ಹಡಗಲಿಯಲ್ಲಿ ರಾಜ್ಯ ಮಟ್ಟದ ಮುಕ್ತ ಕ್ರಿಕೆಟ್ ಟೂರ್ನಮೆಂಟ್ ಗೆ ಚಾಲನೆ
ಲೋಕದರ್ಶನ ವರದಿ
ಹೂವಿನಹಡಗಲಿ : ಕ್ರೀಡೆಗಳು ,ಸಾಂಸ್ಕೃತಿಕ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್, ಎಂ.ಪಿ.ರವೀಂದ್ರ ರವರು ಆಯೋಜಿಸುತ್ತಿದ್ದರು ಇದೀಗ ಅವರ ಕನಸ್ಸು ನಾನು ಕ್ರೀಡೆ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಹಕಾರ ಕೊಡುವುದಾಗಿ ಸಫಾಯಿ ಕರ್ಮಚಾರಿ ಅಭಿವೃದ್ದಿ ಮಂಡಳಿ ನಿಗಮದ ಮಾಜಿ ಅಧ್ಯಕ್ಷ ಎಚ್.ಹನುಮಂತಪ್ಪ ಹೇಳಿದರು.
ಪಟ್ಟಣದ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ಹೆಚ್.ಹನುಮಂತಪ್ಪನವರ ಅಅಭಿಮಾನಿ ಬಳಗ, ಅಪ್ಪು ಹಾಗೂ ಕೆ.ಕೆ.ಆರ್. ಕ್ರಿಕೆಟರ್ಸ್ ವತಿಯಿಂದ ಹಡಗಲಿಯಲ್ಲಿ ದ್ವಿತೀಯ ಬಾರಿಗೆ ರಾಜ್ಯಮಟ್ಟದ ಮುಕ್ತ ಮತ್ತು ಆಹ್ವಾನಿತ (ಟೆನಿಸ್ ಬಾಲ್) ಟೂನರ್ಿಮೆಂಟ್ಗೆ ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದ ಅವರು ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ,ಸೋಲು-ಗೆಲುವು ಮುಖ್ಯವಲ್ಲ ಜತೆಗೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ನೋಡಿ ಕೊಳ್ಳಿ ಎಂದರು.
ಜಿ.ಪಂ.ಮಾಜಿ ಸದಸ್ಯ ಪಿ.ವಿಜಯಕುಮಾರ, ಬಿಜೆಪಿ ಮಂಡಲ ಅಧ್ಯಕ್ಷ ಸಂಜೀವರೆಡ್ಡಿ,ಈಟಿ.ಲಿಂಗರಾಜ,ರಾಮನಾಯ್ಕ,ವಿಜಯಲಕ್ಷ್ಮಿ ಮಾತನಾಡಿದರು. ಶಿವರಾಜ ಬಾವಿಹಳ್ಳಿ, ದೂದನಾಯ್ಕ, ಪಿ.ನಿಂಗಪ್ಪ, ಅಪ್ಪು ನಾಯಕ ರಾಘವೇಂದ್ರ, ಕೆಕೆಆರ್ ನಾಯಕ ಖಲಂದರ್, ಪುರಸಭೆ ಸದಸ್ಯ ಹನುಮಂತಪ್ಪ, ಮಾಜಿ ಉಪಾಧ್ಯಕ್ಷ ವಿಲ್ಸನ್ ಸ್ವಾಮಿ, ಪರಶುರಾಮ ಐನಳ್ಳಿ ಭಾಗ್ಯಮ್ಮ ಇದ್ದರು