ಕಾವ್ಯ ಸಮಕಾಲಿನ ಸಮಸ್ಯೆಗಳಿಗೆ ಧ್ವನಿಯಾಗಲಿ: ಡಾ.ಮಂಜುನಾಥ ಹಾಲಸ್ವಾಮೀಜಿ
ಹೂವಿನಹಡಗಲಿಯಲ್ಲಿ ಬೆಳದಿಂಗಳ ಕವಿಗೋಷ್ಠಿ ಕಾರ್ಯಕ್ರಮ
ಲೋಕದರ್ಶನ ವರದಿ
ಹೂವಿನಹಡಗಲಿ08: ಕಾವ್ಯ ಸಮಕಾಲಿನ ಸಮಸ್ಯೆಗಳಿಗೆ ಧ್ವನಿಯಾದಗ ಮಾತ್ರ ಸಾಮಾಜಿಕ ಬದುಕು ಹಸನಾಗಲು ಸಾಧ್ಯ ಎಂದು ಸ.ಶಿ.ಡಾ.ಮಂಜುನಾಥ ಹಾಲಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಎಂ.ಚನ್ನವೀರಸ್ವಾಮಿ ಇವರ ಮನೆಯಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಆಯೋಜಿಸಿದ್ದ ಬೆಳದಿಂಗಳ ಕವಿಗೋಷ್ಠಿ ಕಾವ್ಯ ಪೂಣರ್ಿಮಾದಲ್ಲಿ ಭಾಗವಹಿಸಿ ಮಾತನಾಡಿ ಕಾರ್ಯವೈಖರಿಯನ್ನು ಪ್ರಶ್ನಿಸುವಂತಹ ಕಾವ್ಯವನ್ನು ಸೃಷ್ಟಿಸುವ ಜವಾಬ್ದಾರಿ ಸಾಹಿತಿಗಿರಬೇಕು ಎಂದರು.
ರೈತರ ಕುರಿತ ಕವನ ವಾಚಿಸುವ ಮೂಲಕ ಕವಿಗೋಷ್ಠಿಗೆ ಚಾಲನೆ ನೀಡಿದರು.ಕಸಾಪ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ ಮಾತನಾಡಿ ಬೆಳದಿಂಗಳ ಕವಿಗೋಷ್ಠಿಯಲ್ಲಿ ಚರ್ಚೆ ,ಸಂವಾದಗಳು ಹೊಸ ಸಾಹಿತ್ಯ ಸೃಷ್ಟಿಗೆ ಪ್ರೇರಣೆ ನೀಡಲಿ ಎಂದರು.ಕವಿಗಳಾದ ಸಹದೇವಪ್ಪ ಯಲ್ಲಪ್ಪ ನಿಗದಿ-ಜೀವಜಲ ಬೆಳದಿಂಗಳು, ಶಂಕರ ಬೆಟಗೇರಿ ಸಾರಿ ಸಾರಿ ಹೇಳು ನಾನಾ ನಾನೇ ಎಂದು, ನಾಗಮಂಜುಳ ಜೈನ್ ಗೊಮ್ಮಟೇಶ್ವರ ಹಿನ್ನಲೆಯಲ್ಲಿ ಚಂದಿರ ಅಜಯ,ಹುಗಲೂರು ಗೋಣಗುವುದೊಂದುಳಿದ ಇನ್ನೇನಿದೆ,ಕೆ.ಸತೀಶ ಬದುಕು ಅರ್ಥವಾಗುವುದಾದರೆ, ಅರ್ಚನಾ ಸಂವಿಧಾನ,ರಾಮಪ್ಪ ಕೋಟಿಹಾಳ್ ಅಪ್ಪ, ಪ್ರಕಾಶ್ ಮಲ್ಕಿಒಡೆಯರ್ ಗೂಡಾರ್ಥ, ಎಲ್.ಖಾದರ್ ಭಾಷಾ ಸಾಕ್ಷಾತ್ಕಾರ ಗಜಲ,ಪದ್ಮರಾಜ ಜೈನ್ ಪ್ರಪಂಚ, ಪಿ.ಎಂ.ಕೊಟ್ರಸ್ವಾಮಿ ಕೌದಿ ಹೊಲಿಯುವುದೆಂದರೆ,ಸಿಎನ್.ಸೋಮೇಶಪ್ಪ ವನದೇವಿ, ದೂಪದ ಗುರು ಸಂಕಟರಾತ್ರಿ, ಅಶೋಕ ಅರ್ಕಸಾಲಿ ಶೃಂಗಾರ ಕುರಿತು ಕವನಗಳನ್ನು ವಾಚಿಸಿದರು. ಕೆಲ ಕವನಗಳು ಮೆಚ್ಚುಗೆ ಪಾತ್ರವಾದವು.
ಸಾಹಿತಿ ತೋ.ಮ.ಶಂಕ್ರಯ್ಯ ಲೇಖನಿ ಸೋಲುವುದೆಂದರೆ ಕವನಗಳನ್ನು ವಾಚಿಸಿ ಇಂತಹ ಅರ್ಥಪೂರ್ಣ ಸರಳ,ಬೆಳದಿಂಗಳ ಕವಿಗೋಷ್ಠಿ ಸಂಘಟಿಸಿರುವುದು ಶ್ಲಾಘನೀಯ ಎಂದರು. ಎಲ್.ಮಧುನಾಯ್ಕ ಅಧ್ಯಕ್ಷತೆ ವಹಿಸಿ ಕವನ ವಾಚಿಸಿದರು. ಎ.ಕೊಟ್ರೇಶ, ಸಕರ್ಾರಿ ನೌಕರರ ಸಂಗದ ಅಧ್ಯಕ್ಷ ಎಂ.ಪಿ.ಎಂ.ಅಶೋಕ, ಎ.ಕೊಟ್ರಗೌಡ, ಮಾಜಿ ಕಸಾಪ ಅಧ್ಯಕ್ಷ ಹೆಚ್.ಜಿ.ಪಾಟೀಲ, ಎಂ.ಮಧುಕರ, ಹೊಂಬಾಳಿ ಕೊಟ್ರೇಶ, ಮಂಜುನಾಥ ಪಾಟೀಲ ಸೇರಿದಂತೆ ಹಲವಾರು ಸಾಹಿತ್ಯಾಸಕ್ತರು ,ಸಾಹಿತಿಗಳು ಇದ್ದರು. ಎಂ.ಚನ್ನವೀರಸ್ವಾಮಿ ಸ್ವಾಗತಿಸಿದರು. ಶಿಕ್ಷಕ ಎ.ಉಮಾಪತಿ ನಿರ್ವಹಿಸಿದರು