್ನು ತಾಲೂಕಿನ ಹೊಳಗುಂದಿ ಗ್ರಾಮದ ತೇರು ಬಸ್ನಿಲ್ದಾಣದ ವೃತ್ತದಲ್ಲಿ ಮಂಗಳವಾರ ರಾತ್ರಿ 9.30ಕ್ಕೆ ಯುವಕರು ಮೇಣದ ಬತ್ತಿ ಬೆಳಗಿಸುವ ಮೂಲಕ ಶಾಂತಿ ಕೋರಿ ಶ್ರದ್ದಾಂಜಲಿಯನ್ನು ಸಲ್ಲಿಸಿದರು.
ಗ್ರಾಮದ ಯುವಕರಾದ ಗಡ್ಡದ ಕೊಟ್ರೇಶ, ಎಂ.ಎಂ.ಶಿವಯೋಗಿ,ಎನ್.ಪ್ರಶಾಂತ,ಶಿವಪೂಜೆ ರುದ್ರೇಶ,ಬಸವನಗೌಡಿ, ಹೆಚ್.ವಿನಾಯಕ, ಎಜಿ.ವೀರಭದ್ರ,ಚಾವಡಿ ಸುದೀಪ,ಹೆ.ಚ್.ಅಶೋಕ,ವೀರೇಶ,ಕೆ.ಗುರು ಇದ್ದರು.