ಹೂವಿನ ಹಡಗಲಿ

ಅಂಬಲಿ ಹಳಸೀತು ಕಂಬಳಿ ಬೀಸಿತಲೆ ಪರಾಕ್... ಲಕ್ಷೊಪಲಕ್ಷ ಭಕ್ತಾಧಿಕಗಳ ನಡುವೆ ಮೈಲಾರದಲ್ಲಿ ಕಾರ್ಣಿಕೋತ್ಸವ: ರಾಜ್ಯ, ಹೊರ ರಾಜ್ಯಗಳಿಂದ ಹರಿದು ಬಂದ ಭಕ್ತಸಾಗರ

ಅಂಬಲಿ ಹಳಸೀತು ಕಂಬಳಿ ಬೀಸಿತಲೆ ಪರಾಕ್...  ಲಕ್ಷೊಪಲಕ್ಷ ಭಕ್ತಾಧಿಕಗಳ ನಡುವೆ ಮೈಲಾರದಲ್ಲಿ ಕಾರ್ಣಿಕೋತ್ಸವ:  ರಾಜ್ಯ, ಹೊರ ರಾಜ್ಯಗಳಿಂದ ಹರಿದು ಬಂದ ಭಕ್ತಸಾಗರ

ಲೋಕದರ್ಶನ ವರದಿ

ಹೂವಿನಹಡಗಲಿ :ಫೆ.07-ಐತಿಹಾಸಿಕ ಸುಪ್ರಸಿದ್ದ ಶ್ರೀಮೈಲಾರಲಿಂಗೇಶ್ವರ ಸ್ವಾಮಿಯ ಈ ವರ್ಷದ ಕಾರ್ಣಿಕ ಅಂಬಲಿ ಹಳಸೀತು ಕಂಬಳಿ ಬೀಸಿತಲೇ ಪರಾಕ್ ಎಂಬುದು ಈ ಸಾಲಿನ ಐತಿಹಾಸಿಕ ಸುಪ್ರಸಿದ್ದ ಶ್ರೀಮೈಲಾರಲಿಂಗೇಶ್ವರ ಕಾಣರ್ೀಕ ಉಕ್ತಿಯಾಗಿದೆ. ಮಂಗಳವಾರ ನಾಡಿನಾದ್ಯಂತ ಆಗಮಿಸಿದ್ದ ಅಸಂಖ್ಯಾತ ಭಕ್ತ ಸಮೂಹದ ನಡುವೆ ಶ್ರೀಮೈಲಾರಲಿಂಗೇಶ್ವರ ಸ್ವಾಮಿಯ ಭವಿಷ್ಯವಾಣಿ ಮೊಳಗಿತು.

ರಥ ಸಪ್ತಮಿ ದಿನದಿಂದ ಕಾರ್ಣಿಕೋತ್ಸವ ದಿನದ ಒಟ್ಟು 11ದಿನಗಳ ಉಪವಾದ ವೃತ ಆಚರಿಸದ ಗೊರವಪ್ಪ ಹಾಗೂ ದೇವಸ್ಥಾನ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅಶ್ವರೂಢವಾಗಿ ಡೆಂಕನ ಮರಡಿಗೆ ಆಗಮಿಸುತ್ತಿದ್ದಂತೆ ಏಳು ಕೋಟೆ ಚಹಾಂಗಮಲೋ ನಿನಾದ ಹಾಗೂ ಭಕ್ತರ ಹಷೋದ್ಗಾರ ಮುಗಿಲು ಮುಟ್ಟಿತು. ನಂತರ ಗೊರವಪ್ಪನಿಗೆ ಭಂಡಾರದಿಂದ ಆಶೀವರ್ಾದ ಮಾಡಿ ಅನುಮತಿ ನೀಡುತ್ತಾರೆ.

ಮಂಗಳವಾರ ಸಂಜೆ 5-30ಕ್ಕೆ ನಡೆದ ಕಾರ್ಣಿಕ ಕೇಳಲು 10ಲಕ್ಷಕ್ಕೂ ಹೆಚ್ಚು ಜನ ಸಮೂಹದಲ್ಲಿ ಧರ್ಮಕರ್ತರಿಂದ ಆಶೀರ್ವಾದ ಪಡೆದ ಗೊರವಪ್ಪ ಸುಮಾರು 15ಅಡಿ ಎತ್ತರವಿರುವ ಬಿಲ್ಲನ್ನು ಏರುತ್ತಾರೆ. ಇತರ ಗೊರವರು ಬಿಲ್ಲನ್ನು ನೆಟ್ಟಿಗೆ ಹಿಡಿದು ನಿಲ್ಲುವರು.ಏರಿದ ಗೊರವಪ್ಪ ಆಕಾಶದತ್ತ ಕಣ್ಣು ಹಾಯಿಸಿ ಭಕ್ತರಿಗೆ ಸದ್ದಲೇ ಎಂದು ಎಚ್ಚರಿಸಿದಾಗ ತಕ್ಷಣ ನೆರೆದಿದ್ದ ಲಕ್ಷಾಂತರ ಭಕ್ತರು ಮೌನವಾಗಿ ಗೊರವಪ್ಪ ಕಡೆ ಕಿವಿಗೊಟ್ಟು ದೃಷ್ಟಿ ಬೀರುವರು.ಆಗ ಗೊರವಪ್ಪ ಒಂದು ಚಿಕ್ಕ ವಾಕ್ಯವನ್ನು  ಅಂಬಲಿ ಹಳಸೀತು ಕಂಬಳಿ ಬೀಸಿತಲೇ ಪರಾಕ್ ಹೇಳಿ ಕೆಳಕ್ಕೆ ಬೀಳುವಾಗ ನೆರೆದಿದ್ದ ಗೊರವ ಸಮೂಹ ಅವರನ್ನು ಕಂಬಳಿಯಲ್ಲಿ ಹಿಡಿಯಿತು.

ಕಾರ್ಣಿಕ ಉಕ್ತಿಯನ್ನು ನಾಡಿನ ಜನತೆ ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದುದು ಕಂಡು ಬಂತು. ಗೊರವಪ್ಪ ಬಾಯಿಂದ ಕಾರ್ಣಿ ಕ ಹೊರ ಬಂದ ತಕ್ಷಣ ಅಲ್ಲಿ ಸೇರಿದ್ದ ಲಕ್ಷಾಂತರ ಭಕ್ತರು ಗೊರವಪ್ಪ ಹೇಳಿದ ಚಿಕ್ಕ ವಾಕ್ಯವನ್ನು ಭಕ್ತರು ನಾನಾ ರೀತಿಯಲ್ಲಿ ಅರ್ಥ್ಯಸುವರು. ಇನ್ನು ಬರುವ ದಿನಗಳಲ್ಲಿ ರೈತ ಸಮುದಾಯಕ್ಕೆ ಸಮೃದ್ದಿ ಮಳೆ-ಬೆಳೆಯಾಗಲಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ಲೇಷಿಸುತ್ತಿದ್ದರು. ಕಾರ್ಣಿಕ ಶುಭದಾಯಕವಾಗಿದೆ ಎಂದು ಚರ್ಚೆಗಳು ಅಲ್ಲಲ್ಲಿ ನಡೆದವು.

ಲಕ್ಷೊಪಲಕ್ಷ ಭಕ್ತಾಧಿಕಗಳ ನಡುವೆ ಸಾಂಪ್ರಾದಾಯಿಕವಾಗಿ ನಡೆದ ಕಾರ್ಣಿಕೋತ್ಸವದಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಕ್ತಸಾಗರವೇ ಹರಿದುಬಂದಿತ್ತು.ಪ್ರತಿವರ್ಷಕ್ಕಿಂತ ಈ ವರ್ಷ ಹೆಚ್ಚು ಜನಸಂದಣೆ ಸೇರಿದ್ದರಿಂದ ಕಾರ್ನಿ ಕೋತ್ಸವ ಸ್ಥಳ ಡೆಂಕನಮರಡಿ ಜನರಿಂದ ಕಿಕ್ಕಿರಿದು ತುಂಬಿತ್ತು.ಈ ಉತ್ಸವ ಯಾವಾಗ ಆರಂಭವಾಯಿತು ಎಂಬುದಕ್ಕೆ ಗಟ್ಟಿ ಆಧಾರವಿಲ್ಲ. ಆದರೂ ಆಂಗ್ಲರ ಆಳ್ವಿಕೆಯಲ್ಲಿ ಅವರ ಪ್ರಕಾರ 19ನೇ ಶತಮಾನದಿಂದ ದಾಖಲಿಸುತ್ತಾ ಬಂದಿರುವುದಾಗಿ ಮಾಹಿತಿ ದೊರಕುತ್ತದೆ.2023ಕ್ಕೆ 123 ಕಾರ್ಣಿಕಗಳು ನಡೆದಿವೆ. 

 ಕಾಗಿನೆಲೆ ಕನಕ ಗುರುಪೀಠದ ಶ್ರೀನಿರಂಜನಾಂದಪುರಿ ಸ್ವಾಮಿಜಿ, ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ಮಾಜಿ ಸಚಿವ ಬಸವರಾಜ ಶಿವಣ್ಣನವರು,ಮಾಜಿ ಶಾಸಕ ಬಿ.ಚಂದ್ರನಾಯ್ಕ, ವಿಜಯ ನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ, ಡಿಐಜಿ ಲೋಕೇಶ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಲ್.ಹರಿಬಾಬು, ಹರಪನಹಳ್ಳಿ ಸಹಾಯಕ ಆಯುಕ್ತ ಟಿ.ವಿ.ಪ್ರಕಾಶ್, ಡಿ.ವೈ.ಎಸ್.ಪಿ. ಹಾಲಮೂರ್ತಿರಾವ್, ಜಿ.ಪಂ.ಸಿಇಒ ಸದಾಶಿವಪ್ಪ, ಸಿಪಿಐ ಸುಧೀರ ಬೆಂಕಿ, ತಾ.ಪಂ.ಇಒ ಎಸ್.ಎಸ್.ಪ್ರಕಾಶ್, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಂ.ಎಚ್.ಪ್ರಕಾಶರಾವ್,ತಹಶೀಲ್ದಾರ ಕೆ.ಶರಣಮ್ಮ, ದೇಗುಲ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಪ್ಪ, ಬಿಇಒ ಎಸ್.ಎನ್.ಹಳ್ಳಿಗುಡಿ, ಪುರಸಭೆ ಅಧ್ಯಕ್ಷ ಜ್ಯೋತಿಮಲ್ಲಣ್ಣ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಸವನಗೌಡ ಪಾಟೀಲ, ಅಟವಾಳಗಿ ಕೊಟ್ರೇಶ, ಬಿ.ಹನುಮಂತಪ್ಪ, ಗ್ರಾ.ಪಂ.ಅಧ್ಯಕ್ಷ ನಾಗಪ್ಪ ಇದ್ದರು 

ಸುದ್ದಿ ಓದಿ